ಕೊಹ್ಲಿ, ರೋಹಿತ್‌, ಜಡೇಜಾ ಅಲ್ಲವೇ ಅಲ್ಲ... ಇವರೇ ನೋಡಿ ಮಾಜಿ ಕ್ಯಾಪ್ಟನ್‌ ಕೂಲ್ ಧೋನಿಯ ನೆಚ್ಚಿನ ಆಟಗಾರ - : "ಬುಮ್ರಾ ಇರುವುದರಿಂದ ನನ್ನ ನೆಚ್ಚಿನ ಬೌಲರ್ ಅನ್ನು ಆಯ್ಕೆ ಮಾಡುವುದು ಸುಲಭ. ನಮ್ಮಲ್ಲಿ ಅನೇಕ ಉತ್ತಮ ಬ್ಯಾಟ್ಸ್‌ಮನ್‌ʼಗಳು ಇರುವುದರಿಂದ ಬ್ಯಾಟ್ಸ್‌ಮನ್ ಅನ್ನು ಆಯ್ಕೆ ಮಾಡುವುದು ಕಷ್ಟ. ಆದರೆ ಇದರ ಅರ್ಥ ಬೌಲರ್‌ʼಗಳು ಉತ್ತಮವಾಗಿಲ್ಲ ಎಂದಲ್ಲ" ಎಂದು ಹೇಳಿದ್ದಾರೆ. - :ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಪ್ರಸ್ತುತ ನೆಚ್ಚಿನ ಆಟಗಾರರು ಯಾರೆಂಬುದನ್ನು ರಿವೀಲ್‌ ಮಾಡಿದ್ದಾರೆ. ಭಾರತದ ಚಾಂಪಿಯನ್ ಜಸ್ಪ್ರೀತ್ ಬುಮ್ರಾ ತನ್ನ ನೆಚ್ಚಿನ ಬೌಲರ್‌ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ನೆಚ್ಚಿನ ಬ್ಯಾಟ್ಸ್‌ʼಮನ್‌ ಆಯ್ಕೆ ಮಾಡಲು ಕಷ್ಟ ಪಟ್ಟ ಧೋನಿ, ಇದು ಕಠಿಣ ಎಂದು ಹೇಳಿದ್ದಾರೆ. ಇದನ್ನೂ ಓದಿ: "ಬುಮ್ರಾ ಇರುವುದರಿಂದ ನನ್ನ ನೆಚ್ಚಿನ ಬೌಲರ್ ಅನ್ನು ಆಯ್ಕೆ ಮಾಡುವುದು ಸುಲಭ. ನಮ್ಮಲ್ಲಿ ಅನೇಕ ಉತ್ತಮ ಬ್ಯಾಟ್ಸ್‌ಮನ್‌ʼಗಳು ಇರುವುದರಿಂದ ಬ್ಯಾಟ್ಸ್‌ಮನ್ ಅನ್ನು ಆಯ್ಕೆ ಮಾಡುವುದು ಕಷ್ಟ. ಆದರೆ ಇದರ ಅರ್ಥ ಬೌಲರ್‌ʼಗಳು ಉತ್ತಮವಾಗಿಲ್ಲ ಎಂದಲ್ಲ" ಎಂದು ಹೇಳಿದ್ದಾರೆ. "ಬ್ಯಾಟಿಂಗ್ ಮಾಡುವವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟ, ಏಕೆಂದರೆ ನಾನು ಬ್ಯಾಟಿಂಗ್ ಮಾಡುವವರನ್ನು ನೋಡುತ್ತೇನೆ, ಅತ್ಯುತ್ತಮವಾಗಿ ಕಾಣುತ್ತಾರೆ. ಒಬ್ಬರಿಗಿಂತ ಒಬ್ಬರು ಅತ್ಯುತ್ತಮರೇ" ಎಂದು ಧೋನಿ ಹೇಳಿದರು. ಇದನ್ನೂ ಓದಿ: ಇನ್ನು ಜಸ್ಪ್ರೀತ್ ಬುಮ್ರಾ, ಎಂಎಸ್ ಧೋನಿ ನಾಯಕತ್ವದಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅಂದಿನಿಂದ ಗಮನಾರ್ಹ ಆಟವನ್ನು ಆಡಿರುವ ಬುಮ್ರಾ, ಜೂನ್ 2024ರಲ್ಲಿ ನಡೆದ T20 ವಿಶ್ವಕಪ್‌ʼನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...