ನಿವೃತ್ತಿ ಹಿಂಪಡೆಯಲಿದ್ದಾರೆ ರೋಹಿತ್‌ ಶರ್ಮಾ!? ಅಚ್ಚರಿಯ ಹೇಳಿಕೆ ನೀಡಿದ ಹಿಟ್ ಮ್ಯಾನ್‌ : ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಆಡಲು ಆಗಮಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. :ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಬಾರ್ಬಡೋಸ್‌ʼನಲ್ಲಿ ಟೀಂ ಇಂಡಿಯಾ 2024ರ ಟಿ 20 ವಿಶ್ವಕಪ್ ಚಾಂಪಿಯನ್ಶಿಪ್‌ ಗೆಲ್ಲುತ್ತಿದ್ದಂತೆ ತನ್ನ ನಿವೃತ್ತಿಯನ್ನು ಹಿಟ್‌ ಮ್ಯಾನ್‌ ಘೋಷಿಸಿದ್ದರು. ಇದನ್ನೂ ಓದಿ: ಇನ್ನು ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಆಡಲು ಆಗಮಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಅವರ ಹೇಳಿಕೆ ಕೇಳುತ್ತಿದ್ದಂತೆ, ಶಾಹಿದ್ ಅಫ್ರಿದಿಯಂತೆ ರೋಹಿತ್ ನಿವೃತ್ತಿಯಿಂದ ಹಿಂತಿರುಗುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ರೋಹಿತ್, "ಮೊದಲಿನಂತೆ ಟಿ 20ಗಳಿಗೆ ನನಗೆ ವಿಶ್ರಾಂತಿ ನೀಡಲಾಗಿದೆ. ದೊಡ್ಡ ಪಂದ್ಯಾವಳಿ ಬರಲಿದೆ ಮತ್ತು ನಾವು ಮತ್ತೆ ಟಿ 20 ಗಳಿಗೆ ಸಿದ್ಧರಾಗಿರಬೇಕು ಎಂದು ನಾನು ಭಾವಿಸಿದೆ. ನನಗೆ ಈಗಲೂ ಹಾಗೆ ಅನ್ನಿಸುತ್ತಿದೆ. ಹಾಗಾಗಿ ನಾನು ಸಂಪೂರ್ಣವಾಗಿ ಸ್ವರೂಪದಿಂದ ಹೊರಗಿದ್ದೇನೆ ಎಂದು ನಾನು ಭಾವಿಸುವುದಿಲ್ಲ" ಎಂದಿದ್ದಾರೆ. ಅಷ್ಟಕ್ಕೂ ರೋಹಿತ್ ಇದನ್ನೆಲ್ಲಾ ತಮಾಷೆಯಾಗಿ ಹೇಳಿದ್ದಾರೆ. ಆದರೆ ರೋಹಿತ್ ಇನ್ನೂ ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್‌ʼನಿಂದ ಸಂಪೂರ್ಣವಾಗಿ ನಿವೃತ್ತಿ ಪಡೆದಿಲ್ಲ ಎಂದು ಸದ್ಯ ಈ ಹೇಳಿಕೆ ಕೇಳಿದ ಅಭಿಮಾನಿಗಳು ಭಾವಿಸುತ್ತಿದ್ದಾರೆ. ಇದನ್ನೂ ಓದಿ: ಒಂದು ವೇಳೆ ರೋಹಿತ್ ನಿವೃತ್ತಿಯಿಂದ ಹಿಂತಿರುಗಿ ಮುಂದಿನ ಟಿ20 ವಿಶ್ವಕಪ್ ಆಡಲು ನಿರ್ಧರಿಸಿದರೆ, ಆ ಹೊತ್ತಿಗೆ ಅವರಿಗೆ 39 ವರ್ಷ ವಯಸ್ಸಾಗಿರುತ್ತದೆ. ಅದು ಅಸಾಧ್ಯದ ಮಾತು. ಆದರೆ ಪ್ರಸ್ತುತ ನಾಯಕನ ಈ ಹೇಳಿಕೆ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...