ಪ್ಯಾರಿಸ್‌ ಒಲಿಂಪಿಕ್ಸ್ʼನಲ್ಲಿ ಭಾರತಕ್ಕೆ 3ನೇ ಪದಕದ ಗರಿಮೆ: ಶೂಟಿಂಗ್‌ʼನಲ್ಲಿ ಕಂಚು ಗೆದ್ದು ಇತಿಹಾಸ ಬರೆದ ಸ್ವಪ್ನಿಲ್ ಕುಸಾಲೆ : ಕೊಲ್ಲಾಪುರದ 29 ವರ್ಷದ ಶೂಟರ್‌ʼಗೆ ಇದು ಮೊದಲ ಒಲಿಂಪಿಕ್ಸ್ ಆಗಿದ್ದು, ಮೊದಲ ಅವಕಾಶದಲ್ಲೇ ಪದಕ ಗೆದ್ದಿದ್ದಾರೆ. 12 ವರ್ಷಗಳಿಂದ ಒಲಿಂಪಿಕ್ಸ್‌ʼಗೆ ಅರ್ಹತೆ ಪಡೆಯುವ ಪ್ರಯತ್ನದಲ್ಲಿದ್ದ ಸ್ವಪ್ನಿಲ್, ಈ ಬಾರಿ ಅವಕಾಶ ಪಡೆದಿದ್ದರು. :ಭಾರತದ ಮತ್ತೊಬ್ಬ ಶೂಟರ್ ಒಲಿಂಪಿಕ್ಸ್‌ʼನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಶೂಟರ್ ಸ್ವಪ್ನಿಲ್ ಕುಸಾಲೆ 50 ಮೀಟರ್ ರೈಫಲ್ʼನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸ್ವಪ್ನಿಲ್ ಕುಸಾಲೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಕೊಲ್ಲಾಪುರದ 29 ವರ್ಷದ ಶೂಟರ್‌ʼಗೆ ಇದು ಮೊದಲ ಒಲಿಂಪಿಕ್ಸ್ ಆಗಿದ್ದು, ಮೊದಲ ಅವಕಾಶದಲ್ಲೇ ಪದಕ ಗೆದ್ದಿದ್ದಾರೆ. 12 ವರ್ಷಗಳಿಂದ ಒಲಿಂಪಿಕ್ಸ್‌ʼಗೆ ಅರ್ಹತೆ ಪಡೆಯುವ ಪ್ರಯತ್ನದಲ್ಲಿದ್ದ ಸ್ವಪ್ನಿಲ್, ಈ ಬಾರಿ ಅವಕಾಶ ಪಡೆದಿದ್ದರು. ಇತಿಹಾಸ ಸೃಷ್ಟಿಸಿದ ಸ್ವಪ್ನಿಲ್: ಸ್ವಪ್ನಿಲ್ ಕುಸಾಲೆ 451.4 ಅಂಕಗಳೊಂದಿಗೆ ಕಂಚಿನ ಪದಕ ಪಡೆದಿದ್ದಾರೆ. ವಿಶ್ವದ ನಂಬರ್ 1 ಶೂಟರ್ʼನ್ನು ಸೋಲಿಸಿ ಕಂಚಿನ ಪದಕ ಗೆದ್ದ ಸ್ವಪ್ನಿಲ್ ಕುಸಾಲೆ ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದ 7ನೇ ಶೂಟರ್ ಎನಿಸಿಕೊಂಡಿದ್ದಾರೆ. ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಭಾರತಕ್ಕೆ ಇದುವರೆಗೆ ಮೂವರು ಶೂಟರ್‌ʼಗಳು ಪದಕ ಗೆದ್ದಿದ್ದಾರೆ. ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು ಮಿಶ್ರ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇವರೊಂದಿಗೆ ಸರಬ್ಜೋತ್ ಸಿಂಗ್‌ ಕೂಡ ಪದಕ ಗೆದ್ದಿದ್ದಾರೆ. ಇದೀಗ ಸ್ವಪ್ನಿಲ್ 50 ಮೀಟರ್ ರೈಫಲ್ ಮೂರು ಸ್ಥಾನಗಳಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಸ್ವಪ್ನಿಲ್ ʼಸುವರ್ಣʼ ವೃತ್ತಿ ಒಲಂಪಿಕ್ಸ್‌ʼಗೂ ಮುನ್ನ ಸ್ವಪ್ನಿಲ್ ಕುಸಾಲೆ ಕೈರೋದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2021ರಲ್ಲಿ ದೆಹಲಿಯಲ್ಲಿ ನಡೆದ ವಿಶ್ವಕಪ್‌ʼನಲ್ಲಿ ಚಿನ್ನ, 2022 ರ ಏಷ್ಯನ್ ಗೇಮ್ಸ್‌ʼನಲ್ಲಿ ಚಿನ್ನದ ಪದಕ, ಕಳೆದ ವರ್ಷ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ʼನಲ್ಲಿ ಬೆಳ್ಳಿ ಪದಕ, ಅದೇ ವರ್ಷ ಜಕಾರ್ತದಲ್ಲಿ ನಡೆದ ಏಷ್ಯನ್ ರೈಫಲ್-ಪಿಸ್ತೂಲ್ ಚಾಂಪಿಯನ್‌ಶಿಪ್‌ʼನಲ್ಲಿ ಚಿನ್ನ, 2017ರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ʼನಲ್ಲಿ ಕಂಚು ಗೆದ್ದ ಹಿರಿಮೆ ಇವರದ್ದು. ಇದನ್ನೂ ಓದಿ: ಒಲಿಂಪಿಕ್ಸ್‌ʼನಲ್ಲಿ ಪದಕ ಗೆದ್ದ ಶೂಟರ್‌ʼಗಳು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...