ಶ್ರೀಲಂಕಾದ ಸಾರ್ವಜನಿಕ ಸ್ಥಳದಲ್ಲಿ ವಿರಾಟ್‌ ಕೊಹ್ಲಿಗೆ ಅವಮಾನ... ಸಿಟ್ಟಿಗೆದ್ದ ಕೊಹ್ಲಿ ಮಾಡಿದ್ದೇನು ನೋಡಿ : ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಸೋಮವಾರ ಕೊಲಂಬೊಗೆ ಆಗಮಿಸಿದ್ದಾರೆ. ಕಳೆದ ತಿಂಗಳು ವಿಶ್ವಕಪ್ ಟ್ರೋಫಿ ಗೆದ್ದಿರುವ ಕೊಹ್ಲಿ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದರು. :ವಿರಾಟ್ ಕೊಹ್ಲಿ ಆಗಸ್ಟ್ 2 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಸರಣಿಗೆ ತಮ್ಮ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಕೊಹ್ಲಿ T20 ವಿಶ್ವಕಪ್ ಗೆದ್ದ ಸುಮಾರು ಒಂದು ತಿಂಗಳ ನಂತರ ಮೈದಾನಕ್ಕೆ ಇಳಿಯಲಿದ್ದಾರೆ. ಆರಂಭಿಕ ODIಗೆ ಮುಂಚಿತವಾಗಿ, ಅಭ್ಯಾಸದ ಅವಧಿಯಲ್ಲಿ ಕೊಹ್ಲಿ ಅಹಿತಕರ ಅನುಭವವನ್ನು ಎದುರಿಸಬೇಕಾಯಿತು. ಎಕ್ಸ್‌ʼನಲ್ಲಿ ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಕೊಹ್ಲಿಯನ್ನು ವ್ಯಕ್ತಿಯೊಬ್ಬ 'ಚೋಕ್ಲಿ' ಎಂದು ಕರೆದಿದ್ದಾನೆ. 'ಚೋಕ್ಲಿ-ಚೋಕ್ಲಿ' ಎಂದು ಕರೆಯುತ್ತಿರುವುದು ಕೇಳುತ್ತಿದ್ದಂತೆ ಕೋಪಗೊಂಡ ಕೊಹ್ಲಿ, ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಸೋಮವಾರ ಕೊಲಂಬೊಗೆ ಆಗಮಿಸಿದ್ದಾರೆ. ಕಳೆದ ತಿಂಗಳು ವಿಶ್ವಕಪ್ ಟ್ರೋಫಿ ಗೆದ್ದಿರುವ ಕೊಹ್ಲಿ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದರು. ಶ್ರೀಲಂಕಾದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಎರಡು ಮತ್ತು ಮೂರನೇ ಏಕದಿನ ಪಂದ್ಯಗಳು ಕ್ರಮವಾಗಿ ಆಗಸ್ಟ್ 4 ಮತ್ತು 7 ರಂದು ನಡೆಯಲಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...