ಟೀಮ್ ಇಂಡಿಯಾದ ದಿಗ್ಗಜ ಬ್ಯಾಟ್ಸ್ಮನ್ ಅಂಶುಮಾನ್ ಗಾಯಕ್ವಾಡ್ ಇನ್ನಿಲ್ಲ ದೀರ್ಘಕಾಲದಿಂದಲೂ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರ ಕಾಲದ ದಿಗ್ಗಜ ಬ್ಯಾಟ್ಸ್ ಮನ್ ಅಂಶುಮಾನ್ ಗಾಯಕ್ವಾಡ್ ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅಂಶುಮಾನ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ನವದೆಹಲಿ:ದೀರ್ಘಕಾಲದಿಂದಲೂ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರ ಕಾಲದ ದಿಗ್ಗಜ ಬ್ಯಾಟ್ಸ್ ಮನ್ ಅಂಶುಮಾನ್ ಗಾಯಕ್ವಾಡ್ ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅಂಶುಮಾನ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ಅಂಶುಮಾನ್ ಸುಮಾರು 12 ವರ್ಷಗಳ ಕಾಲ ತನ್ನ ವೃತ್ತಿಜೀವನದಲ್ಲಿ 40 ಟೆಸ್ಟ್ ಪಂದ್ಯಗಳು ಮತ್ತು 15 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.ಅವರು ಆಡಿದ 40 ಟೆಸ್ಟ್ ಪಂದ್ಯಗಳಲ್ಲಿ, ಗಾಯಕ್ವಾಡ್ 2 ಶತಕ ಮತ್ತು 10 ಅರ್ಧ ಶತಕಗಳೊಂದಿಗೆ 30.07 ರ ಸರಾಸರಿಯಲ್ಲಿ 1985 ರನ್ ಗಳಿಸಿದರು. ಅದೇ ಸಮಯದಲ್ಲಿ, 15 ಏಕದಿನ ಪಂದ್ಯಗಳಲ್ಲಿ, ಗಾಯಕ್ವಾಡ್ 20.69 ಸರಾಸರಿಯಲ್ಲಿ 269 ರನ್ ಗಳಿಸಿದ್ದರು. 1983 ರಲ್ಲಿ ಪಾಕಿಸ್ತಾನದ ವಿರುದ್ಧ 201 ರನ್‌ಗಳ ಇನ್ನಿಂಗ್ಸ್‌ಗಾಗಿ ಅಂಶುಮಾನ್ ಅವರನ್ನು ಹಳೆಯ ಕಾಲದ ಕ್ರಿಕೆಟ್ ಪ್ರೇಮಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಗಾಯಕ್ವಾಡ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ 'ಗಾಯಕ್ವಾಡ್ ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಸ್ಮರಣೀಯರಾಗಿದ್ದಾರೆ. ಅವರು ಸಹಜ ಬ್ಯಾಟ್ಸ್‌ಮನ್ ಮತ್ತು ಅಸಾಧಾರಣ ಕೋಚ್ ಆಗಿದ್ದರು. ಅವರ ನಿಧನದಿಂದ ನಾನು ದುಃಖಿತನಾಗಿದ್ದೇನೆ ಮತ್ತು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ." ಎಂದು ಅವರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: . . . . . — (@) ಗಾಯಕ್ವಾಡ್ ಅವರು 2000 ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ ಭಾರತ ತಂಡದ ಕೋಚ್ ಆಗಿದ್ದರು.ಗಾಯಕ್ವಾಡ್ ಅವರು ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಲಂಡನ್‌ನಲ್ಲಿ ದೀರ್ಘಕಾಲ ಕಳೆದ ನಂತರ ಅವರು ಕಳೆದ ತಿಂಗಳು ಮನೆಗೆ ಮರಳಿದ್ದರು.ಅವರು 22 ವರ್ಷಗಳ ವೃತ್ತಿಜೀವನದಲ್ಲಿ 205 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 1998 ರಲ್ಲಿ ಶಾರ್ಜಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಅವರ ಕೋಚ್ ಅಡಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಗೆಲುವು ದಾಖಲಿಸಿತ್ತು. ದೆಹಲಿಯ ಫಿರೋಜ್‌ಶಾ ಕೋಟ್ಲಾದಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅನಿಲ್ ಕುಂಬ್ಳೆ 10 ವಿಕೆಟ್ ಪಡೆದಾಗಲೂ ಅವರು ತಂಡದ ಕೋಚ್ ಆಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...