ಕಾವ್ಯಾ ಮಾರನ್‌ ಅಲ್ಲ.. ಮತ್ತೊಬ್ಬ ಸುಂದರಿ ಜೊತೆ ಅಭಿಷೇಕ್‌ ಶರ್ಮಾ ಡೇಟಿಂಗ್!‌ ಪೋಟೋ ಸಮೇತ ಸಿಕ್ಕಿಬಿದ್ದ ಟೀಂ ಇಂಡಿಯಾ ಯಂಗ್‌ ಸ್ಟಾರ್!! : ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಆಟಗಾರ ಅಭಿಷೇಕ್ ಶರ್ಮಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ವೈಯಕ್ತಿಕ ವಿಚಾರವಾಗಿ ಈ ಯಂಗ್‌ ಓಪನರ್‌ ಮುಖ್ಯಾಂಶದಲ್ಲಿದ್ದಾರೆ.. : ಕಳೆದ ಐಪಿಎಲ್‌ನಲ್ಲಿ ಅಭಿಷೇಕ್ ಶರ್ಮಾ ಎಂತಹ ದಾಖಲೆ ಸೃಷ್ಟಿಸಿದ್ದರು ಎಂಬುದು ಎಲ್ಲರಿಗೂ ಗೊತ್ತು. ಅಭಿಷೇಕ್ ಶರ್ಮಾ ಐಪಿಎಲ್‌ನಲ್ಲಿನ ಪ್ರದರ್ಶನದಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು.. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಆಡಿದ ಮೊದಲ ಪಂದ್ಯದಲ್ಲಿ ಡಕ್ ಆಗಿದ್ದ ಅಭಿಷೇಕ್ ಶರ್ಮಾ ಮುಂದಿನ ಪಂದ್ಯದಲ್ಲಿ ಭರ್ಜರಿ ಫಾರ್ಮ್ ತೋರಿ... ಎರಡನೇ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು.. ಇದೆಲ್ಲದರ ಮಧ್ಯೆ ಈ ಹಿಂದೆ ಅಭಿಷೇಕ್ ಶರ್ಮಾ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮಾಲೀಕ ಕಾವ್ಯಾ ಮಾರನ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಅಭಿಷೇಕ್ ಶರ್ಮಾ ಹಲವು ವರ್ಷಗಳಿಂದ ಸನ್ ರೈಸರ್ಸ್ ತಂಡದಲ್ಲಿ ಆಡುತ್ತಿರುವುದರಿಂದ ಇಂತಹ ವದಂತಿಗಳು ಹಬ್ಬಿವೆ. ಅದೇ ವೇಳೆ ತಂಡದಿಂದ ತೆಗೆದುಹಾಕಲಾದ ಅಭಿಷೇಕ್ ಶರ್ಮಾ ಅವರನ್ನು ಕಾವ್ಯಾ ಮಾರನ್ ತಂಡದಲ್ಲಿ ಉಳಿಸಿಕೊಂಡಿರುವುದು‌ ಸಹ ಈ ವದಂತಿಗಳಿಗೆ ಇನ್ನಷ್ಟು ಬಲ ನೀಡಿದೆ.‌ ಇದನ್ನೂ ಓದಿ- ಅಭಿಷೇಕ್ ಶರ್ಮಾ ಅವರ ಕುಟುಂಬ ಸದಸ್ಯರು ಕಾವ್ಯಾ ಮಾರನ್ ಅವರೊಂದಿಗಿನ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಅವರ ಸಂಬಂಧವು ವೃತ್ತಿಪರವಾಗಿದೆ ಎಂಬುದು ಸ್ಪಷ್ಟವಾಗಿದೆ. ಇತ್ತೀಚೆಗಷ್ಟೇ ಅಭಿಷೇಕ್ ಶರ್ಮಾ ಬೇರೊಬ್ಬ ಹುಡುಗಿಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಕೂಡ ವೈರಲ್ ಆಗುತ್ತಿವೆ. ಅಭಿಷೇಕ್ ಶರ್ಮಾ ಹುಡುಗಿಯ ಜೊತೆಗಿನ ಕ್ಲೋಸ್ ಫೋಟೋಗಳು ವೈರಲ್ ಆಗುತ್ತಿದ್ದು, ಆ ಹುಡುಗಿಯೊಂದಿಗೆ ಅಭಿಷೇಕ್ ಶರ್ಮಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಆಕೆ ಯಾರು ಎಂಬುದರ ವಿವರ ಹೊರಬಿದ್ದಿಲ್ಲ. ಅಭಿಷೇಕ್ ಶರ್ಮಾ ಹುಡುಗಿಯೊಂದಿಗಿನ ಚಿತ್ರಗಳ ಬಗ್ಗೆ ನೆಟಿಜನ್‌ಗಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...