"ನಿಮ್ಮ ಇಷ್ಟಕ್ಕೆ ತಕ್ಕಂತೆ ಕುಣಿಯೋಕೆ ಸಾಧ್ಯ ಇಲ್ಲ": ಹಠ ಹಿಡಿದ ಗಂಭೀರ್‌..ಕಾರಣ ಏನು..? T20: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಭಾರತ ತಂಡ ಈಗಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದ್ದು, ಮೂರನೇ ಪಂದ್ಯ ಮಂಗಳವಾರ ಅಂದರೆ ಜಲೈ 30ರಂದು ನಡೆಯಲಿದೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಅವಕಾಶ ಸಿಗದ ಆಟಗಾರರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗುತ್ತದೆ. ಬಿಸಿಸಿಐ ಅಭ್ಯಾಸ ಮುಂದುವರಿಸದಂತೆ ಕೋಚ್ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ. T20:ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಭಾರತ ತಂಡ ಈಗಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದ್ದು, ಮೂರನೇ ಪಂದ್ಯ ಮಂಗಳವಾರ ಅಂದರೆ ಜಲೈ 30ರಂದು ನಡೆಯಲಿದೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಅವಕಾಶ ಸಿಗದ ಆಟಗಾರರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗುತ್ತದೆ. ಬಿಸಿಸಿಐ ಅಭ್ಯಾಸ ಮುಂದುವರಿಸದಂತೆ ಕೋಚ್ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಭಾರತ ತಂಡ ಸರಣಿ ಗೆದ್ದರೂ ಎಲ್ಲ ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಮೇಲುಗೈ ಸಾಧಿಸುವತ್ತ ಗಮನ ಹರಿಸಬೇಕು ಎಂಬುದು ಬಿಸಿಸಿಐ ಮೂಲಗಳಿಂದ ಖಚಿತವಾಗಿದೆ. ಬ್ಯಾಟ್ಸ್‌ಮನ್‌ಗಳು ಮತ್ತು ಪ್ರಮುಖ ಆಲ್‌ರೌಂಡರ್‌ಗಳನ್ನು ಬದಲಾಯಿಸಬಾರದು, ಆದರೆ ವೇಗದ ಬೌಲರ್‌ಗಳನ್ನು ಅಗತ್ಯವಿದ್ದರೆ ಬದಲಾಯಿಸಬಹುದು ಎಂಬುದು ಅವರ ಯೋಜನೆಯಾಗಿದೆ. ಅಲ್ಲದೆ, ಪಿಚ್ ಮತ್ತು ಪಂದ್ಯದ ಪರಿಸ್ಥಿತಿಗಳನ್ನು ಅವಲಂಬಿಸಿ, ಹೆಚ್ಚುವರಿ ಸ್ಪಿನ್ ಬೌಲರ್‌ಗಳು ಅಥವಾ ಹೆಚ್ಚುವರಿ ವೇಗದ ಬೌಲರ್‌ಗಳನ್ನು ತಂಡದಲ್ಲಿ ಬದಲಿಸಬಹುದು. ಇಲ್ಲದಿದ್ದರೆ ಯಾವುದೇ ಬದಲಾವಣೆ ಮಾಡದಿರಲು ಗಂಭೀರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮತ್ತೊಂದೆಡೆ, ಬಿಸಿಸಿಐ ಯುವ ಆಟಗಾರರಿಗೆ ಅಂತರರಾಷ್ಟ್ರೀಯ ಸ್ಪರ್ಧೆಯ ಅನುಭವದ ಅಗತ್ಯ ಇದೆ ಎಂದು ಸೂಚಿಸಿದೆ ಮತ್ತು ಶ್ರೀಲಂಕಾ ವಿರುದ್ಧದ 3 ನೇ ಟಿ 20 ಐನಲ್ಲಿ ಕನಿಷ್ಠ ಒಂದು ಅಥವಾ ಎರಡು ಬದಲಾವಣೆಗಳನ್ನು ಮಾಡಲು ಸಲಹೆ ನೀಡಿದೆ. ಎರಡನೇ ಪಂದ್ಯದಲ್ಲಿ ಕುತ್ತಿಗೆ ನೋವಿನಿಂದ ಹೊರಗುಳಿದಿದ್ದ ಉಪನಾಯಕ ಶುಬ್‌ಮನ್ ಗಿಲ್ ಮೂರನೇ ಟಿ20ಯಲ್ಲಿ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಅವರ ಸ್ಥಾನಕ್ಕೆ ಓಪನರ್ ಆಗಿ ಬಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗುತ್ತದೆ. ಎರಡನೇ ಪಂದ್ಯದಲ್ಲಿ ಶುಬ್ಮನ್ ಗಿಲ್ ಆಡದ ಕಾರಣ ಮಾತ್ರ ಸಂಜು ಸ್ಯಾಮ್ಸನ್ ತಂಡದಲ್ಲಿ ಅವಕಾಶ ಪಡೆದರು. ಆದ್ದರಿಂದ ಗೌತಮ್ ಗಂಭೀರ್ ಅವರನ್ನು ಬದಲಿ ಆಟಗಾರನಾಗಿ ಇರಿಸಿಕೊಂಡಿದ್ದರು, ಆದರೆ ಅವರ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ತಂಡದಿಂದ ಹೊರ ಬೀಲುವ ಸಾದ್ಯತೆಯಿದೆ ಎಂದು ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...