ಹೊಸ ಕೋಚ್‌ ಜೊತೆ ಮೈದಾನದಲ್ಲೇ ಹಾರ್ದಿಕ್ ಜಗಳ!? ಕ್ಯಾಪ್ಟನ್ಸಿ ಕೈತಪ್ಪಿದಕ್ಕೆ ಸಿಟ್ಟಲ್ಲಿ ಹೀಗಾಡ್ತಿದ್ದಾರಾ ಪಾಂಡ್ಯ? : ತರಬೇತಿ ಅವಧಿಯಲ್ಲಿ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಸಹಾಯಕ ಕೋಚ್ ಅಭಿಷೇಕ್ ನಾಯರ್ ನಡುವೆ ಜಗಳ ನಡೆದಿದ್ದು, ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆ ಹಾರ್ದಿಕ್ ದೀರ್ಘಕಾಲ ಮಾತನಾಡಿದ್ದಾರೆ. : ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು ಗೊತ್ತೇ ಇದೆ. ಇನ್ನು ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಅಭ್ಯಾಸ ನಡೆಸಿದ್ದು, ಈ ಸಂದರ್ಭದಲ್ಲಿ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಇತರ ಕೋಚಿಂಗ್ ಸಿಬ್ಬಂದಿ ಮೇಲ್ವಿಚಾರಣೆ ಮಾಡಿದ್ದಾರೆ. ಇದನ್ನೂ ಓದಿ: ಆದರೆ ತರಬೇತಿ ಅವಧಿಯಲ್ಲಿ ಆಲ್‌ ರೌಂಡರ್ಮತ್ತು ಸಹಾಯಕ ಕೋಚ್ ಅಭಿಷೇಕ್ ನಾಯರ್ ನಡುವೆ ಜಗಳ ನಡೆದಿದ್ದು, ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆ ಹಾರ್ದಿಕ್ ದೀರ್ಘಕಾಲ ಮಾತನಾಡಿದ್ದಾರೆ. ನಂತರ ಇಬ್ಬರು ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರಿಗೆ ಬೌಲಿಂಗ್‌ ಮಾಡಿದ್ದಾರೆ. ಹೊಸ ಸಹಾಯಕ ಕೋಚ್ ಅಭಿಷೇಕ್ ನಾಯರ್ ಮೇಲ್ವಿಚಾರಣೆಯಲ್ಲಿ ಹಾರ್ದಿಕ್ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಸಿಮ್ಯುಲೇಶನ್ ಅಭ್ಯಾಸದಲ್ಲಿ ಇಬ್ಬರ ನಡುವೆ ಜಗಳ ನಡೆದಂತೆ ತೋರುತ್ತಿದೆ. ಇದನ್ನೂ ಓದಿ: ನೆಟ್ ಸೆಷನ್ʼ​ನಲ್ಲಿ ಹಾರ್ದಿಕ್​ ಬ್ಯಾಟಿಂಗ್​ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಯಿಂಟ್ʼ​ನತ್ತ ಶಾಟ್ ಹೊಡೆದು ಇದು ಬೌಂಡರಿ ಎಂದರು. ಆದರೆ ಅದಕ್ಕೆ ಅಭಿಷೇಕ್ ನಾಯರ್ ಒಪ್ಪದೆ, ಆಗ ನಾನು ಅಲ್ಲಿ ಫೀಲ್ಡರ್​ ನಿಲ್ಲಿಸುತ್ತಿದ್ದೆ ಎಂದರು. ಫೀಲ್ಡರ್​ ನಿಲ್ಲಿಸಿದ್ರೂ ಇದು ಫೋರ್​ ಹೋಗುತ್ತಿತ್ತು ಎಂದು ಹಾರ್ದಿಕ್​ ವಾದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...