: ಬ್ಯೂ ಬಾಯ್ಸ್‌ ಅಬ್ಬರಕ್ಕೆ ಮಣಿದ ಶ್ರೀಲಂಕಾ : ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಗೆಲುವಿನೊಂದಿಗೆ ಆರಂಭಿಸಿದೆ. ಹೊಸ ಕೋಚ್ ಗೌತಮ್ ಗಂಭೀರ್ ಅವರು ಈ ಸರಣಿಯ ಮೂಲಕ ತಮ್ಮ ಕೋಚ್‌ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಹೊಸ ನಾಯಕ ಸೂರ್ಯಕುಮಾರ್ ಯಾದವ್ ಅವರ ಯುಗವು ಉತ್ತಮ ಯಶಸ್ಸಿನೊಂದಿಗೆ ಪ್ರಾರಂಭವಾಗಿದೆ. ಶನಿವಾರ ನಡೆದ ಶ್ರೀಲಂಕಾ ವಿರುದ್ಧದ ಮೂರು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್ ಗಳ ಭರ್ಜರಿ ಜಯ ಸಾಧಿಸಿದೆ. :ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಗೆಲುವಿನೊಂದಿಗೆ ಆರಂಭಿಸಿದೆ. ಹೊಸ ಕೋಚ್ ಗೌತಮ್ ಗಂಭೀರ್ ಅವರು ಈ ಸರಣಿಯ ಮೂಲಕ ತಮ್ಮ ಕೋಚ್‌ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಹೊಸ ನಾಯಕ ಸೂರ್ಯಕುಮಾರ್ ಯಾದವ್ ಅವರ ಯುಗವು ಉತ್ತಮ ಯಶಸ್ಸಿನೊಂದಿಗೆ ಪ್ರಾರಂಭವಾಗಿದೆ. ಶನಿವಾರ ನಡೆದ ಶ್ರೀಲಂಕಾ ವಿರುದ್ಧದ ಮೂರು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಶನಿವಾರ, ಜುಲೈ 27ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 213 ರನ್ ಗಳಿಸಿತು. ಟೀಂ ಇಂಡಿಯಾದ ನೂತನ ನಾಯಕ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಿಡಿಸಿ 58 ರನ್‌ ಕಲೆಹಾಕಿದರು ಅರ್ಧಶತಕದೊಂದಿಗೆ ದಿಟ್ಟ ಆಟವಾಡಿದರು. ಇದನ್ನೂ ಓದಿ: 214 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಶ್ರೀಲಂಕಾಕ್ಕೆ ಆರಂಭಿಕರಾದ ಪಾತುಮ್ ನಿಸ್ಸಾಂಕ ಹಾಗೂ ಕುಶಾಲ್ ಮೆಂಡಿಸ್ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 84 ರನ್ ಸೇರಿಸಿದ ನಂತರ ಕುಶಾಲ್ ಮೆಂಡಿಸ್ ಅರ್ಷದೀಪ್ ಸಿಂಗ್ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಕ್ರೀಸ್ ಗೆ ಬಂದ ಕುಶಾಲ್ ಪೆರೇರಾ ಜತೆಗೆ ಪಾತುಮ್ ನಿಸ್ಸಾಂಕ ಧಾಟಿ. 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಾಥುಮ್ ನಿಸ್ಸಾಂಕ ಬೃಹತ್ ಸಿಕ್ಸರ್ ಗಳ ಮೂಲಕ ಶತಕದತ್ತ ಸಾಗಿದರು. ಆದರೆ ಅಪಾಯಕಾರಿಯಾದ ಅವರು ಅಕ್ಷರ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಅದೇ ಓವರ್ ನಲ್ಲಿ ಕುಶಾಲ್ ಪೆರೇರಾ ಕೂಡ ಬೌಲ್ಡ್ ಆಗಿದ್ದು ಪಂದ್ಯಕ್ಕೆ ತಿರುವು ನೀಡಿತು. ಈ ಮೂಲಕ ಎದುರಾಳಿ ತಂಡ 19.2 ಓವರ್‌ಗಳಲ್ಲಿ 170 ರನ್‌ಗಳಿಗೆ ಸರ್ವಪತನ ಕಂಡು ಭಾರತದ ಮುಂದೆ ಮಂಡಿಯೂರಿತು. ಶ್ರೀಲಂಕಾ ಬೌಲರ್‌ಗಳ ಪೈಕಿ ಮತಿಶಾ ಪತಿರಾನ 40 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. . ಭಾರತದ ಬೌಲರ್ ಗಳ ಪೈಕಿ ರಿಯಾನ್ ಪರಾಗ್ 3 ವಿಕೆಟ್‌ ಕಬಲಿಸಿ ಕೇವಲ 5 ರನ್‌ ನೀಡಿದರು. ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...