ಪ್ಯಾರಿಸ್ ಒಲಿಂಪಿಕ್ಸ್‌ʼಗೆ ಅರ್ಹತೆ ಪಡೆದ ಬಿಜೆಪಿ ಶಾಸಕಿ..! ಯಾರಾಕೆ? ಯಾವ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ ಗೊತ್ತಾ? : ಆಕೆಯ ಹೆಸರು ಶ್ರೇಯಸಿ ಸಿಂಗ್. ಬಿಹಾರದ ದಿವಂಗತ ನಾಯಕ ದಿಗ್ವಿಜಯ್ ಸಿಂಗ್ ಅವರ ಪುತ್ರಿ. 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಜಮುಯಿ ಕ್ಷೇತ್ರದಿಂದ ಶಾಸಕಿಯಾಗಿ ಗೆದ್ದರು. ಇನ್ನು ಶ್ರೇಯಸಿ ಸಿಂಗ್ ಫರಿದಾಬಾದ್‌ʼನ ಮಾನವರಚನಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪೂರ್ಣಗೊಳಿಸಿದ್ದಾರೆ. :ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಇಂದಿನಿಂದ ಪ್ರಾರಂಭವಾಗಿದೆ. ಭಾರತದಿಂದ ಒಟ್ಟು 117 ಭಾರತೀಯ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಂದಹಾಗೆ ಈ ಪೈಕಿ ಒಬ್ಬರು ಬಿಜೆಪಿ ಶಾಸಕರೂ ಅರ್ಹತೆ ಪಡೆದಿದ್ದಾರೆ. ಇದನ್ನೂ ಓದಿ: ಆಕೆಯ ಹೆಸರು. ಬಿಹಾರದ ದಿವಂಗತ ನಾಯಕ ದಿಗ್ವಿಜಯ್ ಸಿಂಗ್ ಅವರ ಪುತ್ರಿ. 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಜಮುಯಿ ಕ್ಷೇತ್ರದಿಂದ ಶಾಸಕಿಯಾಗಿ ಗೆದ್ದರು. ಇನ್ನು ಶ್ರೇಯಸಿ ಸಿಂಗ್ ಫರಿದಾಬಾದ್‌ʼನ ಮಾನವರಚನಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪೂರ್ಣಗೊಳಿಸಿದ್ದಾರೆ. ಶ್ರೇಯಸಿ ಸಿಂಗ್ ಅವರ ಇಡೀ ಕುಟುಂಬ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬ. ಶ್ರೇಯಸಿ ಸಿಂಗ್ ಪ್ರತಿನಿಧಿಸುತ್ತಿದ್ದ ಜಮುಯಿ ಕ್ಷೇತ್ರದಲ್ಲಿ ಶಾಟ್ ಗನ್ ರೇಂಜ್ ಲಭ್ಯವಿಲ್ಲದ ಕಾರಣ ದೆಹಲಿಗೆ ತೆರಳಿ ಕಠಿಣ ಅಭ್ಯಾಸ ನಡೆಸಿದ್ದರು. ಇನ್ನು ಇವರು ಒಲಂಪಿಕ್ಸ್ ನಲ್ಲಿ ಆಡಿ ಯಶಸ್ಸು ಗಳಿಸಬೇಕೆಂಬುದು ತಂದೆ ದಿಗ್ವಿಜಯ್ ಸಿಂಗ್ ಅವರ ಆಸೆಯಂತೆ. ಒಲಿಂಪಿಕ್ಸ್‌ʼನಲ್ಲಿ ದೇಶಕ್ಕಾಗಿ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನಮ್ಮ ದೇಶಕ್ಕೆ ಹೆಮ್ಮೆ ತರುತ್ತೇನೆ ಎಂದು ಹೇಳಿದ್ದಾರೆ ಶ್ರೇಯಸಿ. ಇನ್ನು ಜುಲೈ 30 ಮತ್ತು 31ರಂದು ಶೂಟಿಂಗ್ ಸ್ಪರ್ಧೆಗಳು ನಡೆಯಲಿದೆ. ಶ್ರೇಯಸಿ ಸಿಂಗ್ ಶೂಟಿಂಗ್ ನಲ್ಲಿ ಈಗಾಗಲೇ ಹಲವು ಪದಕಗಳನ್ನು ಗೆದ್ದಿದ್ದಾರೆ. 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ʼನಲ್ಲಿ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಶ್ರೇಯಸಿ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದರು. 2018ರಲ್ಲಿ ಗೋಲ್ಡ್ ಕೋಸ್ಟ್ʼನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಶ್ರೇಯಸಿ ಸಿಂಗ್ ಅವರ ಸಾಧನೆಯನ್ನು ಗಮನಿಸಿದ ಭಾರತ ಸರ್ಕಾರ, ಅವರಿಗೆ ಅರ್ಜುನ ಪ್ರಶಸ್ತಿಯನ್ನು ಘೋಷಿಸಿದೆ. ಇದನ್ನೂ ಓದಿ: ಸದ್ಯ ಪ್ಯಾರಿಸ್ ಒಲಿಂಪಿಕ್ಸ್ʼನಲ್ಲಿ ಚಿನ್ನ ಗೆಲ್ಲುವ ಗುರಿಯೊಂದಿಗೆ ಶ್ರೇಯಸಿ ಪ್ಯಾರಿಸ್ʼಗೆ ತೆರಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...