ಅಂದು ಶೂಟಿಂಗ್‌ ತ್ಯಜಿಸಲು ನಿರ್ಧರಿಸಿದ್ದಾಕೆ ಇಂದು ಫೈನಲ್‌ʼಗೆ ಎಂಟ್ರಿ: ಒಲಿಂಪಿಕ್ಸ್‌ʼನಲ್ಲಿ ಮನು ಭಾಕರ್‌ ಚಿನ್ನದ ಪದಕದ ಆಟ ನಾಳೆ ಎಷ್ಟೊತ್ತಿಗೆ? : ಭಾಕರ್ ಮೊದಲ ಸಿರೀಸ್‌ʼನಲ್ಲಿ 97, ಎರಡನೇಯಲ್ಲಿ 97, ಮೂರನೇಯಲ್ಲಿ 98, ನಾಲ್ಕನೇಯಲ್ಲಿ 96, ಐದನೇಯಲ್ಲಿ 96 ಮತ್ತು ಆರನೇ ಸಿರೀಸ್ʼನಲ್ಲಿ 96 ಅಂಕಗಳನ್ನು ಗಳಿಸಿದ್ದರು. ಇನ್ನು ಫೈನಲ್ ಪಂದ್ಯವು ನಾಳೆ ಅಂದರೆ ಜುಲೈ 28 ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. :ಪ್ಯಾರಿಸ್ ಒಲಿಂಪಿಕ್ಸ್ 2024ರ ಮೊದಲ ದಿನ (ಜುಲೈ 27) ಶೂಟಿಂಗ್‌ʼನಲ್ಲಿ ಭಾರತಕ್ಕೆ ಶುಭಸುದ್ದಿ ಸಿಕ್ಕಿದೆ. ಶೂಟರ್ ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. 60 ಶಾಟ್‌ʼಗಳ ಅರ್ಹತಾ ಸುತ್ತಿನಲ್ಲಿ ಒಟ್ಟು 580 ಪಾಯಿಂಟ್‌ʼಗಳೊಂದಿಗೆ ಮೂರನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ಭಾಕರ್ ಮೊದಲ ಸಿರೀಸ್‌ʼನಲ್ಲಿ 97, ಎರಡನೇಯಲ್ಲಿ 97, ಮೂರನೇಯಲ್ಲಿ 98, ನಾಲ್ಕನೇಯಲ್ಲಿ 96, ಐದನೇಯಲ್ಲಿ 96 ಮತ್ತು ಆರನೇ ಸಿರೀಸ್ʼನಲ್ಲಿ 96 ಅಂಕಗಳನ್ನು ಗಳಿಸಿದ್ದರು. ಇನ್ನು ಫೈನಲ್ ಪಂದ್ಯವು ನಾಳೆ ಅಂದರೆ ಜುಲೈ 28 ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. ಅಂದಹಾಗೆ ಕಳೆದ ಬಾರಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ʼನಲ್ಲಿ ಮನು ಭಾಕರ್‌, ವಿಶೇಷವಾದ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೆ, ಬೇಸರಗೊಂಡಿದ್ದ ಮನು, ಶೂಟಿಂಗ್‌ ತ್ಯಜಿಸಲು ಮುಂದಾಗಿದ್ದರು. "ಇದು ನನ್ನ ಮೊದಲ ಒಲಿಂಪಿಕ್ಸ್​​​. ಸೋಲುತ್ತೇನೆ ಎಂದುಕೊಂಡಿರಲಿಲ್ಲ. ನನಗೆ ತುಂಬಾ ಚಿಂತೆ ಕಾಡುತ್ತಿತ್ತು. ಶೂಟಿಂಗ್ ತ್ಯಜಿಸುವ ನಿರ್ಧಾರಕ್ಕೂ ಬಂದಿದ್ದೆ" ಎಂದು ಟೊಕಿಯೊ ಒಲಿಂಪಿಕ್ಸ್​​ʼನಲ್ಲಿ ಸೋತ ಬಳಿಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಇಂದು ನಡೆದ ಅರ್ಹತಾ ಸುತ್ತಿನಲ್ಲಿ ಹಂಗೇರಿಯ ವೆರೋನಿಕಾ ಮೇಜರ್ (582) ಮೊದಲ ಸ್ಥಾನ ಪಡೆದಿದ್ದರೆ, ದಕ್ಷಿಣ ಕೊರಿಯಾ ದಓ ಯೆ ಜಿನ್ (582) ಎರಡನೇ ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ಮನು ಇದ್ದು, 580 ಅಂಕ ಪಡೆದುಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...