ಶೆಫಾಲಿ-ಸ್ಮೃತಿ ಅಬ್ಬರಕ್ಕೆ ಮಣಿದ ಬಾಂಗ್ಲಾದೇಶ: ಅಬ್ಬರಿಸಿ ಗೆದ್ದ ಭಾರತ ವನಿತೆಯರ ತಂಡ ಏಷ್ಯಾಕಪ್‌ ಫೈನಲ್‌ ಪ್ರವೇಶ ' 2024: ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಇದಾದ ಬಳಿಕ ಭಾರತದ ಬೌಲರ್‌ʼಗಳು ಬಾಂಗ್ಲಾ ಆಟಗಾರರಿಗೆ ದುಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ. ' 2024: ಮಹಿಳಾ ಏಷ್ಯಾ ಕಪ್ 2024ರಲ್ಲಿ ಭಾರತ ತಂಡ ನಿರೀಕ್ಷೆಗೆ ತಕ್ಕಂತೆ ಬದುಕಿದೆ. ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದ ಬ್ಲೂ ಆರ್ಮಿ ಸೆಮಿಫೈನಲ್‌ʼನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಫೈನಲ್‌ʼಗೆ ಲಗ್ಗೆ ಇಟ್ಟಿದೆ. ಭಾರತದ ವಿರುದ್ಧ ಬಾಂಗ್ಲಾದೇಶ ತಂಡ ಕೇವಲ 80 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ 10 ವಿಕೆಟ್‌ʼಗಳಿಂದ ಸುಲಭವಾಗಿ ಗೆಲುವು ಸಾಧಿಸಿತು. ಇದನ್ನೂ ಓದಿ: ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಇದಾದ ಬಳಿಕ ಭಾರತದ ಬೌಲರ್‌ʼಗಳು ಬಾಂಗ್ಲಾ ಆಟಗಾರರಿಗೆ ದುಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ. ಟೀಂ ಇಂಡಿಯಾ ಪರವಾಗಿ ರಾಧಾ ಯಾದವ್ ಮತ್ತು ರೇಣುಕಾ ಸಿಂಗ್ ತಲಾ 3 ವಿಕೆಟ್ ಪಡೆದರು. ಇದಲ್ಲದೇ ಪೂಜಾ ಮತ್ತು ದೀಪ್ತಿ ಖಾತೆಗೆ ತಲಾ ಒಂದೊಂದು ವಿಕೆಟ್ ಸೇರಿತ್ತು. ಶೆಫಾಲಿ-ಸ್ಮೃತಿ ಅಬ್ಬರ: ಭಾರತದಿಂದ ಅದ್ಭುತ ಬೌಲಿಂಗ್ ಕಂಡುಬಂದಿದ್ದು ಮಾತ್ರವಲ್ಲದೆ, ಇನ್ ಫಾರ್ಮ್ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಬ್ಯಾಟಿಂಗ್‌ʼನಲ್ಲೂ ಅಬ್ಬರಿಸಿದ್ದರು. ಶೆಫಾಲಿ ಅಜೇಯ 26 ರನ್ ಗಳಿಸಿದರೆ, ಸ್ಮೃತಿ ಅಜೇಯ 55 ರನ್ ಗಳಿಸಿದರು. ಮಂಧಾನ ಅವರ ಇನ್ನಿಂಗ್ಸ್‌ʼನಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದ್ದರು. ಈ ಇನ್ನಿಂಗ್ಸ್‌ನಿಂದಾಗಿ ಭಾರತ 10 ವಿಕೆಟ್‌ʼಗಳಿಂದ ಪಂದ್ಯವನ್ನು ಗೆಲ್ಲುವ ಮೂಲಕ ಫೈನಲ್‌ʼಗೆ ಪ್ರವೇಶ ನೀಡಿದೆ. ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ಎದುರು ಸೋತಿತ್ತು. ಇದರಿಂದಾಗಿ ಪಾಕ್ ತಂಡ ಅರ್ಹತೆ ಪಡೆಯಲು ಭಾರತದ ನೆರವು ಪಡೆಯಬೇಕಾಯಿತು. ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಟೀಂ ಇಂಡಿಯಾ ಗೆದ್ದು ತನ್ನೊಂದಿಗೆ ಪಾಕಿಸ್ತಾನ ಕೂಡ ಸೆಮಿಫೈನಲ್‌ʼಗೆ ಅರ್ಹತೆ ಪಡೆಯುವಂತೆ ಮಾಡಿದೆ. ಇದನ್ನೂ ಓದಿ: ಇನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಇನ್ನೇನು ಆರಂಭವಾಗಲಿದೆ. ಶ್ರೀಲಂಕಾವನ್ನು ಸೋಲಿಸುವಲ್ಲಿ ಪಾಕಿಸ್ತಾನ ತಂಡ ಯಶಸ್ವಿಯಾದರೆ ಫೈನಲ್‌ʼನಲ್ಲಿ ಡಬಲ್ ಡೋಸ್ ರೋಚಕತೆ ಸಿಗುವುದು ಪಕ್ಕಾ. ಜುಲೈ 30 ರಂದು ಫೈನಲ್ ಪಂದ್ಯ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...