"ನನ್ನ ಪತಿ ಒಬ್ಬ ಮಹಿಳೆಯಿಂದ ಸುಖ ಪಡೆಯುತ್ತಿರಲಿಲ್ಲ..."- ಶಮಿಯ ವಿರುದ್ಧ ಮತ್ತೆ ಆರೋಪ ಮಾಡಿದ್ರಾ ಮಾಜಿ ಪತ್ನಿ ಹಸಿನ್ ಜಹಾನ್ : "ಕೆಲವೊಮ್ಮೆ ಮಗಳು ಕೂಡ ನನ್ನೊಂದಿಗೆ ಬಂದಾಗ, ಆಕೆಯನ್ನು ಮುದ್ದಿಸುತ್ತಾಳೆ. ಅವಳ ಬಳಿ ಇರುವ ಹಣ್ಣನ್ನು ತಿನ್ನಲು ಕೊಡುತ್ತಾಳೆ. ಬಡವರ ಪ್ರಾರ್ಥನೆ ಮತ್ತು ಪ್ರೀತಿಗೆ ಮಿತಿಯಿಲ್ಲ. ಅಲ್ಲಾಹನಿಗೆ ಧನ್ಯವಾದ. ಅನೇಕ ಬಡವರ ಪ್ರಾರ್ಥನೆಗಳು ನನ್ನೊಂದಿಗಿವೆ" ಎಂದು ಬರೆದಿದ್ದಾರೆ. :ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಶೀಘ್ರದಲ್ಲೇ ಮೈದಾನಕ್ಕೆ ಮರಳಗಿದ್ದಾರೆ. ಇನ್ನು ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ತಮ್ಮ ಹದಗೆಟ್ಟ ಸಂಬಂಧದ ಬಗ್ಗೆ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅಂತೆಯೇ ಇತ್ತೀಚೆಗೆ ಹಸೀನ್ ಜಹಾನ್ ತರಕಾರಿ ಮಾರುವ ಮಹಿಳೆಯ ಜೊತೆಗಿನ ಫೋಟೋ ಒಂದನ್ನು ಹಂಚಿಕೊಂಡು, ಸುದೀರ್ಘ ಶೀರ್ಷಿಕೆ ಕೂಡ ಬರೆದಿದ್ದಾರೆ. ಇದನ್ನೂ ಓದಿ: ಜಾದವ್‌ಪುರ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವ ಮಹಿಳೆಯ ಬಳಿ ತರಕಾರಿಗಳು ಮತ್ತು ಹಣ್ಣುಗಳನ್ನು ಖರೀದಿಸುತ್ತೇನೆ ಎಂದು ಹಸಿನ್ ಜಹಾನ್ ಬರೆದಿದ್ದಾರೆ. "ಇಲ್ಲಿಂದ ತರಕಾರಿ, ಹಣ್ಣುಗಳನ್ನು ಖರೀದಿಸಿ ಹಲವು ವರ್ಷಗಳೇ ಕಳೆದಿವೆ. ಈ ಮಹಿಳೆಗೆ ನನ್ನ ಗುರುತು ಸಿಗಲಿಕ್ಕಿಲ್ಲ. ಆದರೆ ಆಕೆ ನನ್ನನ್ನು ನೋಡಿ ತುಂಬಾ ಸಂತೋಷಪಡುತ್ತಾಳೆ. ನಾನು ಆ ದಾರಿಯಲ್ಲಿ ಹಾದು ಹೋದರೆ, ಸಂತೋಷದಿಂದ ನನ್ನನ್ನು ಕರೆದು ಕುಳಿತುಕೊಳ್ಳಲು ಹೇಳುತ್ತಾಳೆ. ಕುಳಿತುಕೊಳ್ಳಲು ಏನೂ ಇಲ್ಲದಿದ್ದರೆ, ಬಕೆಟ್ ಅನ್ನು ತಲೆಕೆಳಗಾಗಿಸಿ ಇಲ್ಲಿ ಕುಳಿತುಕೊಳ್ಳಿ ಅನ್ನುತ್ತಾಳೆ. ಆಗ ಅವಳು ತನ್ನ ಬಗ್ಗೆ ಹೇಳಿಕೊಂಡು ಸಂತೋಷಪಡುತ್ತಾಳೆ" ಎಂದಿದ್ದಾರೆ. "ಕೆಲವೊಮ್ಮೆ ಮಗಳು ಕೂಡ ನನ್ನೊಂದಿಗೆ ಬಂದಾಗ, ಆಕೆಯನ್ನು ಮುದ್ದಿಸುತ್ತಾಳೆ. ಅವಳ ಬಳಿ ಇರುವ ಹಣ್ಣನ್ನು ತಿನ್ನಲು ಕೊಡುತ್ತಾಳೆ. ಬಡವರ ಪ್ರಾರ್ಥನೆ ಮತ್ತು ಪ್ರೀತಿಗೆ ಮಿತಿಯಿಲ್ಲ. ಅಲ್ಲಾಹನಿಗೆ ಧನ್ಯವಾದ. ಅನೇಕ ಬಡವರ ಪ್ರಾರ್ಥನೆಗಳು ನನ್ನೊಂದಿಗಿವೆ" ಎಂದು ಬರೆದಿದ್ದಾರೆ. "ಒಂದೊಮ್ಮೆ ನನ್ನಲ್ಲಿ ಈಕೆ ಕೇಳಿದಳು... ನಿನ್ನ ಗಂಡ ನಿನ್ನನ್ನು ತುಂಬಾ ಪ್ರೀತಿಸುತ್ತಿರಬೇಕು, ಅದಕ್ಕೇ ನಿನ್ನ ಮುಖದ ತುಂಬಾ ನಗುವಿದೆ? ಎಂದು... ಅದಕ್ಕೆ ನಾನು ಇಲ್ಲ ಅಂದೆ, ನನ್ನ ಪತಿ ಒಬ್ಬ ಮಹಿಳೆಯಿಂದ ಸುಖ ಪಡೆಯುತ್ತಿರಲಿಲ್ಲ. ಹೆಣ್ತನದ ಕಾರಣದಿಂದ ಅವನು ನನ್ನನ್ನು ಮತ್ತು ನನ್ನ ಮಗಳನ್ನು ತೊರೆದಿದ್ದಾನೆ" ಎಂದು ಹೇಳಿರುವುದಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹಸಿನ್ ಜಹಾನ್ ಈ ಪೋಸ್ಟ್‌ ಶೇರ್‌ ಮಾಡುವ ಮೂಲಕ ಮತ್ತೊಮ್ಮೆ ಶಮಿಯ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ದಾಂಪತ್ಯ ದ್ರೋಹದ ಆರೋಪ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...