ಅಪ್ಪ ನಿವೃತ್ತಿಯಾಗ್ತಿದ್ದಂತೆ ಮಗ ಫೀಲ್ಡ್‌ʼಗಿಳಿಯಲು ರೆಡಿ... ಈ ಟೂರ್ನಿ ಮೂಲಕ ದ್ರಾವಿಡ್‌ ಪುತ್ರ ಕ್ರಿಕೆಟ್‌ʼಗೆ ಭರ್ಜರಿ ಎಂಟ್ರಿ : ಭಾರತ ತಂಡದ ಮಾಜಿ ಮುಖ್ಯ ಕೋಚ್ ಹಾಗೂ ನಾಯಕ ರಾಹುಲ್ ದ್ರಾವಿಡ್ ಅವರು ಇತ್ತೀಚಿಗಷ್ಟೇ ನಡೆದ ವಿಶ್ವಕಪ್ ನಲ್ಲಿ ತಮ್ಮ ಕೋಚ್ ವೃತ್ತಿಯಿಂದ ನಿವೃತ್ತಿ ಹೊಂದಿದರು. ಇದೀಗ ಅವರ ನಿವೃತ್ತಿ ನಂತರ ಅವರ ಮಗ ಫೀಲ್ಡಿಗಿಳಿಯಲು ಸಿದ್ದರಾಗಿದ್ದಾರೆ. :ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ಮುಂಬರುವ T20 ಟೂರ್ನಿಯಲ್ಲಿ ಕ್ರಿಕೆಟ್ ಗೆ ಭರ್ಜರಿ ಎಂಟ್ರಿ ಕೊಡಲಿದ್ದಾರೆ. ಮೊನ್ನೆ ಅಷ್ಟೇ ರಾಹುಲ್ ದ್ರಾವಿಡ್ ತಮ್ಮ ಮುಖ್ಯ ಕೋಚ್ ವೃತ್ತಿಗೆ ವಿದಾಯ ಘೋಷಿಸಿದರು, ನಿವೃತ್ತಿ ಘೋಷಿಸಿದ ಬೆನ್ನಲ್ಲೇ ತಮ್ಮ ಮಗ ಸಮಿತ್ ಕ್ರಿಕೆಟ್ ವೃತ್ತಿಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಕೊಟ್ಟಿದ್ದಾರೆ. ಇದನ್ನು ಓದಿ : ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ T20 ಹರಾಜು ಜುಲೈ 25 ರಂದು ಬೆಂಗಳೂರಿನ ಐಕಾನಿಕ್ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು, ಆಟಗಾರರ ಹರಾಜಿನಲ್ಲಿ ಮೈಸೂರು ವಾರಿಯರ್ಸ್ ತಂಡ ಸಮಿತ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಅವರ ಪುತ್ರ ಈ ಮೂಲಕ T20 ಅಲ್ಲಿ ಮೈಸೂರು ವಾರಿಯರ್ಸ್ ತಂಡದ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಮುಂಬರುವ ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೂಪಿಯಲ್ಲಿ T20 ಅಲ್ಲಿ ಮೈಸೂರು ವಾರಿಯರ್ ತಂಡದಲ್ಲಿ ಆಡಲಿದ್ದು, ಮೈಸೂರು ವಾರಿಯರ್ಸ್ ಯುವ ವೇಗದ ಬೌಲರ್ ಅನ್ನು 0.5 ಲಕ್ಷಗಳ ಸಾಧಾರಣ ಮೊತ್ತಕ್ಕೆ ಪಡೆದುಕೊಂಡಿತು ಇದನ್ನು ಓದಿ : ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ T20 ನ ಮೂರನೇ ಆವೃತ್ತಿಯು ಆಗಸ್ಟ್ 15 ರಂದು ಪ್ರಾರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಲೈವ್ ಪ್ರಸಾರಗಳು ಲಭ್ಯವಿವೆ, ಜೊತೆಗೆ ಫ್ಯಾನ್‌ಕೋಡ್‌ನಲ್ಲಿ ಸ್ಟ್ರೀಮಿಂಗ್ ಆಯ್ಕೆಗಳು ಲಭ್ಯವಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...