ಮುಂಬೈ ಟೆಂಟ್‌ ಕಾಲಿ ಮಾಡಿದ ಆಟಗಾರರು..5 ತಂಡಗಳ ನಾಯಕತ್ವದ ಪೈಪೋಟಿಗೆ ಬಿದ್ದ ಸ್ಟಾರ್‌ ಕ್ರಿಕೆಟಿಗರು..! 2025: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ. ಕಳೆದ ಋತುವಿನಲ್ಲಿ, ಮುಂಬೈ ತಂಡದ ಮ್ಯಾನೇಜ್ಮೆಂಟ್ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ನಿರ್ಧಾರ ತೆಗೆದುಒಂಡಿತ್ತ, ಇದರಿಂದಾಗಿ ರೋಹಿತ್‌ ಅಷ್ಟೇ ಅಲ್ಲದೆ ತಂಡದ ಹಲವು ಆಟಗಾರರು ಬೇಸರ ಹೊರಹಾಕಿದ್ದರು. 2025:ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ. ಕಳೆದ ಋತುವಿನಲ್ಲಿ, ಮುಂಬೈ ತಂಡದ ಮ್ಯಾನೇಜ್ಮೆಂಟ್ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ನಿರ್ಧಾರ ತೆಗೆದುಒಂಡಿತ್ತ, ಇದರಿಂದಾಗಿ ರೋಹಿತ್‌ ಅಷ್ಟೇ ಅಲ್ಲದೆ ತಂಡದ ಹಲವು ಆಟಗಾರರು ಬೇಸರ ಹೊರಹಾಕಿದ್ದರು. ಐಪಿಎಲ್‌ 2025 ರ ಹರಾಜು ಇನ್ನೇನು ಕೆಲವೇ ತಿಂಗಳುಗಳಲ್ಲಿ ಶುರುವಾಗಲಿದೆ. ತಂಡಗಳಿಗೆ ಕೇವಲ ನಾಲ್ಕು ಹಳೆಯ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದ್ದು, ಎಲ್ಲಾ ತಂಡಗಳಲ್ಲು ಭಾರಿ ಬದಲಾವಣೆಗಳು ನಡೆಯಲಿದೆ. ಇದನ್ನೂ ಓದಿ: ಮೆಗಾ ಹರಾಜಿನಿಂದಾಗಿ, ಪ್ರತಿ ತಂಡವು ಬ್ರಾಂಡ್ ಮೌಲ್ಯದ ಆಟಗಾರನನ್ನು ಹುಡುಕಲು ಪ್ರಾರಂಭಿಸಿದೆ. ರೋಹಿತ್ ಶರ್ಮಾ ಅವರನ್ನು ಮುಂಬೈ ತಂಡ ಉಳಿಸಿಕೊಳ್ಳುವ ಸಾಧ್ಯತೆ ಇಲ್ಲ.ಏಕೆಂದರೆ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಬುಮ್ರಾ ಅವರನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಐಪಿಎಲ್ ಆಡಳಿತವು ಇದುವರೆಗೆ ಗರಿಷ್ಠ 3 ಭಾರತೀಯ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ನೀಡಿದೆ. ರೋಹಿತ್ ಶರ್ಮಾ ಈಗಾಗಲೇ 37 ವರ್ಷ ವಯಸ್ಸನ್ನು ತಲುಪಿರುವುದರಿಂದ, ಅವರು ಐಪಿಎಲ್ ಸರಣಿಯಲ್ಲಿ ಇನ್ನೂ 3 ವರ್ಷಗಳವರೆಗೆ ಮಾತ್ರ ಆಡಬಹುದು. ರೋಹಿತ್ ಶರ್ಮಾ ಅವರನ್ನು ಮುಂಬೈ ತಂಡದ ಮ್ಯಾನೇಜ್‌ಮೆಂಟ್ ಹರಾಜು ಹಾಕಿದರೆ, ಅವರನ್ನು ಸಹಿ ಮಾಡಲು ವಿವಿಧ ತಂಡಗಳು ಭಾರಿ ಮೊತ್ತವನ್ನು ನೀಡಲು ಮುಂದೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂಬೈಗೆ ಈಗಾಗಲೇ 5 ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ರೋಹಿತ್ ಶರ್ಮಾ ಅವರಿಗೆ ವಿವಿಧ ತಂಡಗಳು ಮಣೆ ಹಾಕಲಿವೆ. ಈ ಮೂಲಕ ಹೊಸ ಗುರುತು ಪಡೆಯಲು ರೋಹಿತ್‌ ಶರ್ಮಾ ಬೇರೆ ತಂಡಕ್ಕ ಹಾರಲಿದ್ದಾರೆ. ಅದೇ ರೀತಿ ಆರ್‌ಸಿಬಿ, ಲಕ್ನೋ, ಗುಜರಾತ್, ಪಂಜಾಬ್ ಮತ್ತು ದೆಹಲಿಯಂತಹ 5 ತಂಡಗಳು ಮೆಗಾ ಹರಾಜು ನಡೆಯಲಿರುವಾಗಲೇ ಹೊಸ ನಾಯಕನ ಹುಡುಕಾಟದಲ್ಲಿದೆ ಎಂದು ತಿಳಿದುಬಂದಿದೆ. ಗುಜರಾತ್ ತಂಡವನ್ನು ಹೊರತುಪಡಿಸಿ ಉಳಿದ 4 ತಂಡಗಳು ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ವಿಶೇಷವಾಗಿ ಪಂಜಾಬ್ ಮತ್ತು ಲಕ್ನೋ ತಂಡಗಳು ರೋಹಿತ್ ಶರ್ಮಾ ಅವರನ್ನು ತಮ್ಮ ತಂಡಕ್ಕೆ ಕರೆತರಲು ಉತ್ಸುಕತೆಯನ್ನು ತೋರಿವೆ. ಇದನ್ನೂ ಓದಿ: ಹೀಗಾಗಿ ಮೆಗಾ ಹರಾಜಿನಲ್ಲಿ ರೋಹಿತ್ ಶರ್ಮಾ ಅತ್ಯಂತ ದುಬಾರಿ ಆಟಗಾರನಾಗುವ ನಿರೀಕ್ಷೆಯಿದೆ. ಮುಂಬೈ ತಂಡ ಮತ್ತು ಅಂಬಾನಿ ಕುಟುಂಬದ ಮೇಲಿನ ಸೇಡು ತೀರಿಸಿಕೊಳ್ಳಲು ರೋಹಿತ್‌ ಹೊಸ ತಂಡಕ್ಕೆ ಟ್ರೋಫಿ ಗೆದ್ದು ಕೊಡಲು ಉತ್ಸುಕರಾಗಿದ್ದಾರೆ. ಇದರಿಂದ ರೋಹಿತ್ ಶರ್ಮಾ ಅಭಿಮಾನಿಗಳು ಖುಷಿಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...