ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗದಿರಲು 'ಇದೇ' ಪ್ರಮುಖ ಕಾರಣ: ಆಶಿಶ್ ನೆಹ್ರಾ : ಹೊಸ ಟಿ20ಐ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನು ನೇಮಿಸದಿರುವುದು ನನಗೇನು ಆಶ್ಚರ್ಯವಿಲ್ಲ ಎಂದು ಭಾರತ ತಂಡದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಹೇಳಿದ್ದಾರೆ. :ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡಕ್ಕೆ ಹೊಸ ನಾಯಕನ ಅಗತ್ಯವಿತ್ತು. ಈ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿತ್ತಾದರೂ ಕೊನೆ ಕ್ಷಣದಲ್ಲಿ ಅವರು ನಾಯಕತ್ವದ ರೇಸ್‌ನಲ್ಲಿ ಹಿಂದೆ ಉಳಿದಿದ್ದಾರೆ. ಇದೀಗ ಸೂರ್ಯ ಕುಮಾರ್ ಯಾದವ್ ಅವರನ್ನು ಟಿ20 ತಂಡದ ನೂತನ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ವೇಗದ ಬೌಲರ್ ಮತ್ತು ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ, ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ಟಿ 20 ಐ ನಾಯಕರನ್ನಾಗಿ ನೇಮಿಸದಿರುವ ಭಾರತೀಯ ಮ್ಯಾನೇಜ್‌ಮೆಂಟ್‌ನ ನಿರ್ಧಾರದಿಂದ ನನಗೆ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗದಿರಲು 'ಇದೇ' ಪ್ರಮುಖ ಕಾರಣ!ಅವರನ್ನು ನಾಯಕನನ್ನಾಗಿ ಮಾಡದಿರುವುದಕ್ಕೆ ಗೌತಮ್ ಗಂಭೀರ್ ಕಾರಣ ಎಂದು ನಂಬಲಾಗಿದೆ. ಆದರೆ, ಹಾರ್ದಿಕ್ ಪಾಂಡ್ಯಗೆ ( ) ತಂಡದ ಕ್ಯಾಪ್ಟನ್ ಪಟ್ಟ ನೀಡದಿರಲು ಅವರ ಫಿಟ್‌ನೆಸ್ ಪ್ರಮುಖ ಕಾರಣ ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ. ಇದನ್ನೂ ಓದಿ- ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ( ), ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡದಿರುವುದು ನನಗೆ ಆಶ್ಚರ್ಯವಿಲ್ಲ. ಕ್ರಿಕೆಟ್‌ನಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಹೊಸ ಕೋಚ್ ಬಂದಿದ್ದು, ಈ ಬಗ್ಗೆ ಅವರ ಚಿಂತನೆ ವಿಭಿನ್ನವಾಗಿರುತ್ತದೆ. ಹೊಸ ತರಬೇತುದಾರ ತಂಡಕ್ಕೆ ಬಂದಾಗ, ಅವರು ಹೊಸ ಆಲೋಚನೆಯನ್ನು ತರುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ (ಜುಲೈ 22) ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅಜಿತ್ ಅಗರ್ಕರ್ ಅವರ, "ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್‌ನತ್ತ ಗಮನ ಹರಿಸಬೇಕೆಂದು ತಂಡದ ಆಡಳಿತವು ಬಯಸಿದೆ" ಎಂಬ ಹೇಳಿಕೆಯನ್ನು ನೆಹ್ರಾ ಸ್ಮರಿಸಿದರು. ಇದನ್ನೂ ಓದಿ- ಹಾರ್ದಿಕ್ ತಂಡದ ಪ್ರಮುಖ ಆಟಗಾರ!ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಪ್ರಮುಖ ಆಟಗಾರ. ಅವರು ಪಂದ್ಯದಲ್ಲಿ ಎರಡು ಓವರ್‌ಗಳನ್ನು ಬೌಲ್ ಮಾಡಿದರೂ ಅಥವಾ ತಂಡದಲ್ಲಿ ಕೇವಲ ನಾಲ್ವರು ಬೌಲರ್‌ಗಳು ಇದ್ದರೂ, ಅವರ ಉಪಸ್ಥಿತಿಯು ತಂಡಕ್ಕೆ ವಿಭಿನ್ನ ಸಮತೋಲನವನ್ನು ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ಆಶಿಶ್ ನೆಹ್ರಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...