: ಸೆಮಿಫೈನಲ್‌ನಲ್ಲಿ ಬದ್ದ ಎದುರಾಳಿಗಳ ಹೋರಾಟ..ಭಾರತ ಪಾಕಿಸ್ತಾನ ನಡುವೆ ನಡೆಯಲಿದೆ ಕಾದಾಟ..! : ಮಂಗಳವಾರ, ಜುಲೈ 23 ರಂದು ಡಂಬುಲಾ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿ ಎದುರಳಿ ತಂಡವನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. :ಮಂಗಳವಾರ, ಜುಲೈ 23 ರಂದು ಡಂಬುಲಾ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿ ಎದುರಳಿ ತಂಡವನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. 82 ರನ್‌ಗಳ ಭಾರಿ ಅಂತರದಿಂದ ಜಯ ಸಾಧಿಸುವ ಮೂಲಕ ಮಹಿಳೆಯರ ಏಷ್ಯಾಕಪ್ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಭಾರತದೊಂದಿಗೆ ಪಾಕಿಸ್ತಾನ ಕೂಡ ಗ್ರೂಪ್ ಎ ಯಲ್ಲಿ ಸೆಮಿಫೈನಲ್ ತಲುಪಿದೆ. ಹಾಲಿ ಮಹಿಳಾ ಏಷ್ಯಾಕಪ್ ಚಾಂಪಿಯನ್‌ ಭಾರತ, ಬಾಂಗ್ಲಾದೇಶ ಅಥವಾ ಥಾಯ್ಲೆಂಡ್ ವಿರುದ್ಧ ಸೆಣಸುವ ಸಾಧ್ಯತೆಗಳಿವೆ. ಮಂಗಳವಾರ ನೇಪಾಳ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಆರಂಭಿಕರಾಗಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಶೇಪಾಲಿ ಮತ್ತು ಹೇಮಲತಾ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ದಾಖಲಿಸಿದರು. ಈ ಜೋಡಿ 14 ಓವರ್‌ಗಳಲ್ಲಿ 122 ರನ್ ಗಳಿಸುವ ಮೂಲಕ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿ ಎದುರಾಳಗಳ ಬೆವರಿಳಿಸಿದರು. ಇದನ್ನೂ ಓದಿ: 179 ರನ್‌ಗಳ ಗುರಿ ಬೆನ್ನತ್ತಿದ ನೇಪಾಳ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 96 ರನ್‌ಗಳನ್ನಷ್ಟೇ ಕಲೆಹಾಕುವಲ್ಲಿ ಶಕ್ತವಾಯಿತು. ಸೀತಾ ರಾಣಾ 22 ಎಸೆತಗಳನ್ನಾಡಿ, 3 ಬೌಂಡರಿ ಸಿಡಿಸಿ ಕೇವಲ 18 ರನ್‌ ಕಲೆಹಾಕಿದರು, ಇನ್ನೂ, ಮೂರನೇ ವಿಕೆಟ್‌ಗೆ ಸಿಂಧು 18 ಎಸೆತಗಳಲ್ಲಿ, 2 ಬೌಂಡರಿ ಭಾರಿಸಿ 14 ರನ್‌ ಕಲೆಹಾಕಿದರು. ಈ ಗೆಲುವಿನ ಮೂಲಕ ಭಾರತ ತಂಡ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದ್ದು ಶುಕ್ರವಾರ ತನ್ನ ಬದ್ದ ಎದುರಾಳಿಯಾದ ಪಾಕಿಸ್ತಾನದ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ನೋಡಲು ಫ್ಯಾನ್ಸ್‌ ಕಾತುರದಿಂದ ಕಾತಯುತ್ತಿದ್ದು, ಪಂದ್ಯವನ್ನು ಯಾರು ಗೆಲ್ಲುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...