ಈ ಸ್ಟಾರ್‌ ಬೌಲರ್‌ ಅನ್ನು ಕೈಬಿಡಲು ಮುಂದಾದ ಸನ್‌ ರೈಸರ್ಸ್‌ ಹೈದರಾಬಾದ್!‌ 14 ಪಂದ್ಯದಲ್ಲಿ 22 ವಿಕೆಟ್‌ ಕಬಳಿಸಿದ್ದ ವೇಗಿ ಆತ : ಉಮ್ರಾನ್ 2021 ರಲ್ಲಿ ಸನ್‌ ರೈಸರ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ವೇಗದ ಮೂಲಕವೇ ಎಲ್ಲರನ್ನೂ ಆಕರ್ಷಿಸಿದ್ದರು. ಆದರೆ ಕ್ರಮೇಣ ಉಮ್ರಾನ್ ಮಲಿಕ್ ಅವರ ಪ್ರದರ್ಶನ ಕಡಿಮೆಯಾಯಿತು. :ಐಪಿಎಲ್‌ 2025 ಮೆಗಾ ಹರಾಜಿನ ಮೊದಲು, ಅನೇಕ ಸ್ಟಾರ್ ಆಟಗಾರರ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಸಮಯದಲ್ಲಿ, ಐಪಿಎಲ್ 2024 ರ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸ್ ತಮ್ಮ ಸ್ಟಾರ್ ಬೌಲರ್ ಉಮ್ರಾನ್ ಮಲಿಕ್ ಅನ್ನು ಮುಂದಿನ ಋತುವಿನ ಮೊದಲು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ವರದಿಗಳು ವೈರಲ್‌ ಆಗುತ್ತಿದೆ. ಇದನ್ನೂ ಓದಿ: 2021 ರಲ್ಲಿ ಸನ್‌ ರೈಸರ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ವೇಗದ ಮೂಲಕವೇ ಎಲ್ಲರನ್ನೂ ಆಕರ್ಷಿಸಿದ್ದರು. ಆದರೆ ಕ್ರಮೇಣ ಉಮ್ರಾನ್ ಮಲಿಕ್ ಅವರ ಪ್ರದರ್ಶನ ಕಡಿಮೆಯಾಯಿತು. ಇದರೊಂದಿಗೆ, ಈ 'ಜಮ್ಮು ಎಕ್ಸ್‌ಪ್ರೆಸ್' ವೇಗದ ಬೌಲರ್ ಐಪಿಎಲ್ 2024 ರಲ್ಲಿ ಕೇವಲ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಈ ಕಾರಣದಿಂದ ಅವರನ್ನು ತಂಡದಿಂದ ರಿಲೀಸ್‌ ಮಾಡಲು ಯೋಜನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಮಾಹಿತಿ ಪ್ರಕಾರ, ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಉಮ್ರಾನ್ ಮಲಿಕ್ ಅವರನ್ನು ಖರೀದಿಸಲು ಹಲವು ತಂಡಗಳು ಆಸಕ್ತಿ ತೋರುತ್ತಿವೆ ಎಂದು ರಾಷ್ಟ್ರೀಯ ಕ್ರಿಕೆಟ್ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಉಮ್ರಾನ್ ಮಲಿಕ್ ಅವರ ಐಪಿಎಲ್ ವೃತ್ತಿಜೀವನವನ್ನು ನೋಡುವುದಾದರೆ, 2021 ರಲ್ಲಿ ಎಸ್‌ಆರ್‌ಹೆಚ್‌ಗೆ ಪಾದಾರ್ಪಣೆ ಮಾಡಿದ ಈ ಬಲಗೈ ಸೀಮರ್ ಆ ಸೀಸನ್‌ನಲ್ಲಿ ಮೂರು ಪಂದ್ಯಗಳನ್ನು ಆಡಿ ಎರಡು ವಿಕೆಟ್ ಪಡೆದರು. ಉಮ್ರಾನ್ ಮಲಿಕ್‌ʼಗೆ 2022 ಅತ್ಯುತ್ತಮ ಋತುವಾಗಿದೆ. 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದರು. ಅದರ ನಂತರ, 2023 ರ ಐಪಿಎಲ್ ಸೀಸನ್‌ನಿಂದ ಮಲಿಕ್ ಕೊಂಚ ಕುಗ್ಗಿದರು. ಕಳೆದ ಎರಡು ಸೀಸನ್‌ಗಳಲ್ಲಿ ಕೇವಲ 9 ಪಂದ್ಯಗಳನ್ನು ಆಡಿರುವ ಅವರನ್ನು ಇದೀಗ ರಿಲೀಸ್‌ ಮಾಡುವ ಸಾಧ್ಯತೆ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...