ಇನ್ಮುಂದೆ ಈ ಆಟಗಾರರು ಸಿಕ್ಸ್‌ ಬಾರಿಸಿದ್ರೆ ಔಟ್‌!! ವಿಚಿತ್ರ ನಿಯಮ ಜಾರಿಗೊಳಿಸಿದ ಸಮಿತಿ... ಸಿಕ್ಸರ್‌ ನಿಷೇಧಕ್ಕೆ ಕಾರಣವೇನು ಗೊತ್ತಾ? : ಸಿಕ್ಸರ್‌ʼಗಳನ್ನು ನಿಷೇಧಿಸುವ ಕಲ್ಪನೆಯು ವಿಚಿತ್ರವಾಗಿ ಕಾಣಿಸಬಹುದು. ಆದರೆ ಇದರ ಹಿಂದಿನ ಕಾರಣ ಇನ್ನಷ್ಟು ಕುತೂಹಲಕಾರಿಯಾಗಿದೆ. ಮೈದಾನದ ಸಮೀಪ ವಾಸಿಸುವ ಜನರು ತಮ್ಮ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ದೂರು ನೀಡಿದ್ದರಿಂದ ಕ್ಲಬ್ ಈ ನಿರ್ಧಾರ ಕೈಗೊಂಡಿದೆ. :ಕ್ರಿಕೆಟ್ ಆಟದಲ್ಲಿ ಬೌಂಡರಿ ಹಾಗೂ ಸಿಕ್ಸರ್ʼಗಳು ಪಂದ್ಯದ ಆಕರ್ಷಣೆಯ ಕೇಂದ್ರಬಿಂದು ಎಂಬುದು ತಿಳಿದೇ ಇದೆ. ಆದರೆ ಕ್ರಿಕೆಟ್ ಕ್ಲಬ್ ಆಫ್ ಇಂಗ್ಲೆಂಡ್ ಹೊಸ ನಿಯಮವೊಂದನ್ನು ಪರಿಚಯಿಸಿದ್ದು, ಆ ಮೂಲಕ ಒಂದು ಸಿಕ್ಸರ್ ಹೊಡೆದರೆ, ಬ್ಯಾಟ್ಸ್‌ಮನ್ ತನ್ನ ವಿಕೆಟ್ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳುತ್ತಿದೆ. ಇಂಗ್ಲೆಂಡ್ ಮೂಲದ ಸೌತ್ ವಿಕ್ ಮತ್ತು ಶೋರೆಹ್ಯಾಮ್ ಕ್ರಿಕೆಟ್ ಕ್ಲಬ್ ಆಟಗಾರರ ವಿರುದ್ಧ ಈ ವಿಚಿತ್ರ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಸಿಕ್ಸರ್‌ʼಗಳನ್ನು ನಿಷೇಧಿಸುವ ಕಲ್ಪನೆಯು ವಿಚಿತ್ರವಾಗಿ ಕಾಣಿಸಬಹುದು. ಆದರೆ ಇದರ ಹಿಂದಿನ ಕಾರಣ ಇನ್ನಷ್ಟು ಕುತೂಹಲಕಾರಿಯಾಗಿದೆ. ಮೈದಾನದ ಸಮೀಪ ವಾಸಿಸುವ ಜನರು ತಮ್ಮ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ದೂರು ನೀಡಿದ್ದರಿಂದ ಕ್ಲಬ್ ಈ ನಿರ್ಧಾರ ಕೈಗೊಂಡಿದೆ. ಇಷ್ಟೇ ಅಲ್ಲ, ಪಂದ್ಯ ವೀಕ್ಷಿಸಲು ಬರುವ ಜನರಿಗೆ ಗಾಯಗಳಾಗಿ, ವಾಹನಗಳಿಗೂ ಡ್ಯಾಮೇಜ್‌ ಆಗಿರುವ ಪ್ರಕರಣ ನಿರಂತರವಾಗಿ ಹೆಚ್ಚುತ್ತಿವೆ. ಈ ಸಮಸ್ಯೆಯನ್ನು ತಡೆಯಲು ಕ್ಲನ್‌ ಈ ನಿಯಮವನ್ನು ಮಾಡಲಾಗಿದೆ. ಈ ನಿಯಮದಲ್ಲಿ ಬ್ಯಾಟ್ಸ್ʼಮನ್ ಸಿಕ್ಸರ್ ಬಾರಿಸಿದರೆ ಔಟಾಗುತ್ತಾನೆ ಎಂಬ ನಿಬಂಧನೆಯೂ ಇದೆ. ಆದರೆ, ಮೊದಲ ಸಿಕ್ಸರ್ ಬಾರಿಸಿದರೆ ಬ್ಯಾಟ್ಸ್ʼಮನ್ ಗೆ ಎಚ್ಚರಿಕೆ ನೀಡಲಾಗುವುದು ಎಂಬುದು ಮಾತ್ರ ಇದರಲ್ಲಿನ ಸಡಿಲಿಕೆಯ ಅಂಶ. ಆದರೆ ಎಚ್ಚರಿಕೆ ನೀಡಿದ ನಂತರವೂ ಸಿಕ್ಸರ್ ಹೊಡೆದರೆ ಔಟಾಗುತ್ತಾರೆ. ಅಂದಹಾಗೆ ಮೊದಲ ಸಿಕ್ಸರ್‌ʼನ ಪಾಯಿಂಟ್‌ ತಂಡಕ್ಕೆ ಸಿಗುವುದಿಲ್ಲ. ಇದನ್ನೂ ಓದಿ: ಸೌತ್‌ವಿಕ್ ಮತ್ತು ಶೋರ್‌ಹ್ಯಾಮ್ ಕ್ರಿಕೆಟ್ ಕ್ಲಬ್‌ʼನ ಖಜಾಂಚಿ ಮಾರ್ಕ್ ಬ್ರೋಕ್ಸಪ್ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ವಿಮಾ ಕ್ಲೈಮ್‌ಗಳು ಮತ್ತು ಕಾನೂನು ಪ್ರಕ್ರಿಯೆಗಳಿಂದ ಉಂಟಾಗುವ ವೆಚ್ಚಗಳನ್ನು ತಪ್ಪಿಸಲು ಈ ನಿಯಮವನ್ನು ಮಾಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...