2025: ಮುಂಬೈ ಇಂಡಿಯನ್ಸ್‌ ತಂಡಕ್ಕೆ ಬಡಿದ ಸಿಡಿಲು..ರೋಹಿತ್‌ ಜೊತೆ ಸೇರಿ ತಂಡ ತೊರೆದ ಸ್ಟಾರ್‌ ಆಟಗಾರ..! 2025: ಐಪಿಎಲ್ 2025ರ ಹರಾಜು ಪ್ರಕ್ರಿಯೆ ಇನ್ನೇನು ಕೆಲವೇ ದಿನಗಲಲ್ಲಿ ಆರಂಭವಾಗಲಿದೆ. ಸೀಸನ್‌ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಲಿದೆ. ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರೆ. 2025:ಐಪಿಎಲ್ 2025ರ ಹರಾಜು ಪ್ರಕ್ರಿಯೆ ಇನ್ನೇನು ಕೆಲವೇ ದಿನಗಲಲ್ಲಿ ಆರಂಭವಾಗಲಿದೆ. ಸೀಸನ್‌ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಲಿದೆ. ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರೆ. ಮೆಗಾ ಹರಾಜು ನಿಯಮದ ಪ್ರಕಾರ ನಾಲ್ಕೈದು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿರುವ ಕಾರಣ ಎಲ್ಲಾ ತಂಡಗಳು ಸಂಪೂರ್ಣ ಬದಲಾಗಲಿವೆ. ಐಪಿಎಲ್ ಮೆಗಾ ಹರಾಜಿಗೆ ಬಿಸಿಸಿಐ ಈಗಾಗಲೇ ಯೋಜನೆ ಆರಂಭಿಸಿದೆ. ಈ ವರ್ಷ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಯುವ ಸಾಧ್ಯತೆ ಇದೆ. ಈ ಕ್ರಮದಲ್ಲಿ ಐಪಿಎಲ್ ಆಡಳಿತ ಮಂಡಳಿ ಧಾರಣ ನೀತಿ ರೂಪಿಸುವತ್ತ ಗಮನ ಹರಿಸಿದೆ. ಈಗಾಗಲೇ 10 ಫ್ರಾಂಚೈಸಿಗಳ ಮಾಲೀಕರೊಂದಿಗೆ ಚರ್ಚೆ ನಡೆಸಲಾಗಿದೆ ಎಂದೂ ವರದಿಯಾಗಿದೆ. ಇದೀಗ ಹೊರ ಬಂದಿರುವ ಮಾಹಿತಿಗಳ ಪ್ರಕಾರ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲು ಸಜ್ಜಾಗಿದ್ದಾರಂತೆ. ನಾಯಕತ್ವ ಬದಲಾವಣೆಯಿಂದ ಅತೃಪ್ತಿಗೊಂಡಿರುವ ಈ ಇಬ್ಬರು ಆಟಗಾರರು ಬೇರೆ ತಂಡಗಳಿಗೆ ಹೋಗಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: 2024ರ ಸೀಸನ್‌ಗೆ ಮುಂಚಿತವಾಗಿ, ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ನಂತರ ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ನಾಯಕನನ್ನಾಗಿ ಘೋಷಿಸಿತು. ಈ ನಿರ್ಧಾರದಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಗುಜರಾತ್‌ ತಂಡದ ನಾಯಕನಾಗಿದ್ದ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ತನ್ನ ತಂಡಕ್ಕೆ ಕರೆತರುವುದು ಅಷ್ಟೆ ಅಲ್ಲದೆ, ಅವರಿಗೆ ನಾಯಕತ್ವ ನೀಡಿದ್ದರು. ರೋಹಿತ್‌ ಬಿಟ್ಟು ಹಾರ್ದಿಕ್‌ ಪಾಂಡ್ಯಗೆ ನಾಯಕತ್ವ ನೀಡಿದ ಕಾರಣ ಇದು ತಂಡದಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ರೋಹಿತ್‌ ಬಿಟ್ಟು ಹಾರ್ದಿಕ್‌ಗೆ ನಾಯಕತ್ವ ಕೊಟ್ಟ ನಿರ್ಧಾರ ಸೂರ್ಯಕುಮಾರ್‌ ಯಾದವ್‌ ಅವರಿಗೆ ಕೊಂಚ ಕೂಡ ಇಷ್ಟ ಇರಲಿಲ್ಲ. ಇದೀಗ ಇದೇ ಕಾರಣದಿಂದ ರೋಹಿತ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ತಂಡ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಈ ಇಬ್ಬರಲ್ಲಿ ಒಬ್ಬರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತು ಇನ್ನೊಬ್ಬರು ಲಕ್ನೋ ಸೂಪರ್ ಜೈಂಟ್ಸ್‌ಗೆ ಹೋಗುತ್ತಾರೆ ಎಂಬ ವದಂತಿ ಕೇಳಿಬರುತ್ತಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಗೆದ್ದಿದೆ. ಆದರೆ, ರೋಹಿತ್ ಶರ್ಮಾ ಅವರ ವೃತ್ತಿಜೀವನ ಕೊನೆಗೊಳ್ಳುತ್ತಿದ್ದಂತೆ ಮುಂಬೈ ಇಂಡಿಯನ್ಸ್ ತಂಡದ ಭವಿಷ್ಯದ ಬಗ್ಗೆ ಯೋಚಿಸಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಆದರೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಇನ್ನೂ ಈ ಇಬ್ಬರು ಆಟಗಾರರು ನಿಜವಾಗಿಯೂ ತಂಡ ತೊರೆಯಲಿದ್ದಾರಾ ಎಂಬುದನ್ನು ಇನ್ನು ಮುಂದೆ ಅಷ್ಟೆ ಕಾದು ನೋಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...