ಕೊನೆಗೂ ಸಾನಿಯಾ ಮಿರ್ಜಾ ಕಾಯುವಿಗೆ ಸಿಕ್ಕಿತು ಫಲ..ಮುಖದಲ್ಲಿ ಅರಳಿತು ಮಂದಹಾಸ..ವೈರಲ್‌ ಆಯ್ತು ಮಿಸ್ಟರಿ ವ್ಯಕ್ತಿಯೊಂದಗಿನ ಚಿತ್ರ.. : ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಚ್ಛೇದನದ ನಂತರ ಸದಾ ಸುದ್ದಿಯಲ್ಲಿದ್ದಾರೆ .ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಂದು ಸ್ಟೋರಿ ಪೋಸ್ಟ್‌ ಮಾಡಿದ್ದು, ಈ ಪೋಸ್ಟ್‌ ಅಭಿಮಾನಿಗಳ ಚರ್ಚೆಗೆ ಗ್ರಾಸವಾಗಿದೆ. : ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಚ್ಛೇದನದ ನಂತರ ಸದಾ ಸುದ್ದಿಯಲ್ಲಿದ್ದಾರೆ .ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಂದು ಸ್ಟೋರಿ ಪೋಸ್ಟ್‌ ಮಾಡಿದ್ದು, ಈ ಪೋಸ್ಟ್‌ ಅಭಿಮಾನಿಗಳ ಚರ್ಚೆಗೆ ಗ್ರಾಸವಾಗಿದೆ. ಸಾನಿಯಾ ಇತ್ತೀಚೆಗೆ ಹಂಚಿಕೊಂಡಿರುವುದು ಒಬ್ಬ ವ್ಯಕ್ತಿಯೊಂದಗಿನ ಚಿತ್ರ, ಚಿತ್ರದಲ್ಲಿ ಸಾನಿಯ ನಗು ಮುಖದೊಂದಿಗೆ ಕಾಣಿಸಿಕೊಂಡಿದ್ದಾರೆ. ನಟಿಯ ಮುಖದ ಮೇಲಿನ ಮಂದಹಾಸ ಕಂಡ ಅಭಿಮಾನಿಗಳ ಸಾನಿಯ ಹಾಗೂ ಆ ವ್ಯಕ್ತಿಯ ಸಂಬಂಧದ ಕುರಿತು ಚರ್ಚೆ ಶುರುಮಾಡಿದ್ದಾರೆ. ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ನಿಂದ ವಿಚ್ಛೇದನ ಪಡೆದ ನಂತರ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಮತ್ತೊಂದೆಡೆ, ಸಾನಿಯಾ ವಿಚ್ಛೇದನದ ನಂತರ, ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದು, ಸಾನಿಯಾ ತನ್ನ ಮಗನನ್ನು ನೋಡಿಕೊಳ್ಳುತ್ತಾ ತನ್ನ ಬದುಕಿನ ಕಡೆಗೆ ಗಮನಹರಿಸುತ್ತಿದ್ದಾರೆ. ಇದನ್ನೂ ಓದಿ: ಜುಲೈ 21ರ ಭಾನುವಾರ ತಡರಾತ್ರಿ ಸಾನಿಯಾ ಮಿರ್ಜಾ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಾನಿಯಾ ಮಿರ್ಜಾ ಜೊತೆ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದು, ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ವಾಸ್ತವವಾಗಿ, ಸಾನಿಯಾ ಮಿರ್ಜಾ ಅವರೊಂದಿಗೆ ಚಿತ್ರದಲ್ಲಿ ಕಾಣುವ ವ್ಯಕ್ತಿಯ ಹೆಸರು ಪರೀಕ್ಷಿತ್ ಬಲೂಚಿ. ಅವರು ಈ ಹಿಂದೆಯೂ ಸಾನಿಯಾ ಜೊತೆ ಈತ ಕಾಣಿಸಿಕೊಂಡಿದ್ದಾನೆ. ಪರೀಕ್ಷಿತ್ ಬಲೂಚಿ ಜನಪ್ರಿಯ ಟ್ರಾವೆಲ್ ಬ್ಲಾಗರ್ ಆಗಿದ್ದು, ಅವರು 100 ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದಾರೆ. ರಾಜಸ್ಥಾನದ ಜೋಧ್‌ಪುರದಲ್ಲಿ ಜನಿಸಿದ ಪರೀಕ್ಷಿತ್ 12ನೇ ತರಗತಿವರೆಗೆ ಅಲ್ಲಿಯೇ ಓದಿದ್ದಾರೆ. ರೇಡಿಯೋ ಜಾಕಿಯಾಗಿ ಅವರ ವೃತ್ತಿಜೀವನವು ಅದ್ಭುತವಾಗಿದೆ. 2019 ರಲ್ಲಿ, ಪರೀಕ್ಷಿತ್ ಅವರಿಗೆ ವರ್ಷದ ಮಧ್ಯಪ್ರಾಚ್ಯ ಟ್ರಾವೆಲ್ ಬ್ಲಾಗರ್ ಎಂಬ ಬಿರುದನ್ನು ನೀಡಲಾಯಿತು. ಇದನ್ನೂ ಓದಿ: ಪರೀಕ್ಷಿತ್ ಸಾನಿಯಾ ಮಿರ್ಜಾ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ. ಸಾನಿಯಾ ದುಬೈನಲ್ಲಿ ಮನೆಯನ್ನು ಹೊಂದಿದ್ದಾಳೆ, ಅಲ್ಲಿ ಅವರು ಆಗಾಗ್ಗೆ ತಂಗುತ್ತಾರೆ ಇದರಿಂದಾಗಿ ಈ ಇಬ್ಬರು ಆಗಾಗ ಪರಸ್ಪರ ಭೇಟಿಯಾಗುತ್ತಿರುತ್ತಾರೆ. ವಿಚ್ಛೇದನದ ನಂತರ, ಸಾನಿಯಾ ಮಿರ್ಜಾ ಅವರ ಹೆಸರು ಹಲವಾರು ಸೆಲೆಬ್ರಿಟಿಗಳೊಂದಿಗೆ ಚರ್ಚೆಗೆ ಗ್ರಾಸವಾಗಿದೆ. ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿಯೊಂದಿಗೆ ಕೂಡ ಸಾನಿಯಾ ಹೆಸರು ತಳುಕು ಹಾಕಿಕೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...