- : ಹಾರ್ದಿಕ್ ಪಾಂಡ್ಯ-ನತಾಶಾ ಡಿವೋರ್ಸ್‌ಗೆ ಇದೇ ನೋಡಿ ಅಸಲಿ ಕಾರಣ! - : ಎರಡು ಬಾರಿ ಮದುವೆಯಾಗಿದ್ದ ಹಾರ್ದಿಕ್ ಮತ್ತು ನತಾಶಾ ಇದೀಗ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಹಾರ್ದಿಕ್ ಭಾಗವಹಿಸಿದ ಎಲ್ಲಾ ಪಂದ್ಯಗಳಲ್ಲಿ ನತಾಶಾ ಕಾಣಿಸಿಕೊಂಡಿರಲಿಲ್ಲ. ಕಳೆದ ಕೆಲ ತಿಂಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದು ವಿಚ್ಛೇದನ ವದಂತಿಗೆ ಪ್ರಮುಖ ಕಾರಣವಾಗಿತ್ತು. -Nataša Stanković:ಟೀಂ​ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಸರ್ಬಿಯನ್ ಮಾಡೆಲ್ ನತಾಶಾ ಸ್ಟಾಂಕೋವಿಕ್​ ೪ ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ. ಕಳೆದೊಂದು ತಿಂಗಳಿಂದ ಈ ಜೋಡಿಯ ಡಿವೋರ್ಸ್​ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಗುರುವಾರ (ಜುಲೈ 18) ತಮ್ಮಖಾತೆಯಲ್ಲಿ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್‌ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದರು. ಈ ಇಬ್ಬರ ಡಿವೋರ್ಸ್​ಗೆ ಕಾರಣವೇನು ಅನ್ನೋದರ ಬಗ್ಗೆ ಹಲವಾರು ಪ್ರಶ್ನೆಗಳು ಹುಟ್ಟುಕೊಂಡಿವೆ. ಇದರ ಮಧ್ಯೆ ಹಾರ್ದಿಕ್​ ಮತ್ತು ನತಾಶಾರ ಆಪ್ತ ಮೂಲಗಳಿಂದ ಸ್ಫೋಟಕ ಸಂಗತಿಯೊಂದು ಬಹಿರಂಗವಾಗಿದೆ. ಇದನ್ನೂ ಓದಿ: ಹೌದು, ಎರಡು ಬಾರಿ ಮದುವೆಯಾಗಿದ್ದ ಹಾರ್ದಿಕ್ ಮತ್ತು ನತಾಶಾ ಇದೀಗ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಹಾರ್ದಿಕ್ ಭಾಗವಹಿಸಿದ ಎಲ್ಲಾ ಪಂದ್ಯಗಳಲ್ಲಿ ನತಾಶಾ ಕಾಣಿಸಿಕೊಂಡಿರಲಿಲ್ಲ. ಕಳೆದ ಕೆಲ ತಿಂಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದು ವಿಚ್ಛೇದನ ವದಂತಿಗೆ ಪ್ರಮುಖ ಕಾರಣವಾಗಿತ್ತು. ಇದರ ಬಳಿಕ ನತಾಶಾ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಕೆಲವು ಬದಲಾವಣೆ ಮಾಡಿದ್ದರು. ಇದು ವಿಚ್ಛೇದನ ವಂದತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ನತಾಶಾ ತನ್ನ ಇನ್​ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಹಾರ್ದಿಕ್ ಹೆಸರು ಮತ್ತು ಫೋಟೋಗಳನ್ನು ತೆಗೆದುಹಾಕಿದ್ದರು. ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದ ಟಿ-20 ವಿಶ್ವಕಪ್​ನಲ್ಲಿ ಟೀಂ​ ಇಂಡಿಯಾ ಟ್ರೋಫಿ ಜಯಿಸಿತ್ತು. ಈ ವೇಳೆ ಕೆಲ ಆಟಗಾರರು ತಮ್ಮ ಕುಟುಂಬದ ಜೊತೆಗೆ ವಿಜಯೋತ್ಸವ ಆಚರಿಸಿದ್ದರು. ಆದರೆ ಹಾರ್ದಿಕ್‌ ಜೊತೆಗೆ ನತಾಶಾ ಕಾಣಿಸಿಕೊಂಡಿರಲಿಲ್ಲ. ಕೇವಲ ಹಾರ್ದಿಕ್‌ ಮಾತ್ರ ಮೈದಾನದಲ್ಲಿ ಟ್ರೋಫಿ ಹಿಡಿದುಕೊಂಡು ಪೋಸ್‌ ನೀಡಿದ್ದರು. ಇದು ಸಹ ಈ ಜೋಡಿಯ ನಡುವೆ ಏನೋ ಸರಿಯಿಲ್ಲ ಅನ್ನೋದಕ್ಕೆ ನಿದರ್ಶನವಾಗಿತ್ತು. ಇದನ್ನೂ ಓದಿ: ಹಾರ್ದಿಕ್​ ಮತ್ತು ನತಾಶಾ ನಡುವಿನ ಬ್ರೇಕಪ್​ಗೆ ಏನು ಕಾರಣ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಇಬ್ಬರ ನಡುವಿನ ಸಂವಹನದ ಕೊರತೆಯೇ ಡಿವೋರ್ಸ್‌ಗೆ ಕಾರಣ ಅಂತಾ ಅವರ ಆಪ್ತರೇ ಹೇಳಿದ್ದಾರೆ. ಇಬ್ಬರ ನಡುವಿನ ಮನಸ್ತಾಪ ಮತ್ತು ಜಗಳವನ್ನು ಪರಿಹರಿಸುವ ತಾಳ್ಮೆ ಇಬ್ಬರಲ್ಲೂ ಇರಲಿಲ್ಲ. ಹೀಗಾಗಿ ಮನಸ್ತಾಪ ದೊಡ್ಡದಾಗಿ ಡಿವೋರ್ಸ್​ಗೆ ಕಾರಣವಾಯಿತು. ಇದೇ ಮೂಲ ಕಾರಣವಾಗಿದ್ದು, ಯಾವುದೇ ರೀತಿಯ ಸುಳ್ಳು ಸುದ್ದಿ ಹಬ್ಬಿಸಬೇಡಿ ಅಂತಾ ಆಪ್ತರು ಮನವಿ ಮಾಡಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹಾರ್ದಿಕ್ ಮತ್ತು ನತಾಶಾ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ. ಮದುವೆ ಸಂಬಂಧದಲ್ಲಿ ಮುಂದುವರಿದರೆ ಅದು ಸಾಧ್ಯವಾಗುವುದಿಲ್ಲವೆಂದೂ ಸ್ಪಷ್ಟಪಡಿಸಿದ್ದಾರೆಂದು ಹೇಳಲಾಗಿದೆ. ಈ ಜೋಡಿ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ವಿಚ್ಛೇದನಕ್ಕೆ ಕೋರಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಾವು ಬೇರ್ಪಟ್ಟರೂ ಪರಸ್ಪರ ಗೌರವ ಕಳೆದುಕೊಳ್ಳುವುದಿಲ್ಲ ಹಾಗೂ ಪುತ್ರನ ಪೋಷಣೆಗೆ ಪ್ರಾಮುಖ್ಯತೆ ನೀಡುತ್ತೇವೆ ಅಂತಾ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...