ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ? - : ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಬಹಳ ಸಮಯದಿಂದ ಭಿನ್ನಾಭಿಪ್ರಾಯ ಮತ್ತು ವಿಚ್ಛೇದನದ ವರದಿಗಳು ಇದ್ದವು, ಇದೀಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಆ ಎಲ್ಲಾ ಸುದ್ದಿಗಳಿಗೆ ಅಂತ್ಯ ಹಾಡಿದ್ದಾರೆ. ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತ್ಯೇಕತೆಯ ಬಗ್ಗೆ ತಿಳಿಸಿದ್ದಾರೆ. - : ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಬರೋಡಾಕ್ಕೆ ಬಂದಿದ್ದು, ಅಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಇದೀಗ ಪೋಸ್ಟ್ ಮೂಲಕ ವಿಚ್ಛೇದನದ ಸುದ್ದಿ ನೀಡಿದ್ದಾರೆ. ಸರ್ಬಿಯಾದ ರೂಪದರ್ಶಿ ನತಾಶಾ ಒಂದು ದಿನದ ಹಿಂದೆ ತನ್ನ ದೇಶಕ್ಕೆ ಹೋಗಿದ್ದಾರೆ.. ಇನ್ನು ಹಾರ್ದಿಕ್ ಪಾಂಡ್ಯ ಅವರ ಆಸ್ತಿ ಮೌಲ್ಯ 100 ರಿಂದ 120 ಕೋಟಿ ರೂ. ಆಗಿದೆ.. ಮುಂಬೈ ಇಂಡಿಯನ್ಸ್‌ನಿಂದ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ವಾರ್ಷಿಕ 15 ಕೋಟಿ ರೂ. ಬಿಸಿಸಿಐ ವಾರ್ಷಿಕ ಒಪ್ಪಂದದಿಂದ 5 ಕೋಟಿ ರೂ. ಇದಲ್ಲದೇ ಜಾಹೀರಾತುಗಳಿಂದಲೂ ಹಣ ಪಡೆಯುತ್ತಾರೆ. ಇದನ್ನೂ ಓದಿ- ಬ್ರಾಂಡ್‌ಗಳಲ್ಲಿ ಗಲ್ಫ್ ಆಯಿಲ್, ಸ್ಟಾರ್ ಸ್ಪೋರ್ಟ್ಸ್, ಮಾನ್‌ಸ್ಟರ್ ಎನರ್ಜಿ ಮತ್ತು ಒಪ್ಪೋ ಸೇರಿವೆ. ಈ ಎಂಡಾರ್ಸ್‌ಮೆಂಟ್ ಡೀಲ್‌ಗಳು ಅವರ ಆದಾಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ, ಅವರು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ವಾರ್ಷಿಕವಾಗಿ ಸುಮಾರು 10-12 ಕೋಟಿ ಗಳಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ- ಇನ್ನು ನತಾಶಾ ಬಗ್ಗೆ ಮಾತನಾಡಿದರೆ ಆಕೆಯೂ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಾಳೆ. ನತಾಶಾ ಅವರ ನಿವ್ವಳ ಮೌಲ್ಯ ನೋಡುವುದಾದರೇ ಅವರು ಸುಮಾರು 20 ಕೋಟಿ ರೂ. ಆಗಿದೆ.. ಅವರು ಭಾರತೀಯ ಟೀ ಉದ್ಯಮದೊಂದಿಗೆ ಸಂಬಂಧ ಹೊಂದಿದ್ದಾರೆ. ಅಲ್ಲದೇ ಪ್ರಚಾರದಿಂದಲೂ.. ಜಾಹೀರಾತಿನಿಂದಲೂ ಗಳಿಸುತ್ತಾರೆ ಇಬ್ಬರನ್ನೂ ಹೋಲಿಕೆ ಮಾಡಿದರೆ ಹಾರ್ದಿಕ್‌ಗೆ ನತಾಶಾ ಸರಿಸಾಟಿಯೇ ಅಲ್ಲ. ಹಾರ್ದಿಕ್ ಪಾಂಡ್ಯ ಆಕೆಗಿಂತ ಐದು ಪಟ್ಟು ಶ್ರೀಮಂತ. ಪಾಂಡ್ಯ ಇನ್ನೂ ವೃತ್ತಿಪರ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಮುಂಬರುವ ವರ್ಷಗಳಲ್ಲಿ ಅವರ ಗಳಿಕೆ ಮತ್ತು ನಿವ್ವಳ ಮೌಲ್ಯವು ಮತ್ತಷ್ಟು ಹೆಚ್ಚಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...