ಸಾರಾ ಅಲ್ಲ... "ಗಿಲ್ ತುಂಬಾ ಮುದ್ದಾಗಿದ್ದಾರೆ" ಎಂದ ಬಾಲಿವುಡ್ ಸ್ಟಾರ್ ನಟಿ! ಶುಭ್ಮನ್‌ ಹೃದಯ ಕದ್ದಳೇ ಮತ್ತೋರ್ವ ಚೆಲುವೆ? ಯಾರೀಕೆ? : ಒಂದು ಬಾರಿ ಸಾರಾ ತೆಂಡೂಲ್ಕರ್‌ ಜೊತೆ ಗಿಲ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿದ್ದರೆ, ಇನ್ನೊಂದು ಬಾರಿ ನಟಿ ಸಾರಾ ಅಲಿ ಖಾನ್ ಜೊತೆ ಲವ್‌ʼನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಇವರಿಬ್ಬರನ್ನು ಹೊರತುಪಡಿಸಿ ಮತ್ತೋರ್ವ ನಟಿಯ ಹೆಸರು ಇದೀಗ ತಳುಕು ಹಾಕುತ್ತಿದೆ. ಮುಂಬೈ: ಶುಭ್ಮನ್‌ ಗಿಲ್ ಲವ್‌ ಮಾಡುತ್ತಿದ್ದಾರಾ? ಶುಭ್ಮನ್‌ ಮದುವೆಯಾಗಲಿದ್ದಾರಾ? ಶುಭ್ಮನ್‌ ಮದುವೆ ಯಾವಾಗ? ಸಾರಾ ಮತ್ತು ಶುಭ್ಮನ್‌ ಡೇಟಿಂಗ್‌ ಮಾಡುತ್ತಿದ್ದಾರಾ? ಹೀಗೆಲ್ಲಾ ಸಾವಿರಾರು ಪ್ರಶ್ನೆಗಳು ಪ್ರತಿನಿತ್ಯ ಯುವ ಕ್ರಿಕೆಟಿಗನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಒಂದು ಬಾರಿ ಸಾರಾ ತೆಂಡೂಲ್ಕರ್‌ ಜೊತೆಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿದ್ದರೆ, ಇನ್ನೊಂದು ಬಾರಿ ನಟಿ ಸಾರಾ ಅಲಿ ಖಾನ್ ಜೊತೆ ಲವ್‌ʼನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಇವರಿಬ್ಬರನ್ನು ಹೊರತುಪಡಿಸಿ ಮತ್ತೋರ್ವ ನಟಿಯ ಹೆಸರು ಇದೀಗ ತಳುಕು ಹಾಕುತ್ತಿದೆ. ಇದನ್ನೂ ಓದಿ: ಈ ಪಟ್ಟಿಗೆ ಸೇರ್ಪಡೆಯಾದ ನಟಿ ಬೇರಾರು ಅಲ್ಲ ರಿಧಿಮಾ ಪಾಠಕ್. ಈಕೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಸುದ್ದಿಗೆ ತೆರೆ ಎಳೆದಿದ್ದಾರೆ. ಕೆಲವು ದಿನಗಳ ಹಿಂದೆ ರಿಧಿಮಾ ಮತ್ತು ಗಿಲ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದೀಗ ರಿಧಿಮಾ ಅವರೇ ಈ ಸುದ್ದಿಯ ಬಗ್ಗೆ ತೆರೆದಿಟ್ಟಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಗಿಲ್ ಮತ್ತು ಅವರ ಸಂಬಂಧದ ವದಂತಿಗಳ ಬಗ್ಗೆ ಪ್ರಶ್ನಿಸಲಾಗಿತ್ತು. ಆಗ ಮಾತನಾಡಿದ ಅವರು, ''ನಾನು ಶುಭ್ಮನ್‌ ಜೊತೆ ಡೇಟಿಂಗ್ ಮಾಡುತ್ತಿಲ್ಲ. ಮೊದಲನೆಯದಾಗಿ, ನನಗೆ ಶುಭ್ಮನ್‌ ಪರಿಚಯವೇ ಇಲ್ಲ. ಆದರೆ ಅವರೊಬ್ಬ ಶ್ರೇಷ್ಠ ಕ್ರೀಡಾ ವ್ಯಕ್ತಿ ಎಂಬುದು ನನಗೆ ಗೊತ್ತು. ಶುಭ್ಮನ್‌ ತುಂಬಾ ಮುದ್ದಾದ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ಆದರೆ ನಮ್ಮ ನಡುವೆ ಏನೂ ಇಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕೆಲವು ದಿನಗಳ ಹಿಂದೆ, ರಿಧಿಮಾ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದರು, “ನನ್ನ ಮದುವೆಯ ಬಗ್ಗೆ ಸುದ್ದಿ ಹರಿದಾಡಿದ ಬಳಿಕ ನನಗೆ ಹಲವಾರು ಪತ್ರಕರ್ತರಿಂದ ಕರೆ ಬಂದಿತು. ಆದರೆ ನಾನು ಮದುವೆ ವಿಷಯದಲ್ಲಿ ಇಲ್ಲ. ನನ್ನ ಜೀವನದಲ್ಲಿ ಅಂತಹ ಮಹತ್ವದ ಘಟನೆ ನಡೆದರೆ, ನಾನು ವೈಯಕ್ತಿಕವಾಗಿ ಎಲ್ಲರಿಗೂ ತಿಳಿಸುತ್ತೇನೆ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ" ಎಂದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...