ಡಿವೋರ್ಸ್‌ ವದಂತಿ ಮಧ್ಯೆ ಪೋಸ್ಟ್‌ ಹಂಚಿಕೊಂಡು ಮನೆಬಿಟ್ಟು ಹೊರ ನಡೆದ ಹಾರ್ದಿಕ್‌ ಪಾಂಡ್ಯ ಪತ್ನಿ!! ವಿಚ್ಛೇದನ ಖಚಿತವೇ?? - : ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಯಾವುದು ಸರಿಯಾಗಿಲ್ಲ. ಕೆಲ ದಿನಗಳಿಂದ ಇಬ್ಬರ ನಡುವೆ ಮನಸ್ತಾಪವಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಈ ಮಧ್ಯೆ, ನತಾಶಾ ತನ್ನ ಮಗನೊಂದಿಗೆ ಮುಂಬೈನಿಂದ ತೆರಳಿದ್ದಾರೆ. : ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಅವರ ವಿಚ್ಛೇದನದ ಬಗ್ಗೆ ವರದಿಗಳು ಬಂದಿವೆ ಆದರೆ ಅದು ದೃಢಪಟ್ಟಿಲ್ಲ. ಇಬ್ಬರು ಬಹಳ ದಿನಗಳಿಂದ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗಷ್ಟೇ ಪಾಂಡ್ಯ ಅನಂತ್ ಅಂಬಾನಿ ಮದುವೆಗೂ ಒಬ್ಬರೇ ಹೋಗಿದ್ದರು. ಇನ್ನು ಕಳೆದ ಕೆಲವು ದಿನಗಳಿಂದ ನತಾಶಾ ಮತ್ತು ಹಾರ್ದಿಕ್ ವಿಚ್ಛೇದನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗಮನಿಸಬೇಕಾದ ಸಂಗತಿ. ಟಿ20 ವಿಶ್ವಕಪ್ ಗೆಲುವಿನ ನಂತರ ನತಾಶಾ ಮತ್ತು ಹಾರ್ದಿಕ್ ಬೇರ್ಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೊಂದು ಶುರುವಾಗಿತ್ತು.. ಅಲ್ಲದೇ ವಿಶ್ವಕಪ್ ಗೆಲುವಿನ ನಂತರ ಹಾರ್ದಿಕ್ ಅಥವಾ ಟೀಂ ಇಂಡಿಯಾದ ಯಾವುದೇ ಪೋಸ್ಟ್‌ನ್ನು ನತಾಶಾ ಹಂಚಿಕೊಂಡಿಲ್ಲ. ಇದೀಗ ನತಾಶಾ ಅವರ ಇನಸ್ಟಾ ಸ್ಟೋರಿವೊಂದು ಈ ಡಿವೋರ್ಸ್‌ ವದಂತಿಗೆ ಪುಷ್ಟೀ ನೀಡುತ್ತಿದೆ.. ಇದನ್ನೂ ಓದಿ- ವಾಸ್ತವವಾಗಿ, ನತಾಶಾ ತನ್ನ ಕಥೆಯಲ್ಲಿ ಬ್ಯಾಗ್ ಅನ್ನು ಪ್ಯಾಕ್ ಮಾಡುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.. ನತಾಶಾ ಅವರ ಈ ಪೋಸ್ಟ್‌ನಿಂದ ಅವರು ಪಾಂಡ್ಯ ಅವರನ್ನು ಶಾಶ್ವತವಾಗಿ ತೊರೆಯುತ್ತಾರೆ ಎಂಬ ಊಹಾಪೋಹಗಳು ನಡೆಯುತ್ತಿವೆ. ಆದರೂ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಬಹಿರಂಗಪಡಿಸಿಲ್ಲ. ವರದಿಯ ಪ್ರಕಾರ, ನತಾಶಾ ತನ್ನ ಮಗನೊಂದಿಗೆ ಸರ್ಬಿಯಾಕ್ಕೆ ಹೋಗುತ್ತಿದ್ದು, ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಹೀಗಾಗಿ ನತಾಶಾ ಹಾಗೂ ಹಾರ್ದಿಕ್‌ ಪಾಂದ್ಯ ಡಿವೋರ್ಸ್‌ ವದಂತಿ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...