: ಟೀಂ ಇಂಡಿಯಾ ಪ್ಲೇಯಿಂಗ್‌ ಪ್ರಕಟಿಸುವಲ್ಲಿ ಮುಂದೂಡಿಕೆ..ಕಾರಣ..? : ಟಿ20 ವಿಶ್ವಕಪ್ ಗೆದ್ದ ಭಾರತ, ಜಿಂಬಾಬ್ವೆ ವಿರುದ್ಧ ಪಂದ್ಯ ವಶಪಡಿಸಿಕೊಂಡು ಮತ್ತೊಂದು ಪ್ರವಾಸಕ್ಕೆ ಸಜ್ಜಾಗಿದೆ. ಇನ್ನು ಹತ್ತು ದಿನಗಳಲ್ಲಿ ಶ್ರೀಲಂಕಾ ಪ್ರವಾಸ ಆರಂಭವಾಗಲಿದ್ದು, ಲಂಕಾ ವಿರುದ್ಧ ಟೀಂ ಇಂಡಿಯಾ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಆದರೆ ಇನ್ನಞು ಕೇವಲ ಎಲವೇ ದಿನಗಳು ಬಾಕಿ ಇದ್ದರು ಟೀಂ ಇಂಡಿಯಾದ ಪ್ಲೇಯಿಂಗ್‌ ಫೈನಲ್‌ ಆಗುವಲ್ಲಿ ತಡ ಆಗುತ್ತಿದೆ. ಅದಕ್ಕೆ ಕಾರನ ರೋಹಿತ್‌ ಶರ್ಮಾ..! :ಟಿ20 ವಿಶ್ವಕಪ್ ಗೆದ್ದ ಭಾರತ, ಜಿಂಬಾಬ್ವೆ ವಿರುದ್ಧ ಪಂದ್ಯ ವಶಪಡಿಸಿಕೊಂಡು ಮತ್ತೊಂದು ಪ್ರವಾಸಕ್ಕೆ ಸಜ್ಜಾಗಿದೆ. ಇನ್ನು ಹತ್ತು ದಿನಗಳಲ್ಲಿ ಶ್ರೀಲಂಕಾ ಪ್ರವಾಸ ಆರಂಭವಾಗಲಿದ್ದು, ಲಂಕಾ ವಿರುದ್ಧ ಟೀಂ ಇಂಡಿಯಾ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಆದರೆ ಇನ್ನಞು ಕೇವಲ ಎಲವೇ ದಿನಗಳು ಬಾಕಿ ಇದ್ದರು ಟೀಂ ಇಂಡಿಯಾದ ಪ್ಲೇಯಿಂಗ್‌ ಫೈನಲ್‌ ಆಗುವಲ್ಲಿ ತಡ ಆಗುತ್ತಿದೆ. ಅದಕ್ಕೆ ಕಾರನ ರೋಹಿತ್‌ ಶರ್ಮಾ..! ಮೆಗಾಟೂರ್ನಮೆಂಟ್ ಗೆದ್ದ ನಂತರ ಭಾರತಕ್ಕೆ ಇದು ಎರಡನೇ ಪ್ರವಾಸವಾದರೂ, ಹಿರಿಯ ಆಟಗಾರರು ಕಣಕ್ಕೆ ಇಳಿಯುತ್ತಿರುವ ಮೊದಲ ಸರಣಿ ಇದಾಗಿದೆ. ಶುಭಮನ್ ಗಿಲ್ ನೇತೃತ್ವದ ಯುವ ತಂಡ ಜಿಂಬಾಬ್ವೆ ಪ್ರವಾಸಕ್ಕೆ ಹೋಗಿ ಪಂದ್ಯ ವಶಪಡೆಸಿಕೊಂಡಿದ್ದು ಗೊತ್ತೇ ಇದೆ. ಆದರೆ ಶ್ರೀಲಂಕಾ ಸರಣಿಯು ಟೀಂ ಇಂಡಿಯಾಗೆ ಅತ್ಯಂತ ನಿರ್ಣಾಯಕವಾಗಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹಾದಿಯು ಲಂಕಾ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಇದಲ್ಲದೆ, ಹೊಸ ಕೋಚ್ ಗೌತಮ್ ಗಂಭೀರ್ ಅವರು ಈ ಪ್ರವಾಸದೊಂದಿಗೆ ಕೋಚ್‌ನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದು, ನೂತನ ಕೋಚ್‌ಗೆ ಮೊದಲ ಪಂದ್ಯವೇ ದೊಡ್ಡ ತಲೆ ನೋವಾಗಿ ಕಾಡಿದೆ. ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಟಿ 20 ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಲಂಕಾ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ಬಗ್ಗೆ ಎಲ್ಲರ ಕುತೂಹಲ ಹೆಚ್ಚಿದೆ. ಇದನ್ನೂ ಓದಿ: ಈ ಹಿನ್ನಲೆಯಲ್ಲಿ ಕಳೆದೆರಡು ದಿನಗಳಿಂದ ಭಾರತ ತಂಡ ಘೋಷಣೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಜುಲೈ 17ಕ್ಕೆ ಬಿಸಿಸಿಐ ಖಂಡಿತಾ ತಂಡವನ್ನು ಪ್ರಕಟಿಸಲಿದೆ ಎಂಬ ಪ್ರಚಾರ ಜೋರಾಗಿ ಕೇಳಿಬಂದಿತ್ತು. ಆಯ್ಕೆ ಸಮಿತಿ ಸಭೆಯನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಕೋಚ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಬುಧವಾರದ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಈ ಸಭೆಯನ್ನುಗುರುವಾರಕ್ಕೆ (ಜುಲೈ 18) ಮುಂದೂಡಲಾಗಿದೆ. ಜುಲೈ 22 ರಂದು ಟೀಂ ಇಂಡಿಯಾ ಶ್ರೀಲಂಕ ಪ್ರವಾಸಕ್ಕೆ ತೆರಳಲಿದೆ. ಭಾರತ ತಂಡವನ್ನು ಶೀಘ್ರದಲ್ಲೇ ಪ್ರಕಟಿಸಬೇಕು ಎಂದು ಬಿಸಿಸಿಐ ಆರಂಭದಲ್ಲಿ ಯೋಚಿಸಿತ್ತು. ಆದರೆ ಹೊಸ ಕೋಚ್ ಗಂಭೀರ್ ಲಂಕಾ ಏಕದಿನ ಸರಣಿಗೆ ಹಿರಿಯ ಆಟಗಾರರನ್ನು ತಂಡದಲ್ಲಿ ಇರಬೇಕು ಎಂದ ಕಾರಣ ಆಯ್ಕೆಯನ್ನು ಮುಂದೂಡಲಾಗಿದೆ ಎಂದು ತೋರುತ್ತದೆ. ಏಕದಿನ ಪಂದ್ಯಗಳಿಗೆ ಲಭ್ಯವಾಗುವಂತೆ ರೋಹಿತ್ ಅವರನ್ನು ಬಿಸಿಸಿಐ ಕೇಳಿಕೊಂಡಿದ್ದು, ಟೀಂ ಇಂಡಿಯಾ ನಾಯಕ ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಸಮಯ ಕೇಳಿದ್ದಾರೆ ಎಂದು ವರದಿಯಾಗಿದೆ. ಇ ದೇ ಕಾರಣದಿಂದಾಗಿ ಇಧೀಗ ಶ್ರೀಲಂಕಾ ಪ್ರವಾಸಕ್ಕೆ ಇನ್ನು ಕೇವಲ ಕೆಲವೇ ದಿನಗಳು ಉಳಿದಿದ್ದರು ತಂಡದ ಪ್ರಕಟನೆಯಲ್ಲಿ ತಡವಾಗುತ್ತಿದೆಯಂತೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...