: ಹಣ, ಅಂತಸ್ತು ಬಂದ್ಮೇಲೆ ಬದಲಾದ ವಿರಾಟ್ ಕೊಹ್ಲಿ..! : ನಾನು ಮತ್ತು ಕೊಹ್ಲಿ ತುಂಬಾ ಆಪ್ತರಾಗಿದ್ದೆವು. ಆತನೊಂದಿಗೆ ನಾನು , ಸಮೋಸಾ ಸೇರಿದಂತೆ ಎಲ್ಲಾ ರೀತಿಯ ತಿಂಡಿ-ತಿನಿಸುಗಳನ್ನು ತಿಂದಿರುವೆ. ಆಗಿದ್ದ ಚೀಕುಗೂ (ಕೊಹ್ಲಿ) ಈಗಿನ ಕೊಹ್ಲಿಗೂ ತುಂಬಾ ವ್ಯತ್ಯಾಸವಿದೆ ಎಂದು ಅಮಿತ್‌ ಮಿಶ್ರಾ ಹೇಳಿದ್ದಾರೆ. :ಹಣ, ಅಂತಸ್ತು ಬಂದ ಮೇಲೆ ಟೀಂ ಇಂಡಿಯಾದ ಸ್ಟಾರ್ ಆಟಗಾರ, ರನ್‌ ಮಷಿನ್‌ ಖ್ಯಾತಿಯ ವಿರಾಟ್ ಕೊಹ್ಲಿ ಸಂಪೂರ್ಣ ಬದಲಾಗಿದ್ದಾರೆ. ಹೀಗೆ ಹೇಳಿದ್ದು ಕಿಂಗ್‌ ಕೊಹ್ಲಿಯ ಸಹ ಆಟಗಾರ ಅಮಿತ್‌ ಮಿಶ್ರಾ.. ಹೌದು, Podcastವೊಂದರಲ್ಲಿ ಮಾತನಾಡಿರುವ ಅವರು, ನೇಮ್‌ ಅಂಟ್‌ ಫೇಮ್‌ ಬಂದ ಮೇಲೆ ಕೊಹ್ಲಿ ಸಂಪೂರ್ಣ ಚೇಂಜ್‌ ಆಗಿದ್ದಾರೆ ಅಂತಾ ಹೇಳಿದ್ದಾರೆ. ʼನನಗೆಆರಂಭದಿಂದಲೂ ಗೊತ್ತು. ಆದರೆ ಅಂದು ಇದ್ದಂತಹ ಕೊಹ್ಲಿ ಈಗಿಲ್ಲ. ಹಣ, ಅಂತಸ್ತು ಬಂದ ಮೇಲೆ ಅವರು ಸಂಪೂರ್ಣ ಬದಲಾಗಿದ್ದಾರೆ. ನಮ್ಮಿಬ್ಬರ ನಡುವೆ ಮಾತುಕತೆ ಕೂಡ ನಿಂತಿದೆ. ಮೊದಲಿನಂತೆ ಅವರು ಈಗಿಲ್ಲ. ಇದಕ್ಕೆ ಅವರಿಗೆ ನೇಮ್‌ ಅಂಡ್‌ ಫೇಮ್‌ ಪ್ರಮುಖ ಕಾರಣ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ʼನಾನು ಮತ್ತು ಕೊಹ್ಲಿ ತುಂಬಾ ಆಪ್ತರಾಗಿದ್ದೆವು. ಆತನೊಂದಿಗೆ ನಾನು , ಸಮೋಸಾ ಸೇರಿದಂತೆ ಎಲ್ಲಾ ರೀತಿಯ ತಿಂಡಿ-ತಿನಿಸುಗಳನ್ನು ತಿಂದಿರುವೆ. ಆಗಿದ್ದ ಚೀಕುಗೂ (ಕೊಹ್ಲಿ) ಈಗಿನ ಕೊಹ್ಲಿಗೂ ತುಂಬಾ ವ್ಯತ್ಯಾಸವಿದೆ. ಇವೆಲ್ಲವೂ ಖ್ಯಾತಿ ಮತ್ತು ಹಣ ಬಂದ ಮೇಲೆ ಆಗಿರುವ ಬದಲಾವಣೆಗಳು ಅಂತಾ ಅಮಿತ್‌ ಮಿಶ್ರಾ ಹೇಳಿಕೊಂಡಿದ್ದಾರೆ. ಈ ಹಿಂದೆ ಕೊಹ್ಲಿ ಬಗ್ಗೆ ಯುವರಾಜ್‌ ಸಿಂಗ್‌ ಸಹ ಇದೇ ರೀತಿಯ ಹೇಳಿಕೆ ನೀಡಿದ್ದರು. ಯುವಿ ನೀಡಿದ್ದ ಹೇಳಿಕೆ ಸಖತ್‌ ಸುದ್ದಿಯಾಗಿತ್ತು. ʼನಾನು ಈಗ ಕೊಹ್ಲಿ ಜೊತೆಗೆ ಸಂಪರ್ಕದಲ್ಲಿ ಇಲ್ಲ. ಚೀಕು ಮತ್ತು ವಿರಾಟ್ ನಡುವೆ ತುಂಬಾ ವ್ಯತ್ಯಾಸವಿದೆ. ಅವರು ಸಾಕಷ್ಟು ಬದಲಾಗಿದ್ದಾರೆ. ಹೀಗಾಗಿ ನಾನು ಅವರಿಗೆ ಕರೆ ಮಾಡಿ ತೊಂದರೆ ನೀಡಲು ಬಯಸುವುದಿಲ್ಲʼವೆಂದು ಎಂದು ಯುವರಾಜ್ ಹೇಳಿದ್ದರು. ಇದನ್ನೂ ಓದಿ: ಇದೀಗ ಅಮಿತ್ ಮಿಶ್ರಾ ಸಹ ಯುವಿ ರೀತಿಯ ಹೇಳಿಕೆಯನ್ನೇ ನೀಡಿದ್ದಾರೆ. ಖ್ಯಾತಿ, ಅಧಿಕಾರ, ಹಣ-ಅಂತಸ್ತು ಬಂದ ಮೇಲೆ ಕೊಹ್ಲಿ ಸಂಪೂರ್ಣವಾಗಿ ಚೇಂಜ್‌ ಆಗಿದ್ದಾರೆ ಅಂತಾ ಹೇಳಿದ್ದಾರೆ.ಅವರ ಈ ಹೇಳಿಕೆಗೆ ಕೊಹ್ಲಿ ಅಭಿಮಾನಿಗಳು ಕೆಂಡಕಾರಿದ್ದು, ಬೆಳೆಯುವ ವ್ಯಕ್ತಿಯನ್ನು ಕಂಡು ಈ ರೀತಿ ಅಸೂಯೆ ಪಡುವುದು ಸರಿಯಲ್ಲವೆಂದು ತಿರುಗೇಟು ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...