ಶ್ರೀಲಂಕಾದ ಮಾಜಿ ಕ್ರಿಕೆಟಿಗನ ಹತ್ಯೆ..! ಭಾರತ ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾದಲ್ಲಿ ಆತಂಕದ ವಾತಾವರಣ... : ಭಾರತ ಕ್ರಿಕೆಟ್ ತಂಡ ಈ ತಿಂಗಳ ಅಂತ್ಯದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ, ಇದಕ್ಕೆ ಈಗಾಗಲೇ ವೇಳಾಪಟ್ಟಿ ಕೂಡ ಬಿಡುಗಡೆಯಾಗಿದ್ದು, ಹೊಸ ಕೋಚ್‌ ಆಗಿ ಗಂಭೀರ್‌ ಜವಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾ ಕ್ರಿಕೆಟ್‌ನಿಂದ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಮಾಜಿ ಕ್ರಿಕೆಟಿಗ ಧಮ್ಮಿಕಾ ನಿರೋಷನ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇದೇ ಕಾರಣದಿಂದ ಭಾರತ ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. :ಭಾರತ ಕ್ರಿಕೆಟ್ ತಂಡ ಈ ತಿಂಗಳ ಅಂತ್ಯದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ, ಇದಕ್ಕೆ ಈಗಾಗಲೇ ವೇಳಾಪಟ್ಟಿ ಕೂಡ ಬಿಡುಗಡೆಯಾಗಿದ್ದು, ಹೊಸ ಕೋಚ್‌ ಆಗಿ ಗಂಭೀರ್‌ ಜವಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾ ಕ್ರಿಕೆಟ್‌ನಿಂದ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಮಾಜಿ ಕ್ರಿಕೆಟಿಗ ಧಮ್ಮಿಕಾ ನಿರೋಷನ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇದೇ ಕಾರಣದಿಂದ ಭಾರತ ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ನಿರೋಶನ್, 41ರ ಹರೆಯದ ಮಾಜಿ ಕ್ರಿಕೆಟಿಗ ತನ್ನ ಕುಟುಂಬದೊಂದಿಗೆ ಗಾಲೆಯ ಅಂಲಂಗೋಡ ನಗರದಲ್ಲಿ ವಾಸಿಸುತ್ತಿದ್ದ. ಈತನ ಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ, ಶ್ರೀಲಂಕಾದ ಕ್ರಿಕೆಟ್‌ಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ, ಗಾಲೆ ಜಿಲ್ಲೆಯ ಅತ್ಯಂತ ಚಿಕ್ಕ ಪಟ್ಟಣವಾದ ಅಂಲಂಗೋಡಾದಲ್ಲಿ ವಾಸಿಸುತ್ತಿದ್ದ ನಿರೋಶನ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಮುಂದೆಯೇ ಕಿಡಿಗೇಡಿಗಳು ಕ್ರಿಕೆಟಿಗನನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ನಿರಂತರ ತನಿಖೆ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ, 41 ವರ್ಷದ ಈ ಮಾಜಿ ಕ್ರಿಕೆಟಿಗನನ್ನು ತನ್ನ ಮನೆಯಲ್ಲೇ ತನ್ನ ಕುಟುಂಬದವರ ಮುಂದೆ ಕೊಲೆ ಮಾಡಲಾಗಿದ್ದು, ಪ್ರಕರಣದ ಕುರಿತು ಯಾವುದೇ ಮಾಹಿತಿ ಪೋಲಿಸ್‌ ವಲಯದಿಂದ ಹೊರಬಂದಿಲ್ಲ. ಇದನ್ನೂ ಓದಿ: ಅಂಡರ್-19 ಕ್ರಿಕೆಟ್ ತಂಡದ ನಾಯಕರಾಗಿದ್ದ ಧಮ್ಮಿಕಾ ನಿರೋಷನ್ ಶ್ರೀಲಂಕಾ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಆಲ್ ರೌಂಡರ್ ಆಗಿದ್ದ ಅವರು 2001 ಮತ್ತು 2004 ರ ನಡುವೆ ಗಾಲೆ ಕ್ರಿಕೆಟ್ ಕ್ಲಬ್‌ಗಾಗಿ 12 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 8 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗನ ಸಾವು ಶ್ರೀಲಂಕಾದ ಕ್ರಿಕೆಟ್‌ ಅಭಿಮಾನಿಗಳಲ್ಲಿ ಆಘಾತ ತಂದಿದೆ. ಭಾರತದ ಶ್ರೀಲಂಕಾ ಪ್ರವಾಸದ ವೇಳಾಪಟ್ಟಿ 27 ಜುಲೈ - 1 ನೇ ಟಿ20, ಸಂಜೆ 7 ಕ್ಕೆ, ಪಲ್ಲೆಕೆಲೆ28 ಜುಲೈ - 2 ನೇ ಟಿ20, ರಾತ್ರಿ 7 ಕ್ಕೆ, ಪಲ್ಲೆಕೆಲೆ30 ಜುಲೈ - 3 ನೇ ಟಿ20, ಸಂಜೆ 7 ಕ್ಕೆ, ಪಲ್ಲೆಕೆಲೆ2 ಆಗಸ್ಟ್ - 1 ನೇ , 2.30 ಕ್ಕೆ, ಕೊಲಂಬೊ4 ಆಗಸ್ಟ್ - 2 ನೇ , 2.30 ಕ್ಕೆ, ಕೊಲಂಬೊ7 ಆಗಸ್ಟ್ - 3 ನೇ , 2.30 ಕ್ಕೆ, ಕೊಲಂಬೊ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...