"ನಾನು ಏನಾಗಿದ್ದರೂ ಅದು ಕೇವಲ ನಿನ್ನಿಂದಲೇ"..ತಾಯಿಯ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡ ರವೀಂದ್ರಾ ಜಡೇಜಾ : ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಿದ್ದಕ್ಕೆ ಇಡೀ ದೇಶ ಸಂಭ್ರಮಿಸುತ್ತಿದೆ. ತಂಡವು ಚಾಂಪಿಯನ್ ಆಗಿ ಭಾರತಕ್ಕೆ ಮರಳಿದಾಗ, ಮೊದಲು ದೆಹಲಿಯಲ್ಲಿ ಮತ್ತು ನಂತರ ಮುಂಬೈನಲ್ಲಿ ಐತಿಹಾಸಿಕ ಸ್ವಾಗತ ದೊರೆಯಿತು. ಇದಾದ ಬಳಿಕ ಕ್ರಿಕೆಟಿಗರು ತಮ್ಮ ತಮ್ಮ ನಗರಗಳಿಗೆ ಮರಳಿದರು, ತವರಿನಲ್ಲಿ ಆಟಗಾರರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದರು. ಒಬ್ಬಬ್ಬ ಆಟಗಾರರು ಕೂಡ ಒಂದೊಂದು ವಿಭಿನ್ನ ರೀತಿಯಲ್ಲಿ ವಿಜಯೋತ್ಸವವನ್ನು ಆಚರಿಸಿದರು. ಆದರೆ, ರವೀಂದ್ರ ಜಡೇಜಾ ಅವರ ಆಚರಣೆ ವಿಭಿನ್ನ ರೀತಿಯಲ್ಲಿದೆ. :ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಿದ್ದಕ್ಕೆ ಇಡೀ ದೇಶ ಸಂಭ್ರಮಿಸುತ್ತಿದೆ. ತಂಡವು ಚಾಂಪಿಯನ್ ಆಗಿ ಭಾರತಕ್ಕೆ ಮರಳಿದಾಗ, ಮೊದಲು ದೆಹಲಿಯಲ್ಲಿ ಮತ್ತು ನಂತರ ಮುಂಬೈನಲ್ಲಿ ಐತಿಹಾಸಿಕ ಸ್ವಾಗತ ದೊರೆಯಿತು. ಇದಾದ ಬಳಿಕ ಕ್ರಿಕೆಟಿಗರು ತಮ್ಮ ತಮ್ಮ ನಗರಗಳಿಗೆ ಮರಳಿದರು, ತವರಿನಲ್ಲಿ ಆಟಗಾರರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದರು. ಒಬ್ಬಬ್ಬ ಆಟಗಾರರು ಕೂಡ ಒಂದೊಂದು ವಿಭಿನ್ನ ರೀತಿಯಲ್ಲಿ ವಿಜಯೋತ್ಸವವನ್ನು ಆಚರಿಸಿದರು. ಆದರೆ, ರವೀಂದ್ರ ಜಡೇಜಾ ಅವರ ಆಚರಣೆ ವಿಭಿನ್ನ ರೀತಿಯಲ್ಲಿದೆ. ರವೀಂದ್ರ ಜಡೇಜಾ ತನ್ನ ಗೆಲುವಿನ ಕುರಿತು ಮಂಗಳವಾರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಜಡೇಜಾ ತನ್ನ ತಾಯಿಯೊಂದಿಗೆ ಇದ್ದಾರೆ. ಒಂದು ಕೈಯಲ್ಲಿ ಟ್ರೋಫಿ ಹಿಡಿದು ಇನ್ನೊಂದು ಕೈಯಿಂದ ತಾಯಿಯನ್ನು ಹಿಡಿದಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ನಾನು ಮೈದಾನದಲ್ಲಿ ಏನು ಮಾಡಿದರೂ ಅದು ನಿಮಗೆ ಸಮರ್ಪಣೆ ಎಂದು ಜಡೇಜಾ ಈ ಚಿತ್ರದೊಂದಿಗೆ ಜಡೇಜಾ ತಮ್ಮ ತಾಯಿಗಾಗಿ ಸ್ವವೀಟ್‌ ಮೆಸೇಜ್‌ಬರೆದಿದ್ದಾರೆ. ಇದನ್ನೂ ಓದಿ: ರವೀಂದ್ರ ಜಡೇಜಾ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎಂಬುದು ಕ್ರಿಕೆಟ್ ಪ್ರೇಮಿಗಳಿಗೆ ತಿಳಿದಿದೆ. ಟಿ20 ವಿಶ್ವಕಪ್ ಗೆದ್ದ ನಂತರ ಅವರು ಕ್ರಿಕೆಟ್‌ನ ಟಿ20 ಮಾದರಿಯಿಂದ ನಿವೃತ್ತಿ ಘೋಷಿಸಿದ್ದಾರೆ. ವಿಶ್ವಕಪ್ ಗೆಲುವನ್ನು ತಾಯಿಗೆ ಅರ್ಪಿಸಿದ ಕ್ರಿಕೆಟಿಗ ರವೀಂದ್ರ ಜಡೇಜಾ ಮಾತ್ರವಲ್ಲ. ಇವರ ಜೊತೆಗೆ ಮೊಹಮ್ಮದ್ ಸಿರಾಜ್ ಅವರು ಚಾಂಪಿಯನ್ ಆದ ನಂತರ ಮೊದಲ ಬಾರಿಗೆ ಮನೆಗೆ ತಲುಪಿದಾಗ, ಅವರು ತಮ್ಮ ವಿಶ್ವ ಕಪ್ ಪದಕವನ್ನು ತಮ್ಮ ತಾಯಿಗೆ ಹಾಕಿ ತಮ್ಮ ತಾಯಿಗೆ ಗೌರವ ಸಲ್ಲಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...