ಎಂಎಸ್ ಧೋನಿಯ ನಿಜವಾದ ಸಹೋದರ ಯಾರು ಗೊತ್ತಾ? ಮಹಿ ಬಯೋಪಿಕ್ ನಲ್ಲಿ ಅವರ ಉಲ್ಲೇಖವಿಲ್ಲ ಯಾಕೆ?!! : ಇತ್ತೀಚಿಗಷ್ಟೇ ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡ ಮಹೇಂದ್ರ ಸಿಂಗ್ ಧೋನಿ ದಂಪತಿ ಫೋಟೋ ವೈರಲ್ ಆಗುತ್ತಿರುವ ಬೆನ್ನಲ್ಲೇ ರೋಚಕ ಮಾಹಿತಿ ಒಂದು ಹೊರ ಬಿದ್ದಿದೆ. ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಎಂಎಸ್ ಧೋನಿ, ಎಂ ಎಸ್ ಡಿ, ಮಾಜಿ ಎಂದೇ ಪ್ರಸಿದ್ಧರಾಗಿದ್ದಾರೆ. ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಇವರು ಒಬ್ಬರು. ಇವರ ನಾಯಕತ್ವದಲ್ಲಿ ಟೀಮ್ ಇಂಡಿಯಾ 28 ವರ್ಷಗಳ ಬಳಿಕ 2011ರಲ್ಲಿ ಏಕದಿನ ವಿಶ್ವ ಕಪ್ ಗೆದ್ದುಕೊಂಡಿತ್ತು. ಮಹೇಂದ್ರ ಸಿಂಗ್ ಧೋನಿ ಅವರಿಗೆ ನಿಜವಾದ ಒಬ್ಬ ಅಣ್ಣನಿದ್ದಾನೆ ಹಾಗೂ ಈ ಕುರಿತಂತೆ ಯಾರಿಗೂ ತಿಳಿದಿಲ್ಲ, ಹಾರ್ಡ್ ಕೋರ್ ಎಂಎಸ್ ಧೋನಿ ಅಭಿಮಾನಿಗಳಿಗೂ ಈ ಮಾಹಿತಿ ತಿಳಿದಿಲ್ಲ. ಅವರು ಯಾರು ಗೊತ್ತಾ? ಹಾಗೂ ಎಂಎಸ್ ಧೋನಿ ಬಯೋಪಿಕ್ ನಲ್ಲಿ ಅವರ ಉಲ್ಲೇಖವಿಲ್ಲ ಯಾಕೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಇದನ್ನು ಓದಿ : ಮಹೇಂದ್ರ ಸಿಂಗ್ ಧೋನಿ ಅವರಿಗೆ ಒಬ್ಬ ಅಣ್ಣನಿದ್ದಾನೆ ಎಂದು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ರೋಚಕ ಮಾಹಿತಿ ಎಂದು ವೈರಲಾಗುತ್ತಿದೆ. ಮಹೇಂದ್ರ ಸಿಂಗ್ ಧೋನಿ ಅವರ ನಿಜವಾದ ಅಣ್ಣನ ಹೆಸರು ನರೇಂದ್ರ ಸಸಿಂಗ್ ಧೋನಿ. ಈ ಕುರಿತಂತೆ ಯಾರಿಗೂ ತಿಳಿದಿಲ್ಲ ಮತ್ತು ಎಂ ಎಸ್ ಧೋನಿ ಅವರ ಬಯೋಪಿಕ್ ಎಂಎಸ್ ಧೋನಿ ದಿ ಅಂಡ್ ಟೋಲ್ಡ್ ಸ್ಟೋರಿ ಸಿನಿಮಾದಲ್ಲಿಯೂ ಅವರ ಸಹೋದರನ ಕುರಿತು ಉಲ್ಲೇಖಿಸಿಲ್ಲ. ಎಂಎಸ್ ಧೋನಿ ಅವರ ತಂದೆ ತಾಯಿಗೆ ಜನಿಸಿದ ಮೊದಲ ಮಗ ನರೇಂದ್ರ ಸಿಂಗ್ ಧೋನಿ. ಧೋನಿ ಅವರಿಗಿಂತ 10 ವರ್ಷ ದೊಡ್ಡವರು. ಸಾಮಾನ್ಯ ಜೀವನ ನಡೆಸುತ್ತಿರುವ ಇವರು ರಾಜಕಾರಣಿಯಾಗಿದ್ದು 2013ರಲ್ಲಿ ಭಾರತೀಯ ಜನತಾ ಪಕ್ಷದಿಂದ ಬದಲಾದ ನಂತರ ಸಮಾಜವಾದಿ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಈಗ ರಾಜಕೀಯದಲ್ಲಿ ಸಕ್ರಿಯ ರಾಗಿದ್ದಾರೆ ಎನ್ನುವ ಮಾಹಿತಿ ಖಚಿತವಾಗಿಲ್ಲ. ಇವರು ರಾಂಚಿಯಲ್ಲಿ ವಾಸವಾಗಿದ್ದು, ಕೆಲವೊಮ್ಮೆ ಉತ್ತರಖಂಡದಲ್ಲಿ ಇರುತ್ತಾರೆ. ಇದನ್ನು ಓದಿ : ಇವರು 2007ರಲ್ಲಿ ವಿವಾಹವಾಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಧೋನಿ ಮತ್ತು ನರೇಂದ್ರ ಸಿಂಗ್ ಧೋನಿ, ಕೆಲವು ಭಿನ್ನಾಭಿಪ್ರಾಯಗಳಿಂದ ಇಬ್ಬರು ಮಾತನಾಡುತ್ತಿಲ್ಲ ಆ ಕಾರಣದಿಂದ ಬಯೋಪಿಕ್ ನಲ್ಲಿ ಅವರ ಉಲ್ಲೇಖವಿಲ್ಲ ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...