ಪತಿಯಿಂದ ವಿಚ್ಛೇದನ ಪಡೆದ ರೋಹಿತ್‌ ಶರ್ಮಾ ಮಾಜಿ ಪ್ರೇಯಸಿ..!ಆಧ್ಯಾತ್ಮ ಆಯ್ದುಕೊಂಡಿದ್ದೇಕೆ ಸುಂದರಿ..? : ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವುದು ಸಾಮಾನ್ಯವಾಗಿ ಹೋಗಿದೆ, ಅದರಲ್ಲೂ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವವರು ನಾಳೆ ಹಠಾತ್‌ ವಿಚ್ಛೆದನ ಘೋಷಿಸಿಬಿಡುತ್ತಾರೆ. ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವ ಸೆಲೆಬ್ರಿಟಿಗಳು ಒಂದಾಣಿಕೆ ಇಲ್ಲದೆ ದೂರವಾಗಲು ನಿರ್ಧರಿಸುತ್ತಾರೆ. :ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವುದು ಸಾಮಾನ್ಯವಾಗಿ ಹೋಗಿದೆ, ಅದರಲ್ಲೂ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವವರು ನಾಳೆ ಹಠಾತ್‌ ವಿಚ್ಛೆದನ ಘೋಷಿಸಿಬಿಡುತ್ತಾರೆ. ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವ ಸೆಲೆಬ್ರಿಟಿಗಳು ಒಂದಾಣಿಕೆ ಇಲ್ಲದೆ ದೂರವಾಗಲು ನಿರ್ಧರಿಸುತ್ತಾರೆ. ಇತ್ತೀಚಿಗೆ ಬಾಲಿವುಡ್ ಬೆಡಗಿ ಸೋಫಿಯಾ ಹಯಾತ್ ವಿಚ್ಛೇದನ ಪಡೆದು ಗಂಡನಿಂದ ದೂರವಾಗಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದ ಸೋಫಿಯಾ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಐಟಂ ಸಾಂಗ್‌ಗಳಲ್ಲಿ ಸ್ಟೆಪ್ಸ್‌ ಹಾಕುವ ಮೂಲಕ ಬಾಲಿವುಡ್‌ನಲ್ಲಿ ವಿಶೇಷ ಮನ್ನಣೆ ಪಡೆದಿದ್ದಾರೆ. ಬ್ರಿಟನ್‌ನ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸೋಫಿಯಾ ಹಯಾತ್ ಸಿನಿಮಾಗಳ ಮೇಲಿನ ಉತ್ಸಾಹದಿಂದ ಭಾರತಕ್ಕೆ ಬಂದು ನೆಲೆಸಿದ್ದಾರೆ. 'ಕ್ಯಾಶ್ ಅಂಡ್ ಕರಿ' ಚಿತ್ರದ ಮೂಲಕ ಇವರು ಸಿನಿಮಾಗೆ ಎಂಟ್ರಿ ಕೊಟ್ಟಿದ್ದು. ಅದರ ನಂತರ, ಅವರು ಸಿಕ್ಸ್ ಎಕ್ಸ್ ಮತ್ತು ಅಕ್ಸರ್ 2 ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧರಾದರು. ಈ ಸಮಯದಲ್ಲಿ, ಅವರು ಟೀಮ್ ಇಂಡಿಯಾ ನಾಯಕ ರೋಹಿತ್‌ ಶರ್ಮಾರೊಂದಿಗೆ ಕೆಲವು ದಿನಗಳ ಕಾಲ ಡೇಟ್ ಮಾಡಿದರು. ಇದನ್ನು ಆಕೆಯೇ ಬಹಿರಂಗ ಕೂಡ ಪಡಿಸಿದ್ದಳು. ಆ ಸಮಯದಲ್ಲಿ ಇಬ್ಬರು ಕ್ಲೋಸ್‌ ಆಗಿರುವ ಫೋಟೋಗಳೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದನ್ನೂ ಓದಿ: ಸೋಫಿಯಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ರೊಮೇನಿಯನ್ ಉದ್ಯಮಿಯನ್ನು ವಿವಾಹವಾದರು. ಆದರೆ ಇವರಿಬ್ಬರ ದಾಂಪತ್ಯ ಅತೀ ಹೆಚ್ಚು ಕಾಲ ಏನು ಉಳಿಯಲಿಲ್ಲ. ಮದುವೆಯಾದ ಒಂದು ವರ್ಷದಲ್ಲಿ ಸೋಫಿಯಾ ಗಂಡನಿಗೆ ವಿಚ್ಛೇದನ ನೀಡಿದ್ದಳು. ವಿಚ್ಛೇದನದ ನಂತರ ಹಾಟ್ ಗ್ಲಾಮರ್‌ನ ಮೂಲಕ ಯುವಕರನ್ನು ಸೋಫಿಯಾ ಹುಚ್ಚೆಬ್ಬಿಸಿದರು. ನಂತರ ಅದೇನಾಯ್ತೋ ಗೊತ್ತಿಲ್ಲ ಹಠಾತ್‌ ಗ್ಲಾಮರ್ ಜಗತ್ತನ್ನು ತೊರೆದು ನಟಿ ಆಧ್ಯಾತ್ಮಿಕ ಜಗತ್ತಿಗೆ ಕಾಲಿಟ್ಟಳು. ಗ್ಲಾಮರ್ ಜಗತ್ತನ್ನು ತ್ಯಜಿಸಿ ಸನ್ಯಾಸಿಯಾಗಿದ್ದೇನೆ ಎಂದು ಘೋಷಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...