ವಿರಾಟ್ ನಾಯಕತ್ವ ಕೈಬಿಟ್ಟ ಮೇಲೆ; ರೋಹಿತ್’ರನ್ನು ನಾಯಕನನ್ನಾಗಿ ಮಾಡಿದ್ದು ನಾನೇ... ಟೀಂ ಇಂಡಿಯಾದ ದಿಗ್ಗಜನ ಹೇಳಿಕೆ ವೈರಲ್ : ಟಿ20 ನಾಯಕತ್ವವನ್ನು ತ್ಯಜಿಸಿದ ನಿರ್ಧಾರವನ್ನು ಕೊಹ್ಲಿ ಮರುಪರಿಶೀಲಿಸಬೇಕೆಂದು ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಯಸಿದ್ದರು, ಆದರೆ ವಿರಾಟ್’ಗೆ ಈ ವಿಷಯದ ಬಗ್ಗೆ ನನಗೆ ಅರಿವಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಮತ್ತಷ್ಟು ಕೋಲಾಹಲವನ್ನುಂಟು ಮಾಡಿತ್ತು. :2021 ರ ನವೆಂಬರ್‌ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್’ನಲ್ಲಿ ಸ್ವಲ್ಪ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ವಿರಾಟ್ ಕೊಹ್ಲಿ T20Iನಿಂದ ನಾಯಕತ್ವದಿಂದ ಕೆಳಗಿಳಿದ ನಂತರ, ODIಗಳಲ್ಲಿಯೂ ಅವರ ಸ್ಥಾನದಿಂದ ವಜಾಗೊಳಿಸಲಾಯಿತು. ಇದು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು. ಇದನ್ನೂ ಓದಿ: ವನ್ನು ತ್ಯಜಿಸಿದ ನಿರ್ಧಾರವನ್ನು ಕೊಹ್ಲಿ ಮರುಪರಿಶೀಲಿಸಬೇಕೆಂದು ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಯಸಿದ್ದರು, ಆದರೆ ವಿರಾಟ್’ಗೆ ಈ ವಿಷಯದ ಬಗ್ಗೆ ನನಗೆ ಅರಿವಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಮತ್ತಷ್ಟು ಕೋಲಾಹಲವನ್ನುಂಟು ಮಾಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತ ಸ್ವಲ್ಪ ಸಮಯದ ನಂತರ, ಕೊಹ್ಲಿ ಭಾರತದ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದರು, 40 ಗೆಲುವುಗಳೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿದ್ದರು ಕೊಹ್ಲಿ. ಇನ್ನು ಇದಾದ ಬಳಿಕ ರೋಹಿತ್ ಶರ್ಮಾ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡರು. ಅಂದಹಾಗೆ ಈ ಬಗ್ಗೆ ಸೌರವ್ ಗಂಗೂಲಿ ಹೇಳಿಕೆಯೊಂದನ್ನು ನೀಡಿದ್ದು, ಸದ್ಯ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: "ನಾನು ರೋಹಿತ್‌’ಗೆ ನಾಯಕತ್ವವನ್ನು ಹಸ್ತಾಂತರಿಸಿದಾಗ ನನ್ನನ್ನು ಟೀಕಿಸಲಾಯಿತು. ಈಗ ನಾವು ಅವರ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದ್ದೇವೆ, ಯಾರೂ ನನ್ನನ್ನು ನಿಂದಿಸುತ್ತಿಲ್ಲ. ನಾನು ಅವರನ್ನು ನಾಯಕನನ್ನಾಗಿ ಮಾಡಿದೆ ಎಂಬುದನ್ನು ಎಲ್ಲರೂ ಮರೆತಿದ್ದಾರೆ" ಎಂದು ಗಂಗೂಲಿ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...