: ಮಲಗಿದ್ದಲ್ಲೇ ಹೃದಯ ಸ್ತಂಭನದಿಂದ 48ರ ಹರೆಯದ ಖ್ಯಾತ ನಟ ನಿಧನ! : 2021ರಲ್ಲಿ ವಿಕಾಸ್ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಾಗ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫಿಟ್‌ನೆಸ್ ಮತ್ತು ಸ್ಫೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ವಿ :48ರ ಹರೆಯದಲ್ಲೇ ಖ್ಯಾತ ಕಿರುತೆರೆ ನಟ ಇಹಲೋಕ ತ್ಯಜಿಸಿದ್ದು, ಕಿರುತೆರೆ ಲೋಕ ಶಾಕ್‌ ಆಗಿದೆ. ಹೌದು, ಹೃದಯ ಸ್ತಂಭನದಿಂದ ನಟ ವಿಕಾಸ್ ಸೇಥಿ ಭಾನುವಾರ (ಸೆ.8ರಂದು) ಮಲಗಿದ್ದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ನಟನ ಮೃತ ದೇಹವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 2000ನೇ ಇಸವಿಯ ಆರಂಭದಲ್ಲಿ ಹಿಂದಿಯಲ್ಲಿ ಜನಪ್ರಿಯತೆ ಗಳಿಸಿದ ನಟ ವಿಕಾಸ್ ಸೇಥಿ. ʼಕ್ಯುಂಕಿ ಸಾಸ್ ಭೀ ಕಭಿ ಬಹು ಥಿʼ ( ), ʼಕಹಿಂ ತೊ ಹೋಗಾʼ ( ) ಧಾರಾವಾಹಿಗಳಲ್ಲಿ ಅದ್ಭುತವಾಗಿ ನಟಿಸಿ ಹೆಸರು ಗಳಿಸಿದ್ದರು. ಈ ಸೀರಿಯಲ್‌ಗಳಲ್ಲಿನ ಅವರ ಅಭಿನಯ ಪ್ರೇಕ್ಷಕರನ್ನು ರಂಜಿಸಿತ್ತು. ಇದನ್ನೂ ಓದಿ: 2021ರಲ್ಲಿ ವಿಕಾಸ್ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಾಗ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫಿಟ್‌ನೆಸ್ ಮತ್ತು ಸ್ಫೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ವಿಕಾಸ್‌ ಕೆಲ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಇದಲ್ಲದೆ ಅವರು ಆರ್ಥಿಕ ತೊಂದರೆಗಳನ್ನು ಸಹ ಎದುರಿಸುತ್ತಿದ್ದರು. ವಿಕಾಸ್‌ ನಿರ್ಮಾಪಕರಾಗಿ ಸಿಕೆ ಪಿಕ್ಚರ್ಸ್‌ ಎನ್ನುವ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿದ್ದರು. ಸಿನಿಮಾದಲ್ಲೂ ಕಾಣಿಸಿಕೊಂಡಿದ್ದ ಅವರು ʼದೀವಾನಪನ್ʼ ಮತ್ತು ʼಕಭಿ ಖುಷಿ ಕಭಿ ಘಮ್ʼ ಎನ್ನುವ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ವಿಕಾಸ್‌ ಅವರು ಪತ್ನಿ ಜಾನ್ವಿ ಸೇಥಿ ಮತ್ತು ಅವಳಿ ಮಕ್ಕಳು ಹಾಗೂ ಲಕ್ಷಾಂತರಗಳನ್ನು ಅಗಲಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...