: ನವೆಂಬರ್‌ನಲ್ಲಿ ಉದ್ಯಮಿ ಜೊತೆ ನಟಿ ರಮ್ಯಾ ಮದುವೆ..? : ನಟಿ ರಮ್ಯಾ ಅವರು ಉದ್ಯಮಿ ಜೊತೆಗೆ ಮದುವೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆ ಉದ್ಯಮಿ ಕುಟುಂಬದ ಕಾರ್ಯಕ್ರಮದಲ್ಲಿ ರಮ್ಯಾ ಅವರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ. ರಮ್ಯಾರ ಹುಟ್ಟು ಹಬ್ಬದ ದಿನದಂದೇ (ನ.29) ಈ ಜೋಡಿ ಹೊಸ ಬದುಕಿಗೆ ಕಾಲಿಡಲಿದೆ ಅಂತಾ ಸಹ ವರದಿಯಾಗಿತ್ತು. :ಮೋಹಕ ತಾರೆ, ಸ್ಯಾಂಡಲ್‌ವುಡ್‌ ʼಪದ್ಮಾವತಿʼ ಖ್ಯಾತಿಯ ನಟಿ ರಮ್ಯಾ ಮದುವೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಹಲವಾರು ಬಾರಿ ರಮ್ಯಾ ಅವರ ಮದುವೆ ವಿಚಾರ ಹಾಟ್ ಟಾಪಿಕ್ ಆಗಿತ್ತು. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸಹ ಅವರ ಮದುವೆ ವಿಷಯ ಪ್ರಸ್ತಾಪವಾಗುತ್ತಿತ್ತು. ಇದೀಗ ನಟಿರ ಮದುವೆ ವಿಷಯ ಮತ್ತೊಮ್ಮೆ ಭಾರೀ ಸಂಚಲನ ಸೃಷ್ಟಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಸಖತ್‌ ಚರ್ಚೆ ಸಹ ಆಗುತ್ತಿದೆ. ಹೌದು, ರಾಜಸ್ಥಾನ ಮೂಲದ ಟೆಕ್ಸ್‌ಟೈಲ್ ಉದ್ಯಮಿಯೊಬ್ಬರ ಜೊತೆ ರಮ್ಯಾರ ನಿಶ್ಚಿತಾರ್ಥವಾಗಿದೆ ಅನ್ನೋ ವಿಚಾರ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ: ರಮ್ಯಾರ ಆಪ್ತರು ಹೇಳುವಂತೆ ಅಕ್ಟೋಬರ್ ತಿಂಗಳಿನಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಲಿದೆ ಅನ್ನೋ ಮಾಹಿತಿ ಸಹ ಹೊರಬಿದ್ದಿದೆ. ನಟಿ ರಮ್ಯಾ ಅವರು ಉದ್ಯಮಿ ಜೊತೆಗೆ ಮದುವೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆ ಉದ್ಯಮಿ ಕುಟುಂಬದ ಕಾರ್ಯಕ್ರಮದಲ್ಲಿ ರಮ್ಯಾ ಅವರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ. ರಮ್ಯಾರ ಹುಟ್ಟು ಹಬ್ಬದ ದಿನದಂದೇ (ನ.29) ಈ ಜೋಡಿ ಹೊಸ ಬದುಕಿಗೆ ಕಾಲಿಡಲಿದೆ ಅಂತಾ ಸಹ ವರದಿಯಾಗಿತ್ತು. ಇದನ್ನೂ ಓದಿ: ಮದುವೆ ಬಗ್ಗೆ ನಟಿ ರಮ್ಯಾ ಹೇಳಿದ್ದೇನು? ತಮ್ಮಸುದ್ದಿಗೆ ಸ್ವತಃ ನಟಿ ರಮ್ಯಾ ಅವರೇ ಪ್ರತಿಕ್ರಿಯಿಸಿದ್ದು, ಇದೊಂದು ಗಾಳಿ ಸುದ್ದಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದ್ದಾರೆ. ಈ ಹಿಂದೆಯೂ ಸಹ ಹಲವಾರು ಬಾರಿ ಮದುವೆ ಸುದ್ದಿ ಬಂದಾಗ ಅದನ್ನು ರಮ್ಯಾ ಅಲ್ಲಗಳೆಯುತ್ತಲೇ ಬಂದಿದ್ದರು. ಅದರಂತೆ ಈ ಬಾರಿಯೂ ಅವರು ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದೆಲ್ಲಾ ರೂಮರ್ಸ್‌, ಯಾರೂ ಸಹ ಈ ಸುಳ್ಳು ಸುದ್ದಿಗಳನ್ನು ನಂಬಬೇಡಿ ಅಂತಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...