: ರೇಣುಕಾಸ್ವಾಮಿ ಹತ್ಯೆ ಬಳಿಕ ಪವಿತ್ರಾಗೌಡ ಕರೆ ಮಾಡಿದ್ದು ಯಾರಿಗೆ? : ಈ ಪ್ರಕರಣದ ಪ್ರಮುಖ ಆರೋಪಿ ದರ್ಶನ್ ಗೆಳತಿ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತ್ತಿದ್ದು, ಕೋರ್ಟ್ ಕೆಲ ದಿನಗಳ ಹಿಂದಷ್ಟೇ ಈಕೆಯ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. :ಸೋಷಿಯಲ್‌ ಮೀಡಿಯಾದಲ್ಲಿ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿ ಜೈಲು ಪಾಲಾಗಿರುವ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್​ ಮತ್ತು ಗ್ಯಾಂಗ್​ನ ಕರಾಳ ಕೃತ್ಯಗಳು ಒಂದೊಂದೇ ಬಯಲಾಗುತ್ತಿದೆ. ಚಾರ್ಜ್​ಶೀಟ್​ನಲ್ಲಿ ಪೊಲೀಸರು ಉಲ್ಲೇಖಿಸಿರುವ ಆಘಾತಕಾರಿ ಅಂಶಗಳು ಡಿ-ಗ್ಯಾಂಗ್​ನ ಕರಾಳ ಮುಖವನ್ನು ತೆರೆದಿಟ್ಟಿವೆ. ಈ ಪ್ರಕರಣದ ಪ್ರಮುಖ ಆರೋಪಿ​ ಗೆಳತಿ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತ್ತಿದ್ದು, ಕೋರ್ಟ್​ ಕೆಲ ದಿನಗಳ ಹಿಂದಷ್ಟೇ ಈಕೆಯ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಇದೀಗ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದು, ಎಲ್ಲಾ ಅರೋಪಿಗಳಿಗೆ ಮತ್ತಷ್ಟು ಟೆನ್ಷನ್​ ಜಾಸ್ತಿ ಆಗಿದೆ. ಇದನ್ನೂ ಓದಿ: ಬೆಂಗಳೂರಿನ ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿ ಹತ್ಯೆ ಬಳಿಕ ಪ್ರಕರಣದ 2ನೇ ಆರೋಪಿ ನಟ ದರ್ಶನ್​ ಮನೆಗೆ ತೆರಳಿದ್ದು, ಮರುದಿನ ಸಂಜೆ ʼಡೆವಿಲ್ʼ​ ಶೂಟಿಂಗ್​ ನಿಮಿತ್ತ ಮೈಸೂರಿಗೆ ಹೊಗಿದ್ದ. ಇತ್ತ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾಗೌಡ ಹತ್ಯೆ ನಡೆದ ಮರುದಿನ ಬ್ಯೂಟಿ ಪಾರ್ಲರ್​ಗೆ ಹೋಗಿದ್ದಳಂತೆ. ಈ ಬಗ್ಗೆ ಪೊಲೀಸರು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದು, ಸಾಕ್ಷ್ಯಧಾರಗಳನ್ನು ಒದಗಿಸಿದ್ದಾರೆ. ಇದಲ್ಲದೆ ಪವಿತ್ರಾಗೌಡ ದರ್ಶನ್​ ಜೊತೆ ಪಟ್ಟಣಗೆರೆ ಶೆಡ್​ಗೆ ತೆರಳುವಾಗ ತಮ್ಮ ಸ್ನೇಹಿತರೊಬ್ಬರಿಗೆ ಕರೆ ಮಾಡಿದ್ದು, ರೇಣುಕಸ್ವಾಮಿ ವಿಚಾರವನ್ನು ಪ್ರಸ್ತಾಪಿಸಿದ್ದಾರಂತೆ. ಶೆಡ್​ನಲ್ಲಿ ಕೆಲಸ ಮುಗಿದ ಬಳಿಕ ಭೇಟಿಯಾಗುವುದಾಗಿ ಹೇಳಿದ್ದರಂತೆ. ಈ ಬಗ್ಗೆಯೂ ಪೊಲೀಸರು ಚಾರ್ಜ್​​ಶೀಟ್​ನಲ್ಲಿ ಉಲ್ಲೇಖಿಸಿದ್ದು, ಇದಕ್ಕೆ ಪೂರಕ ಸಾಕ್ಷಿಯನ್ನು ಕೋರ್ಟ್​​ಗೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕೊಲೆ ಪ್ರಕರಣ​ ಸಂಬಂಧ ಈಗಾಗಲೇ ಪೊಲೀಸರು ಕೋರ್ಟ್​​ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಒಂದೊಂದಾಗಿ ಕೊಲೆ ಪ್ರಕರಣದ ವಿವರಗಳು ಹೊರಬರುತ್ತಿವೆ. ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳ ಕುರಿತು ಹಲವು ವಿಚಾರಗಳು ಬಹಿರಂಗವಾಗಿದೆ. ಬಗೆದಷ್ಟು ಆಳವೆಂಬಂತೆ ಪ್ರಕರಣದಲ್ಲಿರುವ ಅಂಶಗಳು ಹೊರಬರುತ್ತಿದ್ದು, ಡಿ-ಗ್ಯಾಂಗ್‌ಗೆ ಜೈಲೂಟ್ ಖಾಯಂ ಅಂತಾ ಹೇಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...