ʼನನಗೆ ಪವಿತ್ರಾ ಜೊತೆ ಅಂತಹ ಸಂಬಂಧ..ʼ ಅಸಲಿ ಮ್ಯಾಟರ್ ಬಿಚ್ಚಿಟ್ಟ ನಟ ದರ್ಶನ್..!‌ : ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧದ ಬಗ್ಗೆ ಸ್ವತಃ ಡಿಸಿಪಿಯೇ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ. ಪವಿತ್ರಾ ಗೌಡ ಜೊತೆಗಿನ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ನಟ ದರ್ಶನ್ ಹೇಳಿದ್ದೇನು ಗೊತ್ತಾ? : ನಟ ದರ್ಶನ್ ಪವಿತ್ರ ಗೌಡ ಸ್ನೇಹಿತರೇ ಅಥವಾ ಪ್ರೇಮಿಗಳೇ? ಚಾರ್ಜ್ ಶೀಟ್ ನಲ್ಲಿ ಇಬ್ಬರ ನಡುವಿನ ಸಂಬಂಧ ಬಹಿರಂಗವಾಗಿದೆ. ಇವರಿಬ್ಬರ ನಡುವೆ ಅದೆಂಥಾ ಸಂಬಂಧವಿದೆಯೇ ಎಂಬ ಜನರ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ದರ್ಶನ್- ಪವಿತ್ರಾ ಸಂಬಂಧದ ಬಗ್ಗೆ ಖುದ್ದು ಡಿಸಿಪಿಯೇ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ. ತನಿಖೆಯಲ್ಲಿ ನಟ ದರ್ಶನ್ ಹೇಳಿದ್ದೇನು ಗೊತ್ತಾ? ಪವಿತ್ರಾಗೂ ನಿಮಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್. ನಮಗೆ ಮದುವೆ ಆಗಿಲ್ಲ... ಆದರೆ ದರ್ಶನ್ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದೇವೆ ಎಂದಿದ್ದಾರೆ. ಚಾರ್ಜ್ ಶೀಟ್ ನಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧವನ್ನೂ ಉಲ್ಲೇಖಿಸಲಾಗಿದೆ. ಪವಿತ್ರಾ ಗೌಡಗೆ ಕೆಟ್ಟ ಸಂದೇಶ ರವಾನಿಸಿದ ಕಾರಣಕ್ಕೆ ರೇಣುಕಾಸ್ವಾಮಿ ಅವರನ್ನು ದರ್ಶನ್ ಗ್ಯಾಂಗ್ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ನಟಿ ಪವಿತ್ರಾ ಗೌಡ ಮತ್ತು ನಟ ದರ್ಶನ್ ನಡುವೆ ಪ್ರೇಮ ಅಥವಾ ಪತಿ-ಪತ್ನಿ ಏನು ಸಂಬಂಧ ಎಂದು ಜನ ಗೊಂದಲಕ್ಕೀಡಾಗಿದ್ದರು.. ಆದರೆ ಈ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಇದನ್ನೂ ಓದಿ- ನಟಿ ಪವಿತ್ರಾ ಗೌಡ ನಟ ದರ್ಶನ್ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವೇಳೆ ಇಬ್ಬರಿಗೂ ಮದುವೆಯಾಗಿದೆ ಎಂದು ಊಹಿಸಲಾಗಿತ್ತು. ಆದರೆ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಇವರಿಬ್ಬರ ಸ್ನೇಹದ ಅಸಲಿ ಕಥೆ ಹೊರಬಿದ್ದಿದೆ. ಚಾರ್ಜ್ ಶೀಟ್ ನಲ್ಲಿ ದರ್ಶನ್ ಮತ್ತು ಪವಿತ್ರಾ ಸಂಬಂಧವನ್ನು ಉಲ್ಲೇಖಿಸಲಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಎ-1 ಪವಿತ್ರ ಗೌಡ ಹಾಗೂ ಎ2 ದರ್ಶನ್ ವಿರುದ್ಧ ಕೆಲ ವರ್ಷಗಳಿಂದ ವಿಚಾರಣೆ ನಡೆದಿದೆ ಎನ್ನಲಾಗಿದೆ. ಇವರಿಬ್ಬರೂ ಹಲವು ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಪವಿತ್ರ ಗೌಡ ಮತ್ತು ದರ್ಶನ್ ಹಲವಾರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಪವಿತ್ರಾ ಕೂಡ ದರ್ಶನ್ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಪವಿತ್ರಾ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ನಡುವೆ ಪೋಸ್ಟ್ ವಾರ್ ಕೂಡ ನಡೆದಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಬಂಧನವಾದಾಗ ಪೊಲೀಸರು ಸುದ್ದಿಗೋಷ್ಠಿ ನಡೆಸಿ ಪವಿತ್ರಾ ಗೌಡ ದರ್ಶನ್ ಪತ್ನಿ ಎಂದು ಹೇಳಿದ್ದರು. ಇದರಿಂದ ಮನನೊಂದ ವಿಜಯಲಕ್ಷ್ಮಿ ಪೊಲೀಸರಿಗೆ ಪತ್ರ ಬರೆದು, ದರ್ಶನ್ ಅವರ ಪತ್ನಿ ಪವಿತ್ರ ಗೌಡ ಎಂದು ಹೆಸರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಕಾನೂನು ಪ್ರಕಾರ ದರ್ಶನ್ ಪತ್ನಿ ಎಂದು ವಿಜಯಲಕ್ಷ್ಮಿ ಪತ್ರದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...