"ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮಾತಾಡ್ತಿದ್ದಾರೆ ಲೈಂಗಿಕ ಸಂಬಂಧದ ಬಗ್ಗೆ ಅಲ್ಲ" : ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೆ ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ವರದಿ ಪಡೆಯೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗಿದೆ. ಬೆಂಗಳೂರು:ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್‌ಕೌಚ್‌ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅನೇಕ ಕೇರಳ ನಟಿಯರು ತಮಗಾದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ಧಾರೆ. ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೆ ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ವರದಿ ಪಡೆಯೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗಿದೆ. ಫೈರ್ (ಫಿಲ್ಮಂ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ) ಸಂಘವು ಕರ್ನಾಟಕದಲ್ಲಿ ಸಮಿತಿಯೊಂದನ್ನು ರಚಿಸಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ವಿವರವಾದ ವರದಿ ಪಡೆಯಬೇಕೆಂದು ಸಿಎಂ ಬಳಿ ಮನವಿ ಮಾಡಿದ್ದಾರೆ. ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಅಗತ್ಯ ನೀತಿಗಳನ್ನು ರೂಪಿಸುವಂತೆಸಿಎಂಗೆ ಪತ್ರ ಬರೆದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಸಿನಿಮಾ ಇಂಡಸ್ಡ್ರಿಯವರು ಮನವಿ ಕೊಟ್ಟ ವಿಚಾರವಾಗಿ 'ಯುವರ್ ಸಿನ್ಸಿಯರ್‌ಲಿ ರಾಮ್' ಸಿನಿಮಾ ಮುಹೂರ್ತ ಸಮಾರಂಭ ವೇದಿಕೆಯಲ್ಲಿ ನಟ ಗಣೇಶ್‌ ಮತ್ತು ರಮೇಶ್‌ ಅರವಿಂದ ಮಾತನಾಡಿದ್ದಾರೆ. ಇದನ್ನೂ ಓದಿ: ಎಲ್ಲರಿಗೂ ಒಳ್ಳೆಯದಾಗಲಿ. ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನು ನಿಮ್ಮ ಸಿನ್ಸಿಯರ್‌ಲಿ ರಾಮ್ ಎಂದು ನಟ ಗಣೇಶ್ ಮಾತು ಮುಗಿಸಿದ್ದಾರೆ. ಇನ್ನೂ ಇದೇ ವೇಲೆ ಈ ಬಗ್ಗೆ ನಟ ರಮೇಶ್ ಅರವಿಂದ ಮಾತನಾಡಿದ್ದು, ಇದು ಚಿತ್ರರಂಗ ಅಂತ ಮಾತ್ರವಲ್ಲ ಗಂಡು ಹೆಣ್ಣು ಅಂತಾ ಕೆಲಸ ಮಾಡುವ ಯಾವ ಕ್ಷೇತ್ರದಲ್ಲಿಯೂ ಬರಲೇಬಾರದು. ಪುರುಷ ಅಥವಾ ಮಹಿಳೆ ಇರುವ ಕ್ಷೇತ್ರದಲ್ಲಿ ಸಮಾನತೆ ಸಿಗಲೇಬೇಕು. ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮಾತಾಡ್ತಿದ್ದಾರೆ ಲೈಂಗಿಕ ಸಂಬಂಧದ ಬಗ್ಗೆ ಅಲ್ಲ ಎಂದು ಹೇಳಿದರು. ಸಿನಿಮಾ ಇಂಡಸ್ಟ್ರಿ ಅಂತ ಮಾತ್ರ ಜನರಲೈಜ್ ಮಾಡಬೇಡಿ. ಅನ್ಯಾಯ ಆಗಿರೋರಿಗೆ ನ್ಯಾಯ ಸಿಗಬೇಕು. ಸಿನಿಮಾದಲ್ಲಿ ಮಾತ್ರ ಅಲ್ಲ ಸಮಾಜದಲ್ಲಿ ಎಲ್ಲೆ ಈ ಕಿರುಕುಳ ನಡೆದ್ರು ತಪ್ಪು. ನಾನು ಆಕ್ಡಿವಿಸ್ಟ್ ಅಲ್ಲ. ಆದ್ರೆ ಯಾರು ಹೋರಾಡ್ತಿದ್ದಾರೋ ಅವರಿಗೆ ಸಪೋರ್ಟ್ ಆಗಿ ಇರ್ತಿನಿ ಎಂದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...