ಬಿಗ್ ಬಾಸ್ ನಿರೂಪಣೆಗೆ ಬಂದೇ ಬಿಟ್ರು ಹೊಸ ಹೋಸ್ಟ್... ಪ್ರೋಮೋದಲ್ಲಿ ಸಿಕ್ತು ಬಿಗ್‌ ಸರ್‌ಪ್ರೈಸ್‌! : ಬಿಗ್ ಬಾಸ್ ಹೊಸ ಹೋಸ್ಟ್‌ವಿಚಾರ ಈ ಬಾರಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ದೊಡ್ಮನೆಯ ಸಾರಥಿ ಯಾರೆಂಬ ಪ್ರಶ್ನೆಗೆ ಜನರು ಉತ್ತರ ಹುಡುಕುತ್ತಿದ್ದರು. ಇದೀಗ ಖುದ್ದು ವಾಹಿನಿಯವರೇ ಪ್ರೋಮೋ ಮೂಲಕ ತಿಳಿಸಿದ್ದಾರೆ. :ಬಿಗ್ ಬಾಸ್ ನಿರೂಪಣೆಗೆ ಅಂತೂ ಇಂತೂ ಹೊಸ ಹೋಸ್ಟ್‌ ಸಿಕ್ಕಾಗಿದೆ. ಬಿಗ್‌ ಬಾಸ್ ತಮಿಳು ಸೀಸನ್ 8 ಅನ್ನು ವಿಜಯ್ ಸೇತುಪತಿ ಹೋಸ್ಟ್ ಮಾಡಲಿದ್ದಾರೆ.‌ ಇದು ಅವರ ಅಭಿಮಾನಿಗಳಿಗೆ ಸಂತಸ ನೀಡಿದೆ. ವಿಜಯ್ ಸೇತುಪತಿ ಹೋಸ್ಟ್ ಆಗಿರುವ ಬಗ್ಗೆ ಅಧಿಕೃತ ಪ್ರೋಮೋವನ್ನು ಚಾನೆಲ್ ಬಿಡುಗಡೆ ಮಾಡಿದೆ. ಕಮಲ್ ಹಾಸನ್ ಬಿಗ್ ಬಾಸ್ ತಮಿಳಿನ ಏಳು ಸೀಸನ್‌ಗಳನ್ನು ಹೋಸ್ಟ್ ಮಾಡಿದ್ದಾರೆ. ಆದರೆ ಅವರು ಎಂಟನೇ ಸೀಸನ್‌ನಿಂದ ಹೊರಬಂದರು. ಅದರ ನಂತರ ಬಿಗ್ ಬಾಸ್ ತಮಿಳು ಸೀಸನ್ 8 ರ ಹೋಸ್ಟ್ ಯಾರಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇತ್ತು. ಅಧಿಕೃತವಾಗಿ ನಟ ವಿಜಯ್ ಸೇತುಪತಿ ಕಾರ್ಯಕ್ರಮವನ್ನು ನಡೆಸಲಿದ್ದಾರೆ ಎಂದು ಖುದ್ದು ವಾಃಇನಿಯವರೇ ಘೋಷಿಸಿದ್ದಾರೆ. ಇದನ್ನೂ ಓದಿ: ವಿಜಯ್ ಸೇತುಪತಿ ಈಗಾಗಲೇ ಸನ್ ಟಿವಿಯಲ್ಲಿ ಮಾಸ್ಟರ್ ಚೆಫ್ ಎಂಬ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಇದೀಗ ಕಮಲ್ ಹಾಸನ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಗೆ ಹೋಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ವಿಜಯ್‌ಸೇತುಪತಿ ಮೇಲೆ ಬೆಟ್ಟದಷ್ಟು ನೀರಿಕ್ಷೆ ಹುಟ್ಟುಕೊಂಡಿದೆ. 😉😍 — (@) ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ, ವಿಜಯ್ ಸೇತುಪತಿ ದೊಡ್ಡ ಬಟ್ಟೆ ಅಂಗಡಿಗೆ ಕಾಲಿಟ್ಟಿದ್ದಾರೆ. ಎಲ್ಲಾ ಪುರುಷರ ಉಡುಪುಗಳನ್ನು ಇಡಲಾಗಿದೆ. ಅದರಲ್ಲಿ ಒಂದು ಬಟ್ಟೆಯನ್ನು ಮಾತ್ರ ಆರಿಸಿಕೊಳ್ಳುತ್ತಾರೆ. ಹೀಗೆ ಸಾಗುವ ಪ್ರೋಮೋ ಮೂಲಕ ಬಿಗ್‌ ಬಾಸ್‌ ತಮಿಳು ಸೀಸನ್‌8 ರ ಹೊಸ ಹೋಸ್ಟ್‌ ವಿಜಯ್‌ ಸೇತುಪತಿ ಎಂದು ಪರಿಚಯಿಸಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...