ಬಿಗ್ ಬಾಸ್‌ ಮನೆಗೆ ರಶ್ಮಿಕಾ ಮಂದಣ್ಣ ಬೆಸ್ಟ್‌ ಫ್ರೆಂಡ್‌ ಆಗಮನ: ಫಸ್ಟ್‌ ಟೈಂ ಅಲ್ಲ.... 2ನೇ ಸಲ ಸ್ಪರ್ಧಿಯಾಗಿ ಬರ್ತಿದ್ದಾಳೆ ಈ ಬ್ಯೂಟಿ!! : ನಾಲ್ಕನೇ ಸ್ಪರ್ಧಿಯಾಗಿ ಪ್ರವೇಶ ಪಡೆದವರು ಕನ್ನಡದ ಸ್ಟಾರ್‌ ನಟಿ. ಜೂನ್ 18, 1996 ರಂದು ಜನಿಸಿದ ಪ್ರೇರಣಾ ಮೂಲತಃ ತೆಲಂಗಾಣದ ಹೈದರಾಬಾದ್‌ʼನವರು. "ಹರ ಹರ ಮಹಾದೇವ" ಧಾರಾವಾಹಿಯ ಮೂಲಕ ಕನ್ನಡ ಧಾರಾವಾಗಿ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು. :ತೆಲುಗಿನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ಕಾರ್ಯಕ್ರಮ ಬಿಗ್ ಬಾಸ್. ಈ ಶೋನ ಹೊಸ ಸೀಸನ್‌ ಸೆಪ್ಟೆಂಬರ್ 1 ರಂದು ಪ್ರಾರಂಭವಾಗಿದೆ. ನಟ ನಾಗಾರ್ಜುನ ಅಕ್ಕಿನೇನಿ ಈ ರಿಯಾಲಿಟಿ ಶೋ ಅನ್ನು ಹೋಸ್ಟ್‌ ಮಾಡಲಿದ್ದಾರೆ. ಇದನ್ನೂ ಓದಿ: ಅಂದಹಾಗೆ ಈ ಶೋನಲ್ಲಿ ನಿಖಿಲ್ ಮಲಯಕ್ಕಲ್ ಎರಡನೇ ಸ್ಪರ್ಧಿ, ಮೂರನೇ ಸ್ಪರ್ಧಿಯಾಗಿ ಅಭಯ್ ನವೀನ್, ನಾಲ್ಕನೇ ಸ್ಪರ್ಧಿಯಾಗಿ ಪ್ರೇರಣಾ, ಐದನೇ ಸ್ಪರ್ಧಿಯಾಗಿ ಆದಿತ್ಯ ಓಂ, ಆರನೇ ಸ್ಪರ್ಧಿಯಾಗಿ ಸೋನಿಯಾ, ಏಳನೇ ಸ್ಪರ್ಧಿಯಾಗಿ ಮಧು ನೆಕ್ಕಂಟಿ (ಬೆಜವಾಡ ಬೇಬಕ್ಕ), ಎಂಟನೇ ಸ್ಪರ್ಧಿಯಾಗಿ ಆರ್ ಜೆ ಶೇಖರ್ ಭಾಷಾ, ಒಂಬತ್ತನೇ ಸ್ಪರ್ಧಿಯಾಗಿ ಕಿರಕ್ ಸೀತಾ, ಹತ್ತನೇ ಸ್ಪರ್ಧಿಯಾಗಿ ನಾಗಮಣಿಕಂಠ, ಹನ್ನೊಂದನೇ ಸ್ಪರ್ಧಿಯಾಗಿ ಪೃಥ್ವಿರಾಜ್, ವಿಷ್ಣುಪ್ರಿಯಾ ಹನ್ನೆರಡನೇ ಸ್ಪರ್ಧಿ, ಹದಿಮೂರನೇ ಸ್ಪರ್ಧಿಯಾಗಿ ನೈನಿಕಾ ಮತ್ತು ನಬೀಲ್ ಅಫ್ರಿದಿ ಹದಿನಾಲ್ಕನೇ ಸ್ಪರ್ಧಿಯಾಗಿ ಪ್ರವೇಶ ಪಡೆದಿದ್ದಾರೆ. ಇದರಲ್ಲಿ ನಾಲ್ಕನೇ ಸ್ಪರ್ಧಿಯಾಗಿ ಪ್ರವೇಶ ಪಡೆದವರು ಕನ್ನಡದ ಸ್ಟಾರ್‌ ನಟಿ. ಜೂನ್ 18, 1996 ರಂದು ಜನಿಸಿದ ಪ್ರೇರಣಾ ಮೂಲತಃ ತೆಲಂಗಾಣದ ಹೈದರಾಬಾದ್‌ʼನವರು. "ಹರ ಹರ ಮಹಾದೇವ" ಧಾರಾವಾಹಿಯ ಮೂಲಕ ಕನ್ನಡ ಧಾರಾವಾಗಿ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು. 2018 ರಲ್ಲಿ ಪ್ರೇರಣಾ "ಚೂರಿಕಟ್ಟೆ" ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಲ್ಲದೆ, ಪ್ರೇರಣಾ ಕನ್ನಡ ಚಲನಚಿತ್ರಗಳಾದ ಆನ, ಪೆಂಟಗನ್, ಫಿಸಿಕ್ಸ್ ಟೀಚರ್‌ ಮುಂತಾದವುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಇನ್ನು 2021 ರಲ್ಲಿ, ಪ್ರೇರಣಾ ಬಿಗ್ ಬಾಸ್ ಕನ್ನಡ ಮಿನಿ-ಸೀಸನ್‌ʼನಲ್ಲಿ ಸ್ಪರ್ಧಿಯಾಗಿ ಆಗಮಿಸಿದ್ದರು. ಪ್ರೇರಣಾ ಅವರ ಪತಿ ಹೆಸರು ಶ್ರೀಪಾದ್ ದೇಶಪಾಂಡೆ. ಅಂದಹಾಗೆ ರಶ್ಮಿಕಾ ಮಂದಣ್ಣ ಮತ್ತು ನಾನು ಕ್ಲೋಸ್‌ ಫ್ರೆಂಡ್, ಒಟ್ಟಾಗಿ ಆಡಿಷನ್‌ʼಗಳಿಗೆ ಹೋಗುತ್ತಿದ್ದೆವು ಎಂದು ಪ್ರೇರಣಾ ಒಂದೊಂಮೆ ಹೇಳಿಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...