ನಟಿ ಸಮಂತಾ ಆಸ್ಪತ್ರೆಗೆ ದಾಖಲು.! ಹೆಚ್ಚಾಯ್ತು ಫ್ಯಾನ್ಸ್‌ ಆತಂಕ : ಈ ಫೋಟೋದಲ್ಲಿ ಸಮಂತಾ ಕಾಲಿಗೆ ಸೂಜಿ ಚುಚ್ಚಿದಂತೆ ಭಾಸವಾಗುತ್ತದೆ. ಸಮಂತಾ ಅಭಿಮಾನಿಗಳು ಆಕೆಗೆ ಏನಾಯಿತು ಎಂದು ಗೊಂದಲದಲ್ಲಿದ್ದಾರೆ. ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಸಮಂತಾ ಕಾಲಿಗೆ ಸೂಜಿ ಚುಚ್ಚಿದಂತೆ ಭಾಸವಾಗುತ್ತದೆ. ಸಮಂತಾ ಅಭಿಮಾನಿಗಳು ಆಕೆಗೆ ಏನಾಯಿತು ಎಂದು ಗೊಂದಲದಲ್ಲಿದ್ದಾರೆ. ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಸಮಂತಾ ಗಾಯಗೊಂಡಿದ್ದಾರೆ ಎಂದು ತೋರುತ್ತದೆ. ಈ ಹಿನ್ನೆಲೆ ಅವರು ಚಿಕಿತ್ಸೆಗೆ ಒಳಗಾಗುವ ಫೋಟೋವನ್ನು ಹಂಚಿಕೊಂಡಿದ್ದಾರೆ. "ನಾನು ಗಾಯಗಳಿಲ್ಲದೆ ಆಕ್ಷನ್ ಸ್ಟಾರ್ ಆಗಬಹುದೇ?" ಎಂದು ಸಮಂತಾ ಈ ಫೋಟೋಗೆ ಕ್ಯಾಪ್ಷನ್‌ ನೀಡಿದ್ದಾರೆ. ಇದನ್ನೂ ಓದಿ: ಯಾವಾಗ ಗಾಯಗೊಂಡರು? ಇದು ಯಾವ ಸಿನಿಮಾ ಚಿತ್ರೀಕರಣದಲ್ಲಿ ನಡೆದಿದೆ? ಅದನ್ನು ಬಹಿರಂಗಪಡಿಸಿಲ್ಲ. ಈ ಫೋಟೋ ನೋಡಿದ ಅನೇಕ ನೆಟಿಜನ್‌ಗಳು ಬೇಗ ಗುಣಮುಖರಾಗಲಿ ಎಂದು ಕಾಮೆಂಟ್‌ ಮಾಡಿದ್ದಾರೆ. ನಟಿ ಸಮಂತಾ ದೀರ್ಘಕಾಲದವರೆಗೆ 'ಮಯೋಸಿಟಿಸ್' ನಿಂದ ಬಳಲುತ್ತಿದ್ದರು. ಹೊಸ ಸಿನಿಮಗಳನ್ನು ಕೂಡ ಮಾಡದೇ ಚಿಕಿತ್ಸೆಪಡೆಯುತ್ತಿದ್ದರು. ಇದೀಗ ಸಮಂತಾ ಮತ್ತೆ ಕಮ್‌ ಬ್ಯಾಕ್‌ ಮಾಡಿದ್ದಾರೆ. 'ಶಾಕುಂತಲಂ' ನಂತರ ಸಮಂತಾ ಅವರ ಮುಂದಿನ ಪ್ರಾಜೆಕ್ಟ್ 'ಸಿಟಾಡೆಲ್ ಹನಿ ಬನ್ನಿ'. ಇದೊಂದು ಆಕ್ಷನ್ ಥ್ರಿಲ್ಲರ್ ಆಗಿ ತಯಾರಾಗುತ್ತಿದೆ. ಅವರಿಗೆ ಜೋಡಿಯಾಗಿ ವರುಣ್ ಧವನ್ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...