ಉರ್ಫಿ ಜಾವೆದ್‌ ಜೊತೆ ಅನುಚಿತ ವರ್ತನೆ ತೋರಿದ 15 ವರ್ಷದ ಬಾಲಕ ! "ನಿಮ್ಮ ಮಕ್ಕಳಿಗೆ ಹೆಣ್ಣನ್ನು ಗೌರವಿಸುವುದನ್ನು ಕಲಿಸಿ" ಎಂದು ನಟಿ ಕಣ್ಣೀರು : ಉರ್ಫಿ ಜಾವೇದ್ ತನ್ನ ವಿಶಿಷ್ಟವಾದ ಫ್ಯಾಶನ್ ಸೆನ್ಸ್‌ನಿಂದ ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅವರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ 'ಫಾಲೋ ಕಾರ್ಲೋ ಯಾರ್' ಸರಣಿಯ ಮೂಲಕ ಸುದ್ದಿಯಲ್ಲಿದ್ದಾರೆ. :ಉರ್ಫಿ ಜಾವೇದ್ ತನ್ನ ವಿಶಿಷ್ಟವಾದ ಫ್ಯಾಶನ್ ಸೆನ್ಸ್‌ನಿಂದ ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅವರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ 'ಫಾಲೋ ಕಾರ್ಲೋ ಯಾರ್' ಸರಣಿಯ ಮೂಲಕ ಸುದ್ದಿಯಲ್ಲಿದ್ದಾರೆ. ಈ ಎಲ್ಲದರ ನಡುವೆ, ಉರ್ಫಿ ಜಾವೇದ್ ಘಟನೆಯೊಂದಕ್ಕೆ ಬಲಿಪಶುವಾಗಿದ್ದಾರೆ. ಇದರಿಂದಾಗಿ ನಟಿಯಷ್ಟೆ ಅಲ್ಲದೆ ಅವರ ಇಡೀ ಕುಟುಂಬ ಅಘಾತಕ್ಕೆ ಒಳಗಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ನಟಿ ತನ್ನ ಸಂಕಷ್ಟವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಉರ್ಫಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿʻನಾನಗೂ ನನ್ನ ಕುಟುಂಬದವರಿಗೂ ನಿನ್ನೆ ನಿರೀಕ್ಷಿಸಲಾಗದ ಅಘಾತಕಾರಿ ಘಟನೆಯೊಂದು ಸಂಭವಿಸಿದೆ. ದಾರಿಯಲ್ಲಿ ಹಾದು ಹೋಗುತ್ತಿರುವಾಗ ಹುಡುಗರ ಗುಂಪೊಂದು ನನ್ನ ಮುಂದೆ ಹಾದು ಹೋಯ್ತು ಅದರಲ್ಲಿದ್ದ ಒಬ್ಬ ಯುವಕ ನಿಮ್ಮ ದೇಹದ ಸೈಜ್‌ ಎಷ್ಟು ಎಂದ, ನನಗೆ ಬೇಸರ ತಂದ ವಿಷಯ ಏನು ಅಂದರೆ ಆ ಹುಡುಗನಿಗೆ ಇನ್ನೂ 15 ವರ್ಷ ವಯಸ್ಸಿರಬಹುದು. ಈ ವಯಸ್ಸಿನಲ್ಲಿಯೇ ಆ ಹುಡುಗ ಈ ರೀತಿ ಎಲ್ಲರ ಮುಂದೆ ವರ್ತಿಸಿದ್ದು, ನನಗೂ ನನ್ನ ಕುಟುಂಬದವರಿಗೂ ಬಹಳ ಬೇಸರವನ್ನುಂಟು ಮಾಡಿತು." ಉರ್ಫಿ ಜಾವೇದ್‌ಗಿಂತ ಮುಂಚೆಯೇ ಅನೇಕ ನಟಿಯರು ಈ ಮುಂಚೆ ಇಂತಹ ಅಪಘಾತಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. 15-16 ವರ್ಷದ ಹುಡುಗ ತನ್ನೊಂದಿಗೆ ಗುಂಪಿನಲ್ಲಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಸುಶ್ಮಿತಾ ಸೇನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...