ರೇಣುಕಾಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಆ ಮೆಸೇಜ್‌ ಓದಿ ಕರಿಯ ರೊಚ್ಚಿಗೆದ್ದಿದ್ದ..! ಶೆಡ್‌ನಲ್ಲಿ ಮುಹೂರ್ತ ಇಟ್ಟಿದ್ದ.. : ರೇಣುಕಾಸ್ವಾಮಿ ‌ಮೃತ‌ ದೇಹವನ್ನು ವಿಲೆವಾರಿ ಮಾಡಿ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಬಾರದಂತೆ ನೋಡಿಕೊಂಡು ಆರೋಪಿಗಳು ಸ್ಟೇಷನ್ ಗೆ ಹೋಗಿ ಸರೆಂಡರ್‌ ‌ಆಗಲು ದರ್ಶನ್ ಸೂಚಿಸಿದ್ದ.. ಆದರೆ ದಾಸನ ಪ್ಲ್ಯಾನ್‌ ಎಲ್ಲಾ ಉಲ್ಟಾಪಲ್ಟಾ ಆಗಿದೆ.. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಕರಿಯನ ಕೈವಾಡ ಏನು..? ಸಂಪೂರ್ಣ ವಿವರ ಇಲ್ಲಿದೆ.. : ಆತ ಒಂದು ಕರೆ ಮಾಡಿದ್ರೆ ಕ್ಷಣರ್ಧಾದಲ್ಲೇ ಬಗೆಹರಿಯುವಂತ ಸಮಸ್ಯೆ ಅದು. ಕಾನೂನಿನ ಬಗ್ಗೆ ಪುಂಕಾನುಪುಂಕವಾಗಿ ಡೈಲಾಗ್ ‌ಹೊಡೆಯುತ್ತಿದ್ದ ನಟ ಮಾಡಬಾರದ ಕೆಲಸ ಮಾಡಿ ಜೈಲು‌ ಸೇರಿದ್ದಾನೆ. ಈಗ ಆತನ ವಿರುದ್ಧ ಚಾರ್ಜ್ ಶೀಟ್ ಸಹ ಸಲ್ಲಿಕೆಯಾಗಿದೆ. ಹಾಗಾದ್ರೆ ಇಡೀ ಕೃತ್ಯದಲ್ಲಿ‌ ದರ್ಶನ್ ಪಾತ್ರ ಏನು ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ. ಯೆಸ್ ಚಿತ್ರದುರ್ಗದ ‌ ರೇಣುಕಾಸ್ವಾಮಿ ‌ನಟ ದರ್ಶನ್ ಗೆಳತಿ‌ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಗಳನ್ನ ಕಳುಹಿಸಿದ್ದ ಬಗ್ಗೆ ಪವನ್ ‌ಬಳಿ ಹೇಳಿಕೊಂಡಿದ್ದಳು. ಯಾವಾಗ ಕೆಟ್ಟ ಮೆಸೇಜ್ ಗಳನ್ನ ದರ್ಶನ್ ನೋಡಿದ್ನೋ ಜವಾಬ್ದಾರಿಯುತ ಸ್ಥಾನದಲ್ಲಿದ್ದವನು. ರೌದ್ರರೂಪ‌ ತಾಳಿದ್ದ ಎಲ್ಲೆ‌ ಇದ್ರು ಅವನನ್ನ‌ ಎತ್ತಾಕ್ಕೊಂಡು‌ ಬಾ ಅಂತ ತನ್ನ ಪಟಾಲಂಗೆ ಆಜ್ಞೆ ಮಾಡಿದ್ದ. ಇದನ್ನೂ ಓದಿ: ಯಾವಾಗ ಬಾಸ್ ಹೇಳಿದ್ರಲ್ಲ ಅಂತ ಪಕ್ಕಾ ಪ್ಲಾನ್ ಮಾಡಿದ ಚಿತ್ರದುರ್ಗದ ರಾಘವೇಂದ್ರ ಅಂಡ್ ಟೀಂ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ನೇರವಾಗಿ ಬಂದಿದ್ದು ಪಟ್ಟಣಗೆರೆ ಶೆಡ್ ಗೆ. ಆಗಲೇ ಸ್ಟೋನಿ ‌ಬ್ರೂಕ್ ನಲ್ಲಿ ಎಣ್ಣಿ ಪಾರ್ಟಿ ಮಾಡುತ್ತಿದ್ದ ದರ್ಶನ್‌ಗೆ ಕರೆ ಮಾಡಿ ಬನ್ನಿ ಬಾಸ್ ಇವನ್ನ ಕರೆದುಕೊಂಡು ಬಂದಿದ್ದೀವಿ ಎಂದು ಆರೋಪಿಗಳು ಕರೆ ಮಾಡಿದ್ರು. ಅಲ್ಲಿಂದ ನೇರವಾಗಿ ಶೆಡ್‌ಗೆ ಬಂದ ದಾಸ ರೇಣುಕಾಸ್ವಾಮಿ ಮೇಲೆ ಅಟ್ಟಹಾಸ ಮೆರೆದಿದ್ದ. ಬೂಟುಗಾಲಲ್ಲಿ ಒದ್ದು ಅಲ್ಲೇ ನಿಂತಿದ್ದ ಲಾರಿಗಳ ಮೇಲೆ ರೇಣುಕಾಸ್ವಾಮಿಯನ್ನು ಎತ್ತಿ ಬೀಸಾಡಿದ್ದ. ಹೀಗೆಯೇ ಡಿ ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿಯ ಕಥೆ ಮುಗಿಸಿಬಿಟ್ಟಿದ್ದರು. ನಂತರ ರೇಣುಕಾಸ್ವಾಮಿ ‌ಮೃತ‌ ದೇಹವನ್ನು ವಿಲೆವಾರಿ ಮಾಡಿ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಬಾರದಂತೆ ನೋಡಿಕೊಂಡು ಆರೋಪಿಗಳು ಸ್ಟೇಷನ್ ಗೆ ಹೋಗಿ ಸರೆಂಡರ್‌ ‌ಆಗಲು ದರ್ಶನ್ ಸೂಚಿಸಿದ್ದ. ಸರೆಡಂರ್ ಆದವರ ಕುಟುಂಬಕ್ಕೆ ಬೇಕಾದ ಆರ್ಥಿಕ ಸಹಾಯ ಮಾಡುವಂತೆ ಹೇಳಿ ಪ್ರದ್ಯೂಶ್ ಗೆ 30 ಲಕ್ಷ ಹಣವನ್ನು ದರ್ಶನ್ ಕೊಟ್ಟಿದ್ದ. ಇದನ್ನೂ ಓದಿ: ಹಣದ ಆಸೆಗಾಗಿ ನಾವೇ ಕೊಲೆ ಮಾಡಿದ್ದಾಗಿ ಸ್ಟೇಷನ್ ಗೆ ಹೋಗಿ ಲಾಕ್‌ ಆಗಿದ್ದ ಅರೋಪಿಗಳಿಗೆ ಪೊಲೀಸರು ‌ಬಿಸಿ ಮುಟ್ಟಿಸುತ್ತಿದ್ದಂತೆ ಅಸಲಿ ಸತ್ಯ ಬಾಯ್ಬಿಟ್ಟಿದ್ದರು. ಇಷ್ಟೆಲ್ಲಾ ‌ಆಗೋ ಒಳಗೆ ಮೈಸೂರಿನಿಂದ ದರ್ಶನ್ ನ್ನು ಕರೆದುಕೊಂಡು ‌ಬಂದ ಪೊಲೀಸರು ತನಿಖೆ ನಡೆಸಿದಾಗ ಅಸಲಿ ಸತ್ಯ ಗೊತ್ತಾಗಿದೆ. ಒಟ್ಟಿನಲ್ಲಿ ಇಡೀ‌ ಪ್ರಕರಣದಲ್ಲಿ ದರ್ಶನ್ ಕೈವಾಡ ಇರೋದು ಕನ್ಫರ್ಮ್ ಆಗಿದೆ. ರೇಣುಕಾಸ್ವಾಮಿ ಯನ್ನ ಕಿಡ್ನಾಪ್ ಮಾಡಿಕೊಂಡು ಬಂದು ಹಲ್ಲೆ ಮಾಡಿ, ಹತ್ಯೆಯಾದ ನಂತರ ಸಾಕ್ಷಿ ನಾಶ ಮಾಡುವರೆಗೂ ಕೂಡ ದರ್ಶನ್ ಕೈವಾಡ ಇರೋದು ತಿಳಿದು ಬಂದಿದೆ. ಇನ್ನೂ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಮುಂದೆ ಏನಾಗುತ್ತೆ ಅನ್ನೋ‌ ಭೀತಿಯಲ್ಲಿ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಕಂಗಲಾಗಿದ್ದಾನೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...