ಧಿಡೀರ್‌ ಮುಂಬೈಗೆ ಬಂದಿಳಿದ ನಟಿ ಅನುಷ್ಕಾ ಶರ್ಮಾ.. ವಿರಾಟ್‌ ಪತ್ನಿಯ ಅವತಾರ ನೋಡಿ ʼಯೆಪ್ಪಾ ಹಿಂಗ್ಯಾಕಾಗಿದ್ದಾರೆ ಅತ್ತಿಗೆʼ ಎಂದ ಫ್ಯಾನ್ಸ್!!‌ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತನ್ನ ಮಗ ಅಕಾಯ್ ಜನಿಸಿದ ನಂತರ ಲಂಡನ್‌ನಲ್ಲಿ ವಾಸಿಸುತ್ತಿದ್ದರು. ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮಕ್ಕಳೊಂದಿಗೆ ಲಂಡನ್‌ಗೆ ಶಿಫ್ಟ್ ಆಗಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಇದೆಲ್ಲರ ಮಧ್ಯೆ, ನಟಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.. :ನಟಿ ಅನುಷ್ಕಾ ಶರ್ಮಾ ಬುಧವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ... ನಟಿಯ ಧಿಡೀರ್‌ ವಾಪಸಾತಿಯನ್ನು ನೋಡಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ... ಅನುಷ್ಕಾ ಶರ್ಮಾ ಅವರು ಏರ್‌ಪೋರ್ಟ್‌ನಿಂದ ಹೊರಬಂದ ತಕ್ಷಣ ಪಾಪರಾಜಿಗಳು ಅವರನ್ನು ನೋಡಿ ನಗಲು ಪ್ರಾರಂಭಿಸಿದನ್ನು ವೀಡಿಯೊದಲ್ಲಿ ಕಾಣಬಹುದು. ವಿಡಿಯೋದಲ್ಲಿ ಅನುಷ್ಕಾ ಶರ್ಮಾ ಜೆಟ್-ಕಪ್ಪು ಪ್ಯಾಂಟ್ ಜೊತೆ ಕಪ್ಪು ಜಾಕೆಟ್ ಧರಿಸಿದ್ದರು. ಬಹಳ ಸಮಯದ ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಅವರನ್ನು ಒಬ್ಬಂಟಿಯಾಗಿ ನೋಡಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಊಹಾಪೋಹಗಳು ಶುರುವಾಗಿವೆ. ವಿರಾಟ್ ಕೊಹ್ಲಿ ಮತ್ತು ಅವರ ಇಬ್ಬರು ಮಕ್ಕಳು ನಟಿಯೊಂದಿಗೆ ಇರಲಿಲ್ಲ. ಹೀಗಿರುವಾಗ ಚಿತ್ರದ ಶೂಟಿಂಗ್ ಗಾಗಿ ಭಾರತಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಅನುಷ್ಕಾ ಮರಳುತ್ತಿರುವುದನ್ನು ನೋಡಿದ ಕೆಲ ಅಭಿಮಾನಿಗಳು ಆಕೆಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.. ಇದನ್ನೂ ಓದಿ- ಹೌದು ಅನುಷ್ಕಾ ಶರ್ಮಾ ಮುಂಬೈಗೆ ಮರಳಿದ ಬಗ್ಗೆ ಕೆಲವು ಅಭಿಮಾನಿಗಳು ಸಂತೋಷಪಟ್ಟರೆ, ಕೆಲವರು ಅವಳನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ಒಬ್ಬ ಬಳಕೆದಾರ ಕಾಮೆಂಟ್ ಮಾಡಿ, 'ಮೂರನೇ ಮಗುವಿಗೆ ತಯಾರಿ, ಅತ್ತಿಗೆ ದಪ್ಪ ಕಾಣುತ್ತಿದ್ದಾರೆ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, 'ಅವರು ಮೊದಲಿಗಿಂತ ಹೆಚ್ಚು ದಪ್ಪವಾಗಿದ್ದಾರೆ' ಎಂದು ಬರೆದಿದ್ದಾರೆ.. ಅನುಷ್ಕಾ ಶರ್ಮಾ ಅವರ ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೇ ಅವರು ಕೊನೆಯದಾಗಿ 2018 ರಲ್ಲಿ ಬಿಡುಗಡೆಯಾದ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ನಟಿಸಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...