ಸಖತ್ ಸದ್ದು ಮಾಡುತ್ತಿದೆ ಮಾರ್ಟಿನ್ ಸಿನಿಮಾದ "ಜೀವ ನೀನೇ" ಸಾಂಗ್!ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೇ ವ್ಯೂಸ್ ಮಾರ್ಟಿನ್ ಚಿತ್ರದ "ಜೀವ ನೀನೇ" ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರು :ಧ್ರುವ ಸರ್ಜಾ ಅವರ ಮಾರ್ಟಿನ್’ ಸಿನಿಮಾ ಇದೇ ಅಕ್ಟೋಬರ್ 11 ರಂದು ಭರ್ಜರಿಯಾಗಿ ರಿಲೀಸ್ ಆಗುತ್ತಿದೆ.ಚಿತ್ರದ ಟ್ರೀಲರ್ ಈಗಾಗಲೇ ಎಲ್ಲರಿಗೂ ಕಿಕ್ಕೇರಿಸಿತ್ತು. ಇದೀಗ ಚಿತ್ರದ ಹಾಡು ಕೂಡಾ 5 ಭಾಷೆಗಳಲ್ಲಿ ರಿಲೀಸ್ ಆಗಿದೆ. ಹಾಡು ರಿಲೀಸ್ ಆಗುತ್ತಿದ್ದ ಹಾಗೆ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಮಾರ್ಟಿನ್ ಸಿನಿಮಾ ಟ್ರೇಲರ್ ನಲ್ಲಿ ಭರ್ಜರಿ ಆ್ಯಕ್ಷನ್ ಇತ್ತು.ಈಗ ‘ಜೀವ ನೀನೆ..’ ಹೆಸರಿನ ರೊಮ್ಯಾಂಟಿಕ್ ಹಾಡನ್ನು ರಿಲೀಸ್ ಮಾಡಲಾಗಿದೆ.ಇದರಲ್ಲಿ ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ಅವರ ಕೆಮಿಸ್ಟ್ರಿ ಫ್ಯಾನ್ಸ್ ಗೆ ತುಂಬಾ ಇಷ್ಟ ಆಗಿದೆ. ಇದನ್ನೂ ಓದಿ : 'ಮಾರ್ಟಿನ್’ ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.ಮಣಿ ಶರ್ಮಾ ತೆಲುಗು ಸಿನಿಮಾಗಳಲ್ಲಿ ಖ್ಯಾತಿ ಪಡೆದಿದ್ದಾರೆ. ಅವರ ಸಂಗೀತ ಸಂಯೋಜನೆಯಲ್ಲಿ ‘ಜೀವ ನೀನೆ..’ ಹಾಡು ಮೂಡಿ ಬಂದಿದೆ.ಈ ಹಾಡನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಐದು ಭಾಷೆಗಳಲ್ಲೂ ಹಾಡು ಸೂಪರ್ ಆಗಿ ಮೂಡಿ ಬಂದಿದ್ದು ಹಿಂದಿ ಭಾಷೆಯ ಈ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.ಜೀವ ನೀನೇ ಹಾಡು ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೇ ವ್ಯೂಸ್ ಪಡೆದುಕೊಂಡಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...