ʼನಾನು ಒಂಟಿಯಾಗಿದ್ದೇನೆ..ʼ ನಟಿ ಕತ್ರಿನಾ ಕೈಫ್ ಶಾಕಿಂಗ್‌ ಹೇಳಿಕೆ! : ಬಾಲಿವುಡ್ ನಟಿ ಕತ್ರೀನಾ ಕೈಫ್ ತನ್ನ ಬ್ಯೂಟಿ ಮತ್ತು ಸ್ಮಾರ್ಟ್ ಪ್ರತ್ಯುತ್ತರಗಳಿಗೆ ಫೇಮಸ್‌ ಆಗಿದ್ದಾರೆ.. ಇದೀಗ ನಟಿ ವೈಯಕ್ತಿಕ ಜೀವನದ ವಿಚಾರದಿಂದ ಸುದ್ದಿಯಲ್ಲಿದ್ದಾರೆ.. : ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ವಿಕ್ಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದಾರೆ.. ಆದರೆ ಈ ಬ್ಯೂಟಿ ವೈಯಕ್ತಿಕ ಜೀವನದಿಂದ ಆಗ್ಗಾಗೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ಕತ್ರಿನಾ ಗರ್ಭಧರಿಸಿದ್ದಾರೆ ಎನ್ನುವ ಸುದ್ದಿ ತುಂಬಾ ವೈರಲ್‌ ಆಗಿತ್ತು.. ಬಹುಶಃ ಕ್ಯಾಟ್ ಗರ್ಭಿಣಿಯಾಗಿರಬಹುದು ಎಂದು ಕತ್ರಿನಾ ಅಭಿಮಾನಿಗಳು ಭಾವಿಸುತ್ತಿರುವಾಗ, ದಂಪತಿಗಳು ಪದೇ ಪದೇ ಈ ಸುದ್ದಿಯನ್ನು ಕೇವಲ ವದಂತಿ ಎಂದು ರಿಜೆಕ್ಟ್‌ ಮಾಡಿದ್ದರು.. ಇದನ್ನೂ ಓದಿ- ದೀಪಿಕಾ ಪಡುಕೋಣೆ ಅವರ ಡೆಲಿವರಿ ದಿನಾಂಕ ಸಮೀಪಿಸುತ್ತಿದೆ.. ಆದ್ದರಿಂದ ಕತ್ರಿನಾ ಅವರ ಕಡೆಯಿಂದ ಒಳ್ಳೆಯ ಸುದ್ದಿಯನ್ನು ನೀಡುತ್ತಾರೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಬಾಲಿವುಡ್ ಇಂಡಸ್ಟ್ರಿಯ ಜನಪ್ರಿಯ ನಟಿಯರ ಪಟ್ಟಿಯಲ್ಲಿ ಕತ್ರಿನಾ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಕತ್ರಿನಾಳ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕತ್ರಿನಾ ಕೈಫ್ ತನ್ನ ಕುಟುಂಬದ ಹೆಸರು ಕೇಳಿ ಭಾವುಕರಾಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಹೌದು, ಕತ್ರಿನಾ ಅವರ ಕುಟುಂಬದ ಬಗ್ಗೆ ಕೇಳಿದ ತಕ್ಷಣ 'ನನ್ನ ಕುಟುಂಬ ಭಾರತದಲ್ಲಿ ವಾಸಿಸದ ಕಾರಣ ನನಗೆ ತುಂಬಾ ಕಷ್ಟವಾಗಿದೆ. ನನ್ನ ತಾಯಿ ಇಲ್ಲಿ ವಾಸಿಸುತ್ತಿಲ್ಲ, ಅವರು ಮಧುರೈನಲ್ಲಿ ಶಾಲೆಯೊಂದರಲ್ಲಿ ವಾಸಿಸುತ್ತಿದ್ದಾರೆ. ನನ್ನ ಉಳಿದ ಸಹೋದರಿಯರು, ಕೆಲವರು ಅಮೇರಿಕಾದಲ್ಲಿದ್ದಾರೆ, ಕೆಲವರು ಲಂಡನ್‌ನಲ್ಲಿದ್ದಾರೆ... ಎಲ್ಲರೂ ಬೇರೆ ಬೇರೆ ದೇಶಗಳಲ್ಲಿದ್ದಾರೆ, ಹಾಗಾಗಿ ನನ್ನ ಕುಟುಂಬವನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ.. ನಾನು ಒಂಟಿಯಾಗಿದ್ದೇನೆ ಅನಿಸುತ್ತೆ ಅವರು ಇಲ್ಲಿ ನನ್ನೊಂದಿಗೆ ಇದ್ದರೆ ಹೇಗೆ ಎಂದು ನಾನು ಆಗಾಗ್ಗೆ ಯೋಚಿಸುತ್ತೇನೆ" ಎಂದು ನಟಿ ಹೇಳಿಕೊಂಡಿದ್ದಾರೆ..ಇದೀಗ ಆ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...