ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಜೋಡಿಗೆ ಗಂಡು ಮಗು? ಭವಿಷ್ಯ ನುಡಿದ ಸೆಲೆಬ್ರಿಟಿ ಮೆಹೆಂದಿ ಕಲಾವಿದೆ ವೀಣಾ ನಾಗ್ಡಾ ! : ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಂಬಾನಿ ಮದುವೆಯ ಸಂದರ್ಭದಲ್ಲಿ ದಂಪತಿಯನ್ನು ಭೇಟಿಯಾದ ಸೆಲೆಬ್ರಿಟಿ ಮೆಹೆಂದಿ ಕಲಾವಿದೆ ವೀಣಾ ನಗ್ಡಾ ಅವರು ದೀಪಿಕಾ ಹಾಗೂ ರಣವೀರ್‌ ಜೋಡಿಗೆ ಗಂಡು ಮಗುವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. :ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಂಬಾನಿ ಮದುವೆಯ ಸಂದರ್ಭದಲ್ಲಿ ದಂಪತಿಯನ್ನು ಭೇಟಿಯಾದ ಸೆಲೆಬ್ರಿಟಿ ಮೆಹೆಂದಿ ಕಲಾವಿದೆ ವೀಣಾ ನಗ್ಡಾ ಅವರು ದೀಪಿಕಾ ಹಾಗೂ ರಣವೀರ್‌ ಜೋಡಿಗೆ ಗಂಡು ಮಗುವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ, ದಂಪತಿಗಳು ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದು, ಸೆಪ್ಟೆಂಬರ್‌ನಲ್ಲಿ ದೀಪಿಕಾ ಮುಗುವಿಗೆ ಜನ್ಮ ನೀಡಿದ್ದು, ಅಭಿಮಾನಿಗಳಂತೂ ಶುಭ ಸುದ್ದಿ ತಿಳಿಯಲು ಕಾತುರದಿಂದ ಕಾಯುತ್ತಿದ್ದಾರೆ. ದೀಪಿಕಾ ಮತ್ತು ರಣವೀರ್‌ಗೆ ಹೆಣ್ಣು ಮಗುವಾಗುತ್ತಾ ಅಥವಾ ಗಂಡು ಮಗುವಾಗುತ್ತಾ ಎಂಬ ಕುತೂಹಲ ಎಲ್ಲರಲ್ಲಿದೆ. ಅದ್ಯ ಯ ಪ್ರೆಗ್ನೆಂಸಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. ಇತ್ತೀಚೆಗೆ, ಪ್ರಸಿದ್ಧ ಮೆಹೆಂದಿ ಕಲಾವಿದೆ ವೀಣಾ ನಗ್ಡಾ ಅವರು ರಣವೀರ್ ಸಿಂಗ್ ಅವರ ಭೇಟಿಯ ಬಗ್ಗೆ ಮಾತನಾಡಿದ್ದು, ಮಗುವಿನ ಲಿಂಗದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ವೀಣಾ ಅವರು ರಣವೀರ್ ಅವರನ್ನು ಎರಡು ವಿಭಿನ್ನ ಮದುವೆಗಳಲ್ಲಿ ಭೇಟಿಯಾಗಿದ್ದರು, ಒಂದು ರಾಮ್ ಚರಣ್ ಮತ್ತು ಇನ್ನೊಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ. ಈ ಸಮಾರಂಭದಲ್ಲಿ ವೀಣಾ ಅವರ ಬಳಿಗೆ ಹೋದ ನಟ ರಣವೀರ್‌ ಸಿಂಗ್‌ ನನಗೂ ಸ್ವಲ್ಪ ಮೆಹಂದಿ ಹಾಕಿ ಎಂದು ಜೋಕ್‌ ಮಾಡಿದಂತೆ, ಇದನ್ನು ನೋಡಿ ಇವರಿಗೆ ಗಂಡು ಮಗುವಾಗಲಿದೆ ಎಂದು ಭಾವಿಸಿದೆ ಎಂದು ಕಲಾವಿದೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮನರಂಜನಾ ಸುದ್ದಿ ಪೋರ್ಟಲ್ ಪಿಂಕ್ವಿಲ್ಲಾದ ಹಿಂದಿ ರಶ್ ಚಾನೆಲ್‌ನೊಂದಿಗಿನ ಅದೇ ಸಂದರ್ಶನದಲ್ಲಿ , ಮೆಹೆಂದಿ ಕಲಾವಿದೆ, ಯೇ ಜವಾನಿ ಹೈ ದೀವಾನಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ದೀಪಿಕಾ ಪಡುಕೋಣೆ ಅವರ ಕೈಗೆ ಮೆಹಂದಿ ಹಾಕಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಈ ಸಮಯದಲ್ಲಿ ನಟಿ ದೀಪಿಕಾಗೆ ವೀಣಾ ಅವರು ಹಾಕಿದ್ದ ಮೆಹಂದಿ ತುಂಬಾನೇ ಇಷ್ಟವಾಗಿತ್ತು, ಇದನ್ನು ನೋಡಿ ನನ್ನ ಮದುವೆಗೂ ಸಹ ನೀವೇ ಮೆಹಂದಿ ಹಾಕಬೇಕು ಎಂದು ನಟಿ ಹೇಳಿದ್ದರಂತೆ. ನಂತರ 2018ರಲ್ಲಿ, ದೀಪಿಕಾ ಮತ್ತು ರಣವೀರ್ ಮದುವೆಯಾದಾಗ, ನಟಿ ಕಲಾವಿದೆ ವೀಣಾ ಅವರನ್ನೆ ಮೆಹಂದಿ ಹಾಕಲು ಆಯ್ದುಕೊಂಡಿದ್ದರಂತೆ. ನಮಗೆಲ್ಲರಿಗೂ ತಿಳಿದಿರುವಂತೆ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾದರು. ಇದು ರಹಸ್ಯ ಮದುವೆಯಾಗಿದ್ದ ಕಾರಣ ಕೇವಲ ಕೆಲವೇ ಸೆಲೆಬ್ರಿಟಿಗಳು ಹಾಗು ಆಪ್ತರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...