ನಟ, ಡಿಸಿಎಂ ಪವನ್ ಕಲ್ಯಾಣ್ 3 ಮದುವೆಯ ಹಿಂದಿನ ಅಸಲಿ ಸತ್ಯವೇನು..! ನಿಜಕ್ಕೂ ಗ್ರೇಟ್‌ ಅನಿಸುತ್ತೆ.. : ನಟ, ಜನಸೇನಾ ಪಕ್ಷ ಸ್ಥಾಪಕ, ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಪಿಠಾಪುರದಿಂದ ಶಾಸಕರಾಗಿ ಸ್ಪರ್ಧಿಸಿ ಇಂದು ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಬದುಕಿನಲ್ಲಿ ಉನ್ನತ ಮಟ್ಟ ತಲುಪಿರುವ ಪವನ್ ವೈಯಕ್ತಿಕ ವಿಚಾರಗಳು ಆಗಾಗ ಟೀಕೆಗಳಿಗೆ ಕಾರಣವಾಗುತ್ತಿವೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.. :ಟಾಲಿವುಡ್ ಸ್ಟಾರ್ ಹೀರೋ ಆಗಿ ಒಳ್ಳೆ ಹೆಸರು ಗಳಿಸಿ, ಈಗ ರಾಜಕೀಯ ನಾಯಕರಾಗಿಯೂ ಹೆಸರು ಮಾಡಿರುವ ಪವನ್ ಕಲ್ಯಾಣ್ ಅವರು ಮೂರು ಮದುವೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇಂದು ಅವರ ಹುಟ್ಟುಹಬ್ಬ, ಈ ಸಂದರ್ಭದಲ್ಲಿ ಅವರಿಗೆ ಸಂಬಂಧಿಸಿದ ಹಲವು ವಿಷಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಪೈಕಿ ಅವರ ವಿವಾಹ ವಿಚಾರ ಮುನ್ನೆಲೆಗೆ ಬಂದಿದೆ.. ಟಾಲಿವುಡ್ ಚಿತ್ರರಂಗದ ಸ್ಟಾರ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಇತ್ತೀಚೆಗಷ್ಟೇ ಜನಸೇನಾ ಪಕ್ಷ ಸ್ಥಾಪಿಸಿ, ಪಿಠಾಪುರದಿಂದ ಶಾಸಕರಾಗಿ ಸ್ಪರ್ಧಿಸಿ ಇಂದು ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಬದುಕಿನಲ್ಲಿ ಉನ್ನತ ಮಟ್ಟ ತಲುಪಿರುವ ಪವನ್ ವೈಯಕ್ತಿಕ ವಿಚಾರಗಳು ಆಗಾಗ ಟೀಕೆಗಳಿಗೆ ಕಾರಣವಾಗುತ್ತಿವೆ.. ಈ ಪೈಕಿ ಪವರ್‌ ಸ್ಟಾರ್‌ ಮೂರು ಮದುವೆ ವಿಚಾರ ಸದಾ ಸದ್ದು ಮಾಡುತ್ತದೆ.. ಅಷ್ಟಕ್ಕೂ ಡಿಸಿಎಂ 3 ವಿವಾಹವಾಗಲು ಕಾರಣವೇನು..? ಬನ್ನಿ ತಿಳಿಯೋಣ.. ಇದನ್ನೂ ಓದಿ: ನಂದಿನಿ ರೆಡ್ಡಿ :ಪವರ್ ಸ್ಟಾರ್ ಪವನ್ ಕಲ್ಯಾಣ್ ಚಿತ್ರರಂಗಕ್ಕೆ ಬರುವ ಮುನ್ನ ತಮ್ಮ ಹಿರಿಯರ ನಿರ್ಧಾರದಂತೆ ನಂದಿನಿ ರೆಡ್ಡಿ ಎಂಬ ಹುಡುಗಿಯನ್ನು ಮದುವೆಯಾದರು. ಮದುವೆಯ ಆರಂಭದಲ್ಲಿ ದಂಪತಿಗಳು ಚೆನ್ನಾಗಿಯೇ ಇದ್ದರೂ ಕೆಲವು ದಿನಗಳ ನಂತರ ಸಣ್ಣ-ಪುಟ್ಟ ಜಗಳಗಳು ನಡೆದವು. ಜಗಳಗಳು ಸ್ವಲ್ಪ ದೊಡ್ಡದಾಗಿದ್ದರಿಂದ ಇಬ್ಬರೂ ಬೇರೆಯಾದರು. ಆದ್ರೆ ಚಿರು ಫ್ಯಾಮಿಲಿ ಇವರಿಬ್ಬರನ್ನು ಕೂಡಿಸಲು ಎಷ್ಟೇ ಪ್ರಯತ್ನ ಮಾಡಿದ್ರೂ ಇಬ್ಬರೂ ವಿಚ್ಛೇದನ ಪಡೆದರು. ರೇಣು ದೇಸಾಯಿ :ನಂದಿನಿ ನಂತರ ಪವನ್ ಕಲ್ಯಾಣ್ ಜನಪ್ರಿಯ ನಾಯಕಿ ಮತ್ತು ಮಾಡೆಲ್ ರೇಣು ದೇಸಾಯಿ ಅವರನ್ನು ಪ್ರೀತಿಸಿ ಮದುವೆಯಾದರು.. ಈ ಜೋಡಿಗೆ ಅಕಿರಾ ನಂದನ್ ಹುಟ್ಟಿದ ನಂತರ ಮಗನ ಸಮ್ಮುಖದಲ್ಲಿ ವಿವಾಹವಾದರು. ಆದರೆ ಹಣದ ವಿಚಾರ, ಪವನ್‌ ಅವರ ಅತೀಯಾದ ಸಹಾಯ ಗುಣ, ಹಣಕಾಸಿನ ನೆರವು ಇಬ್ಬರ ನಡುವೆ ಜಗಳಕ್ಕೆ ಕಾರಣವಾಯ್ತು ಅಂತ ಹೇಳಲಾಗುತ್ತದೆ.. ಇದಲ್ಲದೆ, ಅವರು ಹಣಕಾಸಿನ ನೆರವು ನೀಡುವಾಗ ಅನೇಕ ಆಸ್ತಿಗಳನ್ನು ಕಳೆದುಕೊಂಡರು. ಆರೆಂಜ್ ಸಿನಿಮಾದ ವೇಳೆ ಆಸ್ತಿ ಕಳೆದುಕೊಂಡು ರಸ್ತೆಗೆ ಬಿದ್ದಾಗ ಅಣ್ಣ ನಾಗಬಾಬುಗೆ ಆರ್ಥಿಕ ಸಹಾಯ ಮಾಡಿದ್ದರು. ಈ ವಿಷಯ ಇಷ್ಟವಾಗದೆ ಪವನ್ ಕಲ್ಯಾಣ್ ಜೊತೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿ ಹಬ್ಬಿತ್ತು. ಆಗ ಮಗಳು ಆಧ್ಯಾ ಕೂಡ ಜನಿಸಿದಳು. ಆದರೆ ಈ ಸುದ್ದಿಯ ಸತ್ಯಾಸತ್ಯತೆ ಯಾರಿಗೂ ತಿಳಿದಿಲ್ಲ. ಹೀಗಾಗಿ ಇಬ್ಬರು ಪತ್ನಿಯರನ್ನು ದೂರವಿಟ್ಟ ಪವನ್ ಕಲ್ಯಾಣ್ ತಮ್ಮಂತೆಯೇ ಯೋಚಿಸುವ ಅನ್ನಾ ಲೆಜಿನೋವಾ ಅವರನ್ನು ಮೂರನೇ ಮದುವೆಯಾದರು. ರಷ್ಯಾ ಮೂಲದ ಅನ್ನಾ ಪವನ್ ಕಲ್ಯಾಣ್ ಅವರಂತೆ ಸಾವಿರಾರು ಕೋಟಿ ಆಸ್ತಿಯನ್ನು ದಾನ ಮಾಡಿದ್ದಾರೆ. ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಅನ್ನಾ ಲೆಝಿನೋವಾ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪವನ್ ಕಲ್ಯಾಣ್ ಮೂರು ಮದುವೆಯಾಗಿ ಸುದ್ದಿಯಾಗಿದ್ದರು. ಸದ್ಯ ಅವರು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...