ವಿಚ್ಛೇದನದ ವದಂತಿ ನಡುವೆಯೇ ʼಈʼ ಕಾರಣಕ್ಕೆ ದುಬೈ ತಲುಪಿದ ಅಭಿಷೇಕ್-ಐಶ್ವರ್ಯ..! : ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳಿಂದ ಬಹಳ ಸಮಯದಿಂದ ಸುದ್ದಿಯಲ್ಲಿದ್ದಾರೆ. ಇಬ್ಬರ ನಡುವೆ ಯಾವುದೂ ಸರಿಯಿಲ್ಲ ಎಂಬ ವರದಿಗಳಿವೆ. ಇದೆಲ್ಲದರ ಮಧ್ಯೆ ದುಬೈ ತಲುಪಿರುವ ದಂಪತಿಗಳ ವೀಡಿಯೊ ವೈರಲ್ ಆಗುತ್ತಿದೆ. :ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ಸುದ್ದಿಯ ಬಗ್ಗೆ ಇಲ್ಲಿಯವರೆಗೆ ಮೌನ ವಹಿಸಿದ್ದಾರೆ... ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ವೇಳೆ ದುಬೈ ವಿಮಾನ ನಿಲ್ದಾಣದಿಂದ ದಂಪತಿಯ ವಿಡಿಯೋವೊಂದು ಹೊರಬಿದ್ದಿದೆ. ಇದನ್ನು ನೋಡಿದ ಕೆಲ ಅಭಿಮಾನಿಗಳು ಖುಷಿಪಟ್ಟರೆ, ಕೆಲವರು ಹಳೆಯದು ಎಂದು ಹೇಳುತ್ತಿದ್ದಾರೆ.. ಸದ್ಯ ವೈರಲ್‌ ಆಗುತ್ತಿರುವ ಈ ವೀಡಿಯೋದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಒಟ್ಟಿಗೆ ತುಂಬಾ ಸಂತೋಷವಾಗಿ ಹೊರಟಿದ್ದಾರೆ.. ಆದರೆ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಅಭಿಮಾನಿಗಳಿಗೆ ದೊಡ್ಡ ಶಾಕ್ ಕಾದಿತ್ತು. ಅದು ಹಳೆಯ ವಿಡಿಯೋ ಆಗಿದೆ.. ಇದನ್ನೂಓದಿ- ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿರುವ ಪ್ರಕಾರ ಅದು ಈ ವರ್ಷದ ಫೆಬ್ರವರಿಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಆಗಿದೆ.. ಆ ಸಮಯದಲ್ಲಿ ಕೂಡ, ವಿಚ್ಛೇದನದ ಸುದ್ದಿಯ ನಡುವೆ ದಂಪತಿಗಳು ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ವದಂತಿಗಳಿವೆ. ಸದ್ಯ ಈ ಜೋಡಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದಾಗ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ಸುದ್ದಿ ಹೊರಬಿದ್ದಿತ್ತು. ಈ ಮದುವೆಯಲ್ಲಿ ಅಭಿಷೇಕ್ ತಮ್ಮ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದರು. ಮಗಳು ಆರಾಧ್ಯ ಅವರೊಂದಿಗೆ ಐಶ್ವರ್ಯಾ ರೈ ಆಗಮಿಸಿದ್ದರು.. ಇದೆಲ್ಲದರ ಹೊರತಾಗಿ, ನಟ ವಿಚ್ಛೇದನದ ಪೋಸ್ಟ್ ಅನ್ನು ಲೈಕ್ ಮಾಡಿದ್ದು ಈ ವದಂತಿಗಳಿಗೆ ಪುಷ್ಟಿ ನೀಡಿತು. ಆದರೆ, ಇಲ್ಲಿಯವರೆಗೂ ದಂಪತಿ ಈ ಬಗ್ಗೆ ಮೌನ ವಹಿಸಿದ್ದಾರೆ. ಇದನ್ನೂಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...