ಸಲ್ಮಾನ್ ಖಾನ್ ಮದುವೆಯಾಗದಿರಲು ಆಕೆಯೇ ಕಾರಣ... ಸತ್ಯ ಬಿಚ್ಚಿಟ್ಟ ಭಾಯಿಜಾನ್ ತಂದೆ! : ಸಲ್ಮಾನ್ ಖಾನ್ ಮದುವೆ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಸಲ್ಮಾನ್ ಖಾನ್ ಜೀವನದಲ್ಲಿ ಅದೆಷ್ಟೋ ಹುಡುಗಿಯರು ಬಂದು ಹೋಗಿದ್ದಾರೆ.. : ಸಲ್ಮಾನ್ ಖಾನ್ ಡೇಟಿಂಗ್‌ ಪಟ್ಟಿಯಲ್ಲಿ.. ಸಂಗೀತಾ ಬಿಜಲಾನಿ, ಐಶ್ವರ್ಯಾ ರೈ, ಕತ್ರಿನಾ ಕೈಫ್ ರಂತಹ ಸ್ಟಾರ್ ಹೀರೋಯಿನ್ ಗಳಿದ್ದಾರೆ.. ಆದರೆ ಒಬ್ಬಳಿಂದಾಗಿ ಸಲ್ಮಾನ್ ಖಾನ್ ತಮ್ಮ ಜೀವನವನ್ನೇ ನಾಶ ಮಾಡಿಕೊಂಡಿದ್ದಾರೆ ಎಂದು ಸಲ್ಮಾನ್ ತಂದೆ ಹೇಳಿದ್ದಾರೆ. ಬಾಲಿವುಡ್ ಮಸಲ್ ಹೀರೋ ಸಲ್ಮಾನ್ ಖಾನ್. ಸಿನಿಮಾ ಬಿಟ್ಟರೆ ವೈಯಕ್ತಿಕ ಬದುಕಿನಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. 58ರ ಹರೆಯದಲ್ಲೂ ಸಲ್ಮಾನ್ ಖಾನ್ ಏಕಾಂಗಿಯಾಗಿ ಬದುಕುತ್ತಿದ್ದಾರೆ. ಸಲ್ಮಾನ್ ಖಾನ್ ಮದುವೆ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಆ ಒಬ್ಬ ಮಹಿಳಿಯಿಂದಲೇ ಸಲ್ಮಾನ್‌ ಖಾನ್‌ ಜೀವನದಲ್ಲಿ ಒಂಟಿಯಾಗಿದ್ದಾರೆ ಎಂದು ಅವರ ತಂದೆ ಹೇಳಿದ್ದಾರೆ. ಇದನ್ನೂ ಓದಿ- ಮಗ ಸಲ್ಮಾನ್‌ ಖಾನ್‌ ಮದಜವೆ ಬಗ್ಗೆ ಮಾತನಾಡಿದ ಸಲೀಂ ಖಾನ್ 'ಸಲ್ಮಾನ್ ಖಾನ್ ಮದುವೆಯಾಗಲು ಸಾಧ್ಯವಾಗಲಿಲ್ಲ ಏಕೆಂದರೆ ಸಲ್ಮಾನ್ ಪ್ರತಿ ಹುಡುಗಿಯಲ್ಲೂ ತನ್ನ ತಾಯಿಯನ್ನು ಕಾಣಲು ಪ್ರಯತ್ನಿಸಿದ.. ಅಂದರೇ ಸಲ್ಮಾನ್ ತನ್ನ ಹೆಂಡತಿಯನ್ನು ತಾಯಿಯಂತೆ ಪ್ರೀತಿಸಬೇಕೆಂದು ಬಯಸಿದ್ದ.. ಆದರೆ ಅವನ ಯಾವ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ.' ಈ ವಿಷಯವನ್ನು ಸಲ್ಮಾನ್ ತಂದೆ ಸಲೀಂ ಖಾನ್ ವಿವರಿಸಿದ್ದಾರೆ.. ಸಲ್ಮಾನ್ ಖಾನ್ ಅನೇಕ ನಟಿಯರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಮೊದಲ ಹೆಸರು ನಟಿ ಸಂಗೀತಾ ಬಿಜಲಾನಿ. ಸಲ್ಮಾನ್ ಖಾನ್ ಸಂಗೀತಾ ಬಿಜಲಾನಿ ಅವರನ್ನು ವರಿಸಲಿದ್ದಾರೆ ಎಂಬ ವರದಿಗಳೂ ಬಂದಿದ್ದವು.. ಆದರೆ ಅವರ ಮದುವೆ ಆಗಲಿಲ್ಲ. ನಂತರ ನಟಿ ಐಶ್ವರ್ಯಾ ರೈ ಅವರೊಂದಿಗೆ ಡೇಟ್ ಮಾಡಿದರು. ‘ಹಮ್ ದಿಲ್ ಚುಕೇ ಸನಮ್’ ಸಿನಿಮಾದಲ್ಲಿ ಐಶ್ವರ್ಯಾ-ಸಲ್ಮಾನ್ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಆ ಬಳಿಕ ಇಬ್ಬರ ಸಂಬಂಧ ಚರ್ಚೆಗೆ ಗ್ರಾಸವಾಯಿತು. ಆದರೆ ಆ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...