‘ಅಪ್ಪಂಗೆ ಹುಟ್ಟಿದ್ರೆ ತೊಡೆತಟ್ಟಿ ಬಾರೋ’... ಕಿಚ್ಚನ ಜನ್ಮದಿನದಂದು ಮ್ಯಾಕ್ಸ್ ಮಾಸ್ ಸಾಂಗ್ ಔಟ್‌! : ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದ ಮಾಸ್‌ ಸಾಂಗ್‌ ರಿಲೀಸ್‌ ಆಗಿದೆ. ಸುದೀಪ್‌ ಮಾಸ್‌ ಲುಕ್‌ ಕಂಡು ಫ್ಯಾನ್ಸ್‌ ದಿಲ್‌ ಖುಷ್‌ ಆಗಿದೆ. :ಇಂದು ನಟ ಸುದೀಪ್‌ ಹುಟ್ಟುಹಬ್ಬ. ಅಭಿಮಾನಿಗಳಿಗೆ ʻಕಿಚ್ಚೋತ್ವವʼ. ಕಿಚ್ಚನ ಜನ್ಮದಿನವನ್ನು ಹಬ್ಬದಂತೆ ಸೆಲಿಬ್ರೇಟ್‌ ಮಾಡುತ್ತಿರುವ ಫ್ಯಾನ್ಸ್‌ಗೆ ಇಂದು ಫುಲ್‌ ಖುಷ್‌ ಆಗಿದೆ. ಈ ಸ್ಪೆಷಲ್‌ ಡೇ ಗೆ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದ ಮಾಸ್‌ ಸಾಂಗ್‌ ರಿಲೀಸ್‌ ಆಗಿದೆ. ಸುದೀಪ್‌ ಮಾಸ್‌ ಲುಕ್‌ ಕಂಡು ಫ್ಯಾನ್ಸ್‌ ದಿಲ್‌ ಖುಷ್‌ ಆಗಿದೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಗ್ಗೆ ಫ್ಯಾನ್ಸ್ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ರಿಲೀಸ್ ಆಗಲೆಂದು ಕಾದು ಕುಳಿತಿದ್ದಾರೆ. ಸುದೀಪ್ ಜನ್ಮದಿನದ ಪ್ರಯುಕ್ತ ‘ಮ್ಯಾಕ್ಸ್’ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ‘ಮ್ಯಾಕ್ಸಿಮಮ್ ಮಾಸ್’ ಸಾಂಗ್ ಈ ದಿನ ರಿಲೀಸ್‌ ಆಗಿದೆ. ಇದನ್ನೂ ಓದಿ: ‘ಅಪ್ಪಂಗೆ ಹುಟ್ಟಿದ್ರೆ ತೊಡೆತಟ್ಟಿ ಬಾರೋ’... ಎಂಬ ಸಾಲಿನಿಂದ ಶುರುವಾಗುವ ಈ ಹಾಡು ಸಖತ್‌ ಪಂಚಿಂಗ್‌ ಲೈನ್‌ಗಳಿಂದ ಕೂಡಿದೆ. ‘ಮ್ಯಾಕ್ಸಿಮಮ್ ಮಾಸ್’ ಹಾಡನ್ನು ನಿರ್ದೇಶಕ ಅನೂಪ್ ಭಂಡಾರಿ ಬರೆದಿದ್ದು, ಖ್ಯಾತ ಸಂಗೀತ ಸಂಯೋಜಕ ಬಿ.ಅಜನೀಶ್ ಲೋಕನಾಥ್ ಮ್ಯೂಸಿಕ್ ಕೊಟ್ಟಿದ್ದಾರೆ. ಚೇತನ್ ಗಂಧರ್ವ ಈ ಹಾಡನ್ನು ಹಾಡಿದ್ದು, ಎಂಸಿ ಬಿಜ್ಜು ರ‍್ಯಾಪ್ ಮಾಡಿದ್ದಾರೆ. ‘ಸರೆಗಮ ಕನ್ನಡ’ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ರಿಲೀಸ್‌ ಆಗಿದ್ದು, ಸಾಕಷ್ಟು ಮೆಚ್ಚುಗೆ ಗಳಿಸುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...